Sunday, December 22, 2024

ತುಮಕೂರಿನಲ್ಲಿ ಬಿಸಿಯೂಟ ಸೇವಿಸಿ 30ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ

ತುಮಕೂರು : ಶಾಲೆಯ ಬಿಸಿಯೂಟ ಸೇವಿಸಿ ಇಬ್ಬರು ಶಿಕ್ಷಕರು ಸೇರಿ 30ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥಗೊಂಡಿರುವಂತಹ ಘಟನೆ ತುಮಕೂರಿನ ಸೀನಪ್ಪನಹಳ್ಳಿ ಅಂಬಾಭವಾನಿ ಅನುದಾನಿತ ಪ್ರೌಢಶಾಲೆಯಲ್ಲಿ ನಡೆದಿದೆ.

ನಿನ್ನೆ ಮಧ್ಯಾಹ್ನ ಶಾಲೆಯಲ್ಲಿ ವಿದ್ಯಾರ್ಥಿಗಳು ಮೊಸರನ್ನ ಸೇವಿಸಿದ್ದಾರೆ. ಬಳಿಕ ರಾತ್ರಿ ಮಕ್ಕಳು ಮನೆಗೆ ಹೋದಾಗ ಆರೋಗ್ಯದಲ್ಲಿ ಏರುಪೇರು ಕಂಡುಬಂದಿದೆ. ರಾತ್ರೋರಾತ್ರಿ ಅಸ್ವಸ್ಥ ಮಕ್ಕಳನ್ನು ಪೋಷಕರು ಕುಣಿಗಲ್ ತಾಲೂಕಿನ ಹಿಪ್ಪಾಡಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಗಿದೆ.

10 ಮಕ್ಕಳಿಗೆ ಹೆಚ್ಚಿನ ಚಿಕಿತ್ಸೆಗಾಗಿ ಕುಣಿಗಲ್ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಸ್ಥಳಕ್ಕೆ ಕುಣಿಗಲ್ ಟಿಹೆಚ್​ಒ ಡಾ. ಮರಿಯಪ್ಪ, ಹಾಗೂ ಆರೋಗ್ಯಾಧಿಕಾರಿ ಬೋರೆಗೌಡ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಅಸ್ವಸ್ಥ ವಿದ್ಯಾರ್ಥಿಗಳಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದ್ದು, ಸದ್ಯ ಯಾವುದೇ ತೊಂದರೆ ಇಲ್ಲ.

RELATED ARTICLES

Related Articles

TRENDING ARTICLES