Monday, December 23, 2024

ರಜೆಗಾಗಿ 1ನೇ ಕ್ಲಾಸ್ ವಿದ್ಯಾರ್ಥಿಯನ್ನೇ ಕೊಂದ 8ನೇ ಕ್ಲಾಸ್ ವಿದ್ಯಾರ್ಥಿ

ಪಶ್ಚಿಮ ಬಂಗಾಳ : ಆತ ಒಂದನೇ ತರಗತಿಯಲ್ಲಿ ಓದುತ್ತಿದ್ದ ವಿದ್ಯಾರ್ಥಿ. ಆದರೆ, ದಿಢೀರನೆ ಕಾಣೆಯಾಗಿದ್ದ. ಪೋಷಕರು ಮಗನಿಗಾಗಿ ಹುಡುಕಾಟ ನಡೆಸಿದ ಜಾಗವಿಲ್ಲ. ದುರಾದೃಷ್ಟವಶಾತ್ ಆ ಬಾಲಕ ಪತ್ತೆಯಾಗಿದ್ದು ಶವವಾಗಿ!

ಎಂಟನೇ ತರಗತಿ ವಿದ್ಯಾರ್ಥಿಯೊಬ್ಬ ಶಾಲಾ ರಜೆಗಾಗಿ ಒಂದನೇ ತರಗತಿಯ ವಿದ್ಯಾರ್ಥಿಯನ್ನು ಹತ್ಯೆಗೆದ್ದಿದ್ದಾನೆ. ಪಶ್ಚಿಮ ಬಂಗಾಳದ ಪುರುಲಿಯಾದಲ್ಲಿ ಈ ದುಷ್ಕೃತ್ಯ ನಡೆದಿದೆ.

ಒಂದನೇ ತರಗತಿ ವಿದ್ಯಾರ್ಥಿ ಜನವರಿ 30ರಂದು ನಾಪತ್ತೆಯಾಗಿದ್ದನು. ಎರಡು ದಿನಗಳ ಬಳಿಕ ಕೆರೆಯಲ್ಲಿ ಆ ಬಾಲಕನ ಶವ ಪತ್ತೆಯಾಗಿತ್ತು. ತಲೆಗೆ ಪೆಟ್ಟು ಬಿದ್ದಿರುವುದು ಮರಣೋತ್ತರ ಪರೀಕ್ಷೆಯ ವರದಿಯಿಂದ ತಿಳಿದುಬಂದಿತ್ತು. ಇದು ಅನುಮಾನಕ್ಕೆ ಎಡೆಮಾಡಿಕೊಟ್ಟಿತ್ತು.

ವಿಷಯ ತಿಳಿದು ದಂಗಾದ ಖಾಕಿ

ಬಾಲಕನ ಶವ ಪತ್ತೆ ಬಳಿಕ ಪೋಷಕರು ಪೊಲೀಸ್​ ಠಾಣೆಗೆ ದೂರು ನೀಡಿದ್ದರು. ತನಿಖೆ ಮುಂದುವರಿಸಿದ ಪೊಲೀಸರಿಗೆ ಅಚ್ಚರಿಯೊಂದು ಕಾದಿತ್ತು. ವಾರದ ಹಿಂದೆ ಹಾಸ್ಟೆಲ್​ಗೆ ದಾಖಲಾಗಿದ್ದ 8ನೇ ತರಗತಿ ವಿದ್ಯಾರ್ಥಿಯೇ ಬಾಲಕನ್ನು ಕೊಂದಿರುವುದು ಬೆಳಕಿಗೆ ಬಂದಿದೆ.

ವಿದ್ಯಾರ್ಥಿ ಪೋಷಕರ ಆಕ್ರಂದನ

ಮನೆಗೆ ತೆರಳಲು ರಜೆ ಸಿಗುತ್ತದೆ ಎಂದು ಒಂದನೇ ತರಗತಿ ವಿದ್ಯಾರ್ಥಿಯನ್ನು ಹತ್ಯೆ ಮಾಡಿರುವುದಾಗಿ 8ನೇ ತರಗತಿ ವಿದ್ಯಾರ್ಥಿ ಒಪ್ಪಿಕೊಂಡಿದ್ದಾನೆ. ಇತ್ತ, ಮಗನನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲುಮುಟ್ಟಿದೆ.

RELATED ARTICLES

Related Articles

TRENDING ARTICLES