Wednesday, January 22, 2025

ಓಲಾ, ಊಬರ್, ಟ್ಯಾಕ್ಸಿಗಳ ಕಳ್ಳಾಟಕ್ಕೆ ಸಾರಿಗೆ ಇಲಾಖೆಯಿಂದ ಬ್ರೇಕ್: ಏಕರೂಪ ದರ ಅಸ್ತ್ರ ಪ್ರಯೋಗ

ಬೆಂಗಳೂರು: ಓಲಾ, ಊಬರ್, ಟ್ಯಾಕ್ಸಿಗಳ ಕಳ್ಳಾಟಕ್ಕೆ ಬ್ರೇಕ್ ಹಾಕಲು ಸಾರಿಗೆ ಇಲಾಖೆ ಹೊಸದೊಂದು ಅಸ್ತ್ರ ಪ್ರಯೋಗಕ್ಕೆ ಮುಂದಾಗಿದೆ.‌

ಪೀಕ್ ಹವರ್​​ನಲ್ಲಿ ಡಬಲ್ ರೇಟ್, ಮಳೆ ಬಂದ್ರೆ ಬೇಕಾಬಿಟ್ಟಿ ದರ ಏರಿಕೆ, ಈಗಿದ್ದ ರೇಟ್ ಮರುಕ್ಷಣದಲ್ಲಿ ದುಪ್ಪಟಾಗಿರುತ್ತೆ. ಇದು ಬೆಂಗಳೂರಿನ ಓಲಾ-ಊಬರ್, ರ್ಯಾಪಿಡೋ ಸೇರಿದಂತೆ ಟ್ಯಾಕ್ಸಿ ಆ್ಯಪ್ ಗಳ ಹಗಲು ದರೋಡೆಯ ಕಥೆ. ಹೀಗೆ ಮನಸಿಗೆ ಬಂದಂತೆ ಮಾಡ್ತಿರುವ ಸುಲಿಗೆಗೆ ಜನರು ರೋಸಿ ಹೋಗಿದ್ದರು. ದೂರು ನೀಡಿ‌ ನೀಡಿ ಅಸಹಾಯಕಾರಾಗಿದ್ದರು.

ಇದನ್ನೂ ಓದಿ: ಬೆಂಗಳೂರು ಶಿಕ್ಷಕರ ಕ್ಷೇತ್ರದ ಚುನಾವಣೆ; ಉಸ್ತುವಾರಿಗಳ ಪಟ್ಟಿ ಬಿಡುಗಡೆಗೊಳಿಸಿದ HDK

ಕೊನೆಗೂ‌ ಸಾರಿಗೆ ಇಲಾಖೆ ಎಚ್ಚೆತ್ತುಕೊಂಡು ಈ ಕಳ್ಳಾಟಕ್ಕೆ ಫುಲ್ ಸ್ಟಾಪ್ ಹಾಕಲು ಮಾಸ್ಟರ್ ಪ್ಲಾನ್‌ ಮಾಡಿದೆ. ಪೀಕ್ ಅವರ್​ನಲ್ಲಿ ಬೇಕಾಬಿಟ್ಟಿ ದರ ಏರಿಸಿ ಸುಲಿಗೆ ಮಾಡುತ್ತಿದ್ದ ಓಲಾ, ಊಬರ್, ರ್ಯಾಪಿಡೋ ಸೇರಿ ಟ್ಯಾಕ್ಸಿ ಆ್ಯಪ್​ಗಳಿಗೆ ಬ್ರೇಕ್ ಹಾಕಲು ಸಾರಿಗೆ ಇಲಾಖೆ ಮುಂದಾಗಿದೆ. ಸಿಲಿಕಾನ್‌ ಸಿಟಿ ಸೇರಿದಂತೆ ರಾಜ್ಯಾದ್ಯಂತ ಟ್ಯಾಕ್ಸಿ ಪ್ರಯಾಣ ಮತ್ತು ಸಾಗಾಣಿಕೆ ದರಗಳನ್ನು ಪರಿಷ್ಕರಣೆ ಮಾಡಿ ಸಾರಿಗೆ ಇಲಾಖೆ ಆದೇಶ ಹೊರಡಿಸಿದೆ.

RELATED ARTICLES

Related Articles

TRENDING ARTICLES