Sunday, December 22, 2024

ದೇಶ ವಿಭಜನೆ ಹೇಳಿಕೆ: ಸಂಸದ ಡಿಕೆ ಸುರೇಶ್​ ನಿವಾಸದ ಎದುರು ಬಿಜೆಪಿ ಪ್ರತಿಭಟನೆ!

ಬೆಂಗಳೂರು: ಸಂಸದ ಡಿಕೆ ಸುರೇಶ್​ ದೇಶ ವಿಭಜನೆ ಹೇಳಿಕೆ ಕೊಟ್ಟೊದ್ದಾರೆ ಎಂದು ಆರೋಪಿಸಿ ಬಿಜೆಪಿ ಪಕ್ಷದ ವತಿಯಿಂದ ಡಿಸಿಎಂ ಡಿ.ಕೆ ಶಿವಕುಮಾರ್ ಮತ್ತು ಸಂಸದ ಡಿ.ಕೆ ಸುರೇಶ್​ ಮನೆಯ ಮುಂದೆ ಪ್ರತಿಭನಟನೆಗೆ ಮುಂದಾಗಿದ್ದಾರೆ.

ನಗರದ ಸದಾಶಿವ ನಗರದಲ್ಲಿರುವ ಡಿಕೆ ಶಿವಕುಮಾರ್ ಹಾಗು ಡಿಕೆ ಸುರೇಶ್ ಮನೆಗಳ ಮುಂದೆ ಪ್ರತಿಭಟನಾಕಾರರು ದಿಕ್ಕಾರ ಕೂಗುತ್ತಾ ಆಕ್ರೋಶ ಹೊರಹಾಕಿದ್ದಾರೆ. ಈ ವೇಳೆ ಪೊಲೀಸರು ಹಾಗು ಪ್ರತಿಭಟನಕಾರರ ಮಧ್ಯೆ ಮಾತಿನ ಚಕಮಕಿ ನಡೆದಿದ್ದು ಸ್ಥಳದಲ್ಲಿ ನೂಕು ನುಗ್ಗಲು ಉಂಟಾಗಿದೆ.

ಇದನ್ನೂ ಓದಿ: ಶಾಲೆಗೆ ಬಾಂಬ್ ಬೆದರಿಕೆ ; ದೂರು ದಾಖಲು!

ದೇಶದ್ರೋಹಿ ಡಿ.ಕೆ ಸುರೇಶ್​, ದಿಕ್ಕಾರ..ದಿಕ್ಕಾರ.. ಡಿಕೆಶಿವಕುಮಾರ್​ ಗೆ ದಿಕ್ಕಾರ ಎಂದು ಪ್ರತಿಭಟನಾಕಾರರು ಕೂಗುತ್ತಿದ್ದಂತೆ ಪೊಲೀಸರು ಪ್ರತಿಭಟನಾಕಾರರನ್ನು ವಶಕ್ಕೆ ಪಡೆದು ಬೇರೆಡೆಗೆ ಸ್ಥಳಾಂತರಿಸಿದ್ದಾರೆ.

ನನ್ನ ಹೇಳಿಕೆಯನ್ನು ಬಿಜೆಪಿಯವರು ತಿರುಚಿದ್ದಾರೆ:

ಈ ಕುರಿತು ಸದಾಶಿವನಗರದ ನಿವಾಸದಲ್ಲಿ ಪ್ರತಿಕ್ರಿಯೆ ನೀಡಿದ ಸಂಸದ ಡಿ.ಕೆ ಸುರೇಶ್​, ದೇಶವಿಭಜನೆ ಬಗ್ಗೆ ನಾನು ಯಾವುದೇ ಹೇಳಿಕೆಯನ್ನು ಕೊಟ್ಟಿಲ್ಲ, ನನ್ನ ಹೇಳಿಕೆಯನ್ನು ಬಿಜೆಪಿಯವರು ತಿರುಚಿದ್ದಾರೆ. ಬಿಜೆಪಿಯವರಿಗೆ ದೇವರು ಒಳ್ಳೆಯದನ್ನು ಮಾಡಲಿ ಎಂದು ಅವರು ಪ್ರತಿಕ್ರಿಯೆ ನೀಡಿದರು.

RELATED ARTICLES

Related Articles

TRENDING ARTICLES