Wednesday, January 22, 2025

ಬಿಜೆಪಿಯವರ ತಪ್ಪಿಗೆ ನಾನು ರಾಜೀನಾಮೆ ನೀಡಬೇಕಾ?: ಪ್ರಿಯಾಂಕ್ ಖರ್ಗೆ!

ಬೆಂಗಳೂರು: ಕಿಯೋನಿಕ್ಸ್ ಹಗರಣದಲ್ಲಿ ಯಾರೆಲ್ಲ ಭಾಗಿಯಾಗಿದ್ದಾರೆ ಅವರೇ ಹೇಳಬೇಕು. 3% ಆಡಿಟ್​​ನಲ್ಲಿ 430 ಕೋಟಿ ಅಕ್ರಮ ಆಗಿದೆ ಎಂದು ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಅವರು, ಕಿಯೋನಿಕ್ಸ್​​ನಲ್ಲಿ ಪೇಮೆಂಟ್ ಆಗ್ತಾ ಇಲ್ಲ. ದಾಖಲೆ ಕೊಟ್ರು ಹಣ ಕೊಡ್ತಾ ಇಲ್ಲ. ದಾಖಲೆಗಳನ್ನು ಇಲಾಖೆಯವರು ಸಂಗ್ರಹ ಮಾಡ್ತಾ ಇದ್ದಾರೆ ಅಂತಾ ಕೆಲವರು ಬಂದು ಹೇಳಿದ್ದರು. ಬಿಜೆಪಿ ನಾಯಕರು ಇದಕ್ಕೆ ಉತ್ತರ ನೀಡಬೇಕು. ಎಲ್ಲವೂ ಬಿಜೆಪಿ ಸರ್ಕಾರದಲ್ಲೆ ಆಗಿರುವುದು.

ಇದನ್ನೂ ಓದಿ: ಹಾಸನ, ಮಂಡ್ಯ ಲೋಕಸಭಾ ಟಿಕೆಟ್ ಬಿಜೆಪಿಗೆ ಸಿಗಲಿದೆ: ಪ್ರೀತಮ್ ಗೌಡ

ಕಳೆದ ನಾಲ್ಕು ವರೆ ವರ್ಷದಲ್ಲಿ ಆದಂತಹ ಪ್ರೊಕ್ಯೂರ್ಮೆಂಟ್​ ಬಗ್ಗೆ ನಾವು ಅದನ್ನು ಮುಂದಿಟ್ಟುಕೊಂಡು ಆಡಿಟ್​ ಮಾಡಿಸಿದಾಗ ಮೇಲ್ನೋಟಕ್ಕೆ 400 ಕೋಟಿಗಳಿಗಿಂದ ಹೆಚ್ಚು ದುಡ್ಡಿನ ಅವ್ಯವಹಾರ ಕಂಡುಬಂದಿದೆ. ಇದರ ಸಮಗ್ರ ತನಿಖೆಯಾಗಬೇಕು, ಇದರ ಹಿಂದೆ ಯಾರಿದ್ದಾರೆ ಎನ್ನುವ ಬಗ್ಗೆ ಅಧಿಕಾರಿಗಳಿರಬಹುದು ರಾಜಕಾರಣಿಗಳಿರಬಹುದು ಅದೆಲ್ಲವನ್ನು ಕೂಡ ಇಂದು ನಿವೃತ್ತ ಐಎಎಸ್​ ಅಧಿಕಾರಿಗಳಿಂದ ಆಡಿಟ್​ ಮಾಡಿಸಿ ತನಿಖೆಯನ್ನು ಮಾಡಿಸಲು ತೀರ್ಮಾನಿಸಿದ್ದೇವೆ ಎಂದರು.

ಯಾರದ್ದೋ ದುಡ್ಡು ಬಿಜೆಪಿ ಜಾತ್ರೆ ಮಾಡಿದ್ದಾರೆ. ಈ ಹಣದಲ್ಲಿ ಆಪರೇಷನ್ ಕಮಲ ಮಾಡಿದ್ದಾರೆ. ಈಗ ಯಾಕೆ ಏನೂ ಮಾಡ್ತಾ ಇಲ್ಲ. ಯಾವ ಯಾವ ವರ್ಷದಲ್ಲಿ ಏನ್ ಆಗಿದೆ ಎಂಬ ಕ್ಲಾರಿಟಿ ಇದೆಯಾ..? ಅವರು ಮಾಡಿದ ತಪ್ಪಿಗೆ ನಾನು ರಾಜೀನಾಮೆ ನೀಡಬೇಕಾ…? ಯಾಕೆ ಲೋಪಗಳು ಆಗಿವೆ ಅದನ್ನ ತನಿಖೆ ಮಾಡಬೇಕು ಎಂದರು.

RELATED ARTICLES

Related Articles

TRENDING ARTICLES