Wednesday, August 27, 2025
Google search engine
HomeUncategorizedಪವರ್​ ಟಿವಿ ಮುಡಿಗೆ ಮತ್ತೊಂದು ಪ್ರಶಸ್ತಿಯ ಗರಿ: ಸಂಪಾದಕರಾದ ಮನೋಜ್ ಕುಮಾರ್​ಗೆ ಪ್ರಶಸ್ತಿ

ಪವರ್​ ಟಿವಿ ಮುಡಿಗೆ ಮತ್ತೊಂದು ಪ್ರಶಸ್ತಿಯ ಗರಿ: ಸಂಪಾದಕರಾದ ಮನೋಜ್ ಕುಮಾರ್​ಗೆ ಪ್ರಶಸ್ತಿ

ದಾವಣಗೆರೆ : 2022-23 ನೇ ಸಾಲಿನಲ್ಲಿ ಮಾದ್ಯಮ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಿದ ವಿದ್ಯುನ್ಮಾನ ಮಾಧ್ಯಮ ಟಿ.ವಿ ವಿಭಾಗದಿಂದ ಪವರ್​ ಟಿವಿ ಸಂಪಾದಕರಾದ ಮನೋಜ್ ಕುಮಾರ್ ರಾಚಪ್ಪ ಅವರಿಗೆ ವಿಧಾನ ಪರಿಷತ್​ ಸಭಾಪತಿ ಬಸವರಾಜ ಹೊರಟ್ಟಿಯವರು ಪ್ರಶಸ್ತಿ ಪ್ರಧಾನ ಮಾಡಿ ಸನ್ಮಾನಿಸಿದರು.

ದಾವಣಗೆರೆಯ ಶಾಮನೂರು ಶಿವಶಂಕರಪ್ಪ ಪಾರ್ವತಮ್ಮ ಕಲ್ಯಾಣ ಮಂಟಪದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಆಯೋಜನೆ ಮಾಡಲಾಗಿದ್ದ 38ನೇ ರಾಜ್ಯ ಮಟ್ಟದ ಸಮ್ಮೇಳನದ ಸಮಾರೋಪ ಸಮಾರಂಭದವಾದ ಇಂದು ಪವರ್ ಟಿ.ವಿ ಸಂಪಾದಕಾರದ ಮನೋಜ್​ ಕುಮಾರ್ ರಾಚಪ್ಪ ಅವರಿಗೆ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ಇವರೊಂದಿಗೆ ಕಾರ್ಯಕ್ರಮದಲ್ಲಿ ಹರೀಶ್ ನಾಗರಾಜ್,
ನವಿತಾ ಜೈನ್, ರಾಚಪ್ಪ, ದಶರಥ ಸಾವೂರು, ಮೋಹನ್ ರಾಜ್ ಸೇರಿದಂತೆ 74 ಮಂದಿ ಪತ್ರಕರ್ತರಿಗೆ ವಿಧಾನಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ , ಸಂಸದ ಜಿ ಎಂ ಸಿದ್ದೇಶ್ವರ್ ಅವರು ಪ್ರಶಸ್ತಿ ಪ್ರದಾನ ಮಾಡಿದರು.

ಇದನ್ನೂ ಓದಿ: ಬಿಜೆಪಿಯವರ ತಪ್ಪಿಗೆ ನಾನು ರಾಜೀನಾಮೆ ನೀಡಬೇಕಾ?: ಪ್ರಿಯಾಂಕ್ ಖರ್ಗೆ!

ಈ ಕಾರ್ಯಕ್ರಮದಲ್ಲಿ ಶಾಸಕರಾದ ಬಿ.ಪಿ ಹರೀಶ್, ಕೆ.ಎಸ್ ಬಸವಂತಪ್ಪ, ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಸೇರಿದಂತೆ ರಾಜ್ಯದ ಪತ್ರಕರ್ತರು ಭಾಗಿಯಾಗಿದ್ದರು.

ಕಲ್ಪತರು ನಾಡಿಗೆ 39ನೇ ರಾಜ್ಯ ಮಟ್ಟದ ಪತ್ರಕರ್ತರ ಸಮ್ಮೇಳನ ಆತಿಥ್ಯ:

ಕಾರ್ಯ ನಿರತ ಪತ್ರಕರ್ತರ ಸಂಘದ 39ನೇ ರಾಜ್ಯಮಟ್ಟದ ಸಮ್ಮೇಳನದ ಆತಿಥ್ಯವನ್ನು ಕಲ್ಪತರು ನಾಡು ತುಕೂರಿನಲ್ಲಿ ನಡೆಸಲು ಕಾನಿಪಸಂ ಪ್ರತಿನಿಧಿಗಳ ಸಭೆಯಲ್ಲಿ ತೀರ್ಮಾನಿಸಲಾಯಿತು.

ದಾವಣಗೆರೆಯಲ್ಲಿ ಇಂದು ನಡೆದ ಕಾ.ನಿ.ಪ.ಸಂ 38ನೇ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಈ ತೀರ್ಮಾನವನ್ನು ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಅವರು ತಿಳಿಸಿದರು.  ಮುಂದಿನ ಭಾರಿಯ ಸಮ್ಮೇಳನ ಆತಿಥ್ಯವನ್ನು ವಹಿಸಲು ತುಮಕೂರು, ಶಿವಮೊಗ್ಗ, ರಾಯಚೂರು ಜಿಲ್ಲೆಗಳು ಬೇಡಿಕೆ ಇಟ್ಟಿದ್ದವು. ಆದರೇ ಅಂತಿಮವಾಗಿ ಕಲ್ಪತರು ನಾಡು ತುಮಕೂರು ಜಿಲ್ಲೆಯಲ್ಲಿ ಮುಂದಿನ ಸಮ್ಮೇಳನ ನಡೆಸಲು ನಿರ್ಣಯ ಮಾಡಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments