Sunday, December 22, 2024

ರಾಜಸ್ಥಾನ ಮಾಜಿ ಸಿಎಂ ಅಶೋಕ್ ಗೆಹಲೋತ್‌ಗೆ ಹಂದಿ ಜ್ವರ,ಕೋವಿಡ್ ದೃಢ

ಜೈಪುರ: ರಾಜಸ್ಥಾನದ ಮಾಜಿ ಮುಖ್ಯಮಂತ್ರಿ ಅಶೋಕ್ ಗೆಹಲೋತ್ ಅವರಿಗೆ ಕೋವಿಡ್ 19 ಹಾಗೂ ಎಚ್1 ಎನ್ 1 ಜ್ವರ ಧೃಡಪಟ್ಟಿದೆ.

ಈ ಸಂಬಂಧ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಗೆಹಲೋತ್, ಬದಲಾಗುತ್ತಿರುವ ಹವಮಾನ ವೈಪರೀತ್ಯದಿಂದಾಗಿ ಜನರು ತಮ್ಮ ಆರೋಗ್ಯ ಕಡೆ ಹೆಚ್ಚು ಗಮನಹರಿಸಬೇಕೆಂದು ಸಲಹೆ ನೀಡಿದ್ದಾರೆ.

‘ಕಳೆದ ಕೆಲವು ದಿನಗಳಿಂದ ಜ್ವರದಿಂದ ಬಳಲುತ್ತಿದ್ದೆ. ಶುಕ್ರವಾರ(ಫೆ.2) ರಂದು ವೈದ್ಯರ ಸಲಹೆಯಂತೆ ಕೋವಿಡ್-19 ಪರೀಕ್ಷೆ ಮತ್ತು ಇತರೆ ರಕ್ತ ಪರೀಕ್ಷೆ ಮಾಡಿಸಿಕೊಂಡ ಬಳಿಕ ಕೋವಿಡ್ ಹಾಗೂ ಎಚ್ 1ಎನ್1 ಜ್ವರ ಧೃಡಪಟ್ಟಿದೆ.

ಮುಂದಿನ ಒಂದು ವಾರದವರೆಗೂ ಯಾರನ್ನೂ ಭೇಟಿ ಮಾಡಲು ಸಾಧ್ಯವಾಗುವುದಿಲ್ಲ’ ಎಂದು ಗೆಹಲೋತ್‌ ತಿಳಿಸಿದ್ದಾರೆ.

RELATED ARTICLES

Related Articles

TRENDING ARTICLES