Monday, December 30, 2024

ಪಾನಿಪುರಿ ಜಗಳ ಕೊಲೆಯಲ್ಲಿ ಅಂತ್ಯ!

ಕಲಬುರ್ಗಿ: ಪಾನಿಪುರಿ ಬಿಲ್ ವಿಚಾರಕ್ಕೆ ನಡೆದ ಜಗಳ ಓರ್ವ ವ್ಯಕ್ತಿಯ ಕೊಲೆಯಲ್ಲಿ ಅಂತ್ಯವಾದಂತಹ ಘಟನೆ ಕಲಬುರಗಿ ಜಿಲ್ಲೆ ಆಳಂದ ತಾಲೂಕಿನ ಧಂಗಾಪುರ ಗ್ರಾಮದಲ್ಲಿ ನಡೆದಿದೆ.

ಕಳೆದ ವರ್ಷ ಡಿಸೆಂಬರ್ ತಿಂಗಳ 27 ರಂದು ಗ್ರಾಮದಲ್ಲಿ ರಮೇಶ್ ಮತ್ತು ಪ್ರವೀಣ್ ಎಂಬುವರು ಪಾನಿಪುರಿ ತಿನ್ನಲು ಹೋಗಿದ್ದಾರೆ. ಪಾನಿಪುರಿ ತಿಂದಮೇಲೆ 40 ರೂಪಾಯಿ ಹಣವನ್ನ ಪ್ರವೀಣ್ ಫೋನ್‌ಪೇ ಮಾಡಲು ಹೋದಾಗ ನೆಟ್ವರ್ಕ್ ಸಮಸ್ಯೆಯಿಂದ ಫೋನ್‌ಪೇ ಆಗದ ಹಿನ್ನಲೆಯಲ್ಲಿ ರಮೇಶ್ ಹಣ ಕೊಡಲು ಮುಂದಾಗಿದ್ದಾನೆ.‌ ಈ ವೇಳೆ ನನಗೆ ನೀನು ಹಣ ಕೊಡಲು ಬರ್ತಿಯಾ ಅಂತಾ ಪ್ರವೀಣ್ ಪ್ರಶ್ನೆ ಮಾಡಿದ್ದಾನೆ. ಈ ವೇಳೆ ಇಬ್ಬರ ಮಧ್ಯೆ ಜಗಳ ವಿಕೋಪಕ್ಕೆ ಹೋದಾಗ ಭೀಮಶ್ಯಾ ಎಂಬಾತ ಬಿಡಿಸಲು ಹೋಗಿದ್ದಾನೆ. ಈ ವೇಳೆ ಜಗಳ ಬಿಡಿಸಲು ಬಂದ ಭೀಮಶ್ಯಾನಿಗೆ ಕಟ್ಟಿಗೆಯಿಂದ ಹೊಡೆದಿದ್ದನು.

ಇದನ್ನೂ ಓದಿ: ಬಾಲಿವುಡ್​ ಮಾಡೆಲ್‌ ಪೂನಂ ಪಾಂಡೆ ನಿಧನ

ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಭೀಮಶ್ಯಾನನ್ನ ನಗರದ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಇಂದು ಚಿಕಿತ್ಸೆ ಫಲಕಾರಿಯಾಗದೇ ಕಲಬುರಗಿ ಜಿಲ್ಲಾಸ್ಪತ್ರೆಯಲ್ಲಿ ಭೀಮಶ್ಯಾ ಸಾವನ್ನಪ್ಪಿದ್ದು, ಈ ಕುರಿತು ನಿಂಬರ್ಗಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES

Related Articles

TRENDING ARTICLES