Sunday, December 22, 2024

ನೀಲಿ, ಕೆನೆ ಬಣ್ಣದ ಸೀರೆಯುಟ್ಟು ನಿರ್ಮಲಾ ಸೀತಾರಾಮನ್‌ ಬಜೆಟ್ ಮಂಡನೆ

ನವದೆಹಲಿ: ಪ್ರತಿ ವರ್ಷ ಸುದ್ದಿಯಾಗುತ್ತಲೇ ಇದೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಧರಿಸಿರುವ ಸೀರೆ. 

ಹೌದು, ಈ ಬಾರಿಯ ಬಜೆಟ್​ ಮಂಡನೆಗೆ ನೀಲಿ-ಕೆನೆ​ ಬಣ್ಣದ ತಸರ್​ ರೇಷ್ಮೆ ಸೀರೆಯನ್ನು ಧರಿಸಿ ನಿರ್ಮಲಾ ಸೀತಾರಾಮನ್‌ ಮಿಂಚಿದ್ದಾರೆ.

ನಿರ್ಮಲಾ ಸೀತಾರಾಮನ್ ಅವರು ಭಾರತೀಯ ಸಾಂಪ್ರದಾಯಿಕ ವಸ್ತ್ರಗಳ ಮೇಲಿನ ಪ್ರೀತಿಗೆ ಹೆಸರುವಾಸಿಯಾಗಿದ್ದಾರೆ. ಸ್ಥಳೀಯ ಉದ್ಯಮಗಳ ಪ್ರೇರಣೆ ನೀಡುವ ಸಂದೇಶವನ್ನು ಪ್ರತಿ ಬಾರಿಯೂ ಕಳುಹಿಸುತ್ತಾರೆ.

ಇವರು ಕಳೆದ ವರ್ಷ ಸಚಿವರು ನವಲಗುಂದ ಕಸೂತಿಯೊಂದಿಗೆ ಕೈಯಿಂದ ನೇಯ್ದ ಕೆಂಪು ಇಳಕಲ್ ಸೀರೆ (ಕರ್ನಾಟಕದ ಇಳಕಲ್​ನ ಸೀರೆ) ಆಯ್ಕೆ ಮಾಡಿದ್ದರು. ಇದು ಧಾರವಾಡದ ಕ್ಷೇತ್ರದ ಸಂಸಚ ಸಂಸದೀಯ ವ್ಯವಹಾರ ಖಾತೆ ಸಚಿವರಾಗಿರುವ ಪ್ರಲ್ಹಾದ್ ಜೋಶಿ ಅವರ ಉಡುಗೊರೆಯಾಗಿತ್ತು.

ಬಜೆಟ್ ದಿನದಂದು ಅವರು ಆ ಸೀರೆಯನ್ನು ಧರಿಸುತ್ತಾರೆ ಎಂದು ನಿರ್ಧರಿಸಿದ ಬಳಿಕ ಅದರ ಮೇಲೆ ಕಸೂತಿ ಕೆಲಸ ಮಾಡಲಾಯಿತು.

ಅಚ್ಚು-ಮೆಚ್ಚಿನ ಸೀರೆಯುಟ್ಟು ಬಜೆಟ್ ಮಂಡನೆ

ಆಫ್-ವೈಟ್ ಅಥವಾ ಕ್ರೀಮ್ ಬಣ್ಣವು ಹಣಕಾಸು ಸಚಿವರಿಗೆ ಅಚ್ಚುಮೆಚ್ಚಿನದ್ದಾಗಿದೆ. ಏಕೆಂದರೆ ಅವರು ಆಗಾಗ್ಗೆ ಈ ಬಣ್ಣದ ವಸ್ತ್ರ ಧರಿಸುತ್ತಾರೆ. 2021 ರಲ್ಲಿ ನಿರ್ಮಲಾ ಅವರು ಕೆಂಪು ಮತ್ತು ಆಫ್-ವೈಟ್ ಪೋಚಂಪಳ್ಳಿ ಸೀರೆ ಧರಿಸಿದ್ದರು. 2022ರಲ್ಲಿ, ಸೀತಾರಾಮನ್ ತುಕ್ಕು ಹಿಡಿದ ಕಂದು ಬಣ್ಣದ ಬೊಮ್ಕೈ ಸೀರೆ ಆಯ್ಕೆ ಮಾಡಿದ್ದರು.

ಇದನ್ನೂ ಓದಿ: Budget 2024: ಮಧ್ಯಂತರ ಬಜೆಟ್ ಮತ್ತು ಪೂರ್ಣ ಬಜೆಟ್ ನಡುವಿನ ವ್ಯತ್ಯಾಸಗಳೇನು?

2020ರಲ್ಲಿ ಸಚಿವರು ತೆಳುವಾದ ನೀಲಿ ಅಂಚು ಹೊಂದಿರುವ ಸಂಪೂರ್ಣ ಹಳದಿ ರೇಷ್ಮೆ ಸೀರೆ ಧರಿಸಿದ್ದರು. 2019 ರಲ್ಲಿ ಅವರು ಚಿನ್ನದ ಅಂಚು ಹೊಂದಿರುವ ಗುಲಾಬಿ ಮಂಗಳಗಿರಿ ಸೀರೆಯನ್ನು ಧರಿಸಿದ್ದರು.

ಕೈಯಿಂದ ನೇಯ್ದ ಸೀರೆಗಳ ಹೊರತಾಗಿಯೂ ನಿರ್ಮಲಾ ಸೀತಾರಾಮನ್ ಅವರ ಇದುವರೆಗೆ ಸ್ಥಿರ ಬಜೆಟ್​ ಮಂಡಿಸಿದ್ದಾರೆ. ಅದಕ್ಕಿಂತಲೂ ಹೆಚ್ಚಾಗಿ ಅವರು ಕೊಂಡೊಯ್ಯುವ ಕೆಂಪು ಪುಸ್ತಕವೂ ಆಕರ್ಷಣೀಯವಾಗಿದೆ. 2021 ರಿಂದ, ನಿರ್ಮಲಾ ಸೀತಾರಾಮನ್ ಅವರು ಕೆಂಪು ಕವರ್​ನಲ್ಲಿ ಟ್ಯಾಬ್ಲೆಟ್ ತೆಗೆದುಕೊಂಡು ಬಜೆಟ್ ದಾಖಲೆಗಳನ್ನು ಓದುತ್ತಿದ್ದಾರೆ.

RELATED ARTICLES

Related Articles

TRENDING ARTICLES