ಯಾದಗಿರಿ : ರಸ್ತೆ ಹಾಗೂ ಮೂಲಭೂತ ಸೌಕರ್ಯಕ್ಕೆ ಆಗ್ರಹಿಸಿ ಯಾದಗಿರಿ ನಗರದಲ್ಲಿ ನಿವಾಸಿಗಳು ಮಂಗಳವಾರ ವಿಭಿನ್ನವಾಗಿ ಪ್ರತಿಭಟನೆ ನಡೆಸಿದರು.
ನಗರದ ವಾರ್ಡ ನಂ.1 ಮತ್ತು 2ರ ವ್ಯಾಪ್ತಿಯಲ್ಲಿ ಬರುವ ಅನಮೋಲ ಕಾಲೋನಿಯಲ್ಲಿ ರಸ್ತೆ, ಚರಂಡಿ, ವಿದ್ಯುತ್, ಬೀದಿದೀಪ ಸೇರಿದಂತೆ ಯಾವುದೇ ಮೂಲಭೂತ ಸೌಕರ್ಯಗಳಿಲ್ಲದೇ ನರಕಯಾತನೆ ಅನುಭವಿಸುತ್ತಿದ್ದಾರೆ.
ಇನ್ನು, ಚರಂಡಿ ನೀರು ವಾರ್ಡ್ನಲ್ಲಿ ಎಲ್ಲೆಂದರಲ್ಲಿ ನಿಂತ ಪರಿಣಾಮ ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಎದುರಾದ ಹಿನ್ನೆಲೆ ರೋಸಿಹೋದ ಅಲ್ಲಿನ ನಿವಾಸಿಗಳು ಸೊಳ್ಳೆ ಪರದೆಗಳನ್ನು ಮುಖಕ್ಕೆ ಹಾಕಿಕೊಂಡು ಪ್ರತಿಭಟನೆ ನಡೆಸಿದರು.
ಈ ಸುದ್ಧಿ ಓದಿದ್ದೀರಾ? : ಯಾದಗಿರಿಯಲ್ಲಿ ಕುಡಿಯುವ ನೀರಿಗೂ ಹಾಹಾಕಾರ, ರೊಚ್ಚಿಗೆದ್ದ ಮಹಿಳೆಯರು
ಮನವಿಗೂ ಸ್ಪಂದಿಸದ ಅಧಿಕಾರಿಗಳು
ಈ ಅನಮೋಲ್ ಕಾಲೋನಿಯಲ್ಲಿ 800ಕ್ಕೂ ಹೆಚ್ಚು ಜನರು ವಾಸಿಸುತ್ತಿದ್ದಾರೆ. ಎನ್.ಎ ಮತ್ತು ಟೌನ್ ಪ್ಲಾನಿಂಗ್ ಆಗಿರುವ ಬಡವಾಣೆ ಆಗಿದ್ದು, ಮೂಲಸೌಕರ್ಯಗಳು ಮರೀಚಿಕೆಯಾಗಿವೆ. ಸಾಕಷ್ಟು ಬಾರಿ ಮನವಿ ನೀಡಿದರೂ ನಗರಸಭೆ ಅಧಿಕಾರಿಗಳು ಸ್ಪಂದಿಸದ ಹಿನ್ನೆಲೆ, ಅಲ್ಲಿನ ನಿವಾಸಿಗಳು ವಾರ್ಡಿನಲ್ಲಿ ಮಚ್ಚರದಾನಿ ಹಾಗೂ ಮನವಿ ನೀಡಿದ ರಿಸಿವ್ಡ್ ಪ್ರತಿಗಳನ್ನು ಪ್ರದರ್ಶಿಸಿ ಅಸಮಾಧಾನ ಹೊರಹಾಕಿದರು.