ಆಂಧ್ರಪ್ರದೇಶ್: ವಿಶ್ವದ ಅತಿ ಶ್ರೀಮಂತ ದೇವಸ್ಥಾನಗಳಲ್ಲಿ ಒಂದಾದ ತಿರುಪತಿಯ ಶ್ರೀ ವೆಂಕಟೇಶ್ವರ ದೇವಸ್ಥಾನದ ವರ್ಷದ ಬಜೆಟ್ ಮಂಡನೆಯಾಗಿದೆ. ಬರೋಬ್ಬರಿ 5,142 ಕೋಟಿ ರೂ.ಗಳ ಅಂದಾಜು ವೆಚ್ಚದೊಂದಿಗೆ 2024-25ರ ವಾರ್ಷಿಕ ಬಜೆಟ್ ಅನುಮೋದಿಸಲಾಗಿದೆ.
ದೇವಸ್ಥಾನವನ್ನು ನಿರ್ವಹಿಸುವ ತಿರುಮಲ ತಿರುಪತಿ ದೇವಸ್ಥಾನಂ ಬಜೆಟ್ ಅನ್ನು ಮಂಡಿಸಿದೆ. 1933ರಲ್ಲಿ ದೇವಾಲಯದ ಟ್ರಸ್ಟ್ ಆರಂಭವಾದ ಬಳಿಕ ಇದೇ ಅತಿ ಹೆಚ್ಚಿನ ಬಜೆಟ್ ಆಗಿರುತ್ತದೆ. ಅಧ್ಯಕ್ಷ ಭೂಮನ ಕರುಣಾಕರ ರೆಡ್ಡಿ ಅವರು ಟಿಟಿಡಿ ಮಂಡಳಿಯ ನಿರ್ಣಯಗಳನ್ನು ವಿವರಿಸಿದರು.
ಇದನ್ನೂ ಓದಿ: ಗಾಂಧೀಜಿ ಕಾಲಿಗೆ ಬಿದ್ದು ಎದೆಗೆ ಗುಂಡಿಟ್ಟು ಕೊಂದಿದ್ದು ಗೋಡ್ಸೆ: ಸಿಎಂ ಸಿದ್ದರಾಮಯ್ಯ
ಈ ವರ್ಷದಿಂದ ಹೊಸ ಪ್ರಯೋಗ ಆರಂಭಿಸಲಾಗಿದೆ. ಟಿಟಿಡಿ ನೌಕರರ ವಸತಿ ಪ್ರದೇಶಗಳಲ್ಲಿ ಜಲ್ಲಿಕಲ್ಲು ರಸ್ತೆ ನಿರ್ಮಾಣಕ್ಕೆ ಅನುಮೋದನೆ ನೀಡಲಾಗಿದೆ. ಲಡ್ಡೂ ತಟ್ಟೆ ಕಾರ್ಮಿಕರಿಗೆ ಹೆಚ್ಚುವರಿಯಾಗಿ 15 ಸಾವಿರ ವೇತನ ಹೆಚ್ಚಳದ ಜತೆಗೆ, ವೇದ ಶಾಲೆಗಳ 51 ಶಿಕ್ಷಕರ ವೇತನವನ್ನು 34,000ದಿಂದ 54,000ಕ್ಕೆ ಹೆಚ್ಚಿಸಲು ನಿರ್ಧರಿಸಲಾಗಿದೆ.