Wednesday, January 22, 2025

ಸಾನಿಯಾ ಮಿರ್ಜಾ ಮತ್ತು ಶಮಿ ನಿಶ್ಚಿತಾರ್ಥ ಫೋಟೊ ವೈರಲ್​!

ಮುಂಬೈ: ಕ್ರಿಕೆಟಿಗ ಮೊಹಮ್ಮದ್ ಶಮಿ ಮತ್ತು ಸಾನಿಯಾ ಮಿರ್ಜಾ ನಿಶ್ಚಿತಾರ್ಥ ಮಾಡಿಕೊಂಡಿದ್ದು, ಶೀಘ್ರದಲ್ಲೇ ಮದುವೆಯಾಗಲಿದ್ದಾರೆ ಎಂಬ ಫೋಟೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಭಾರತದ ಟೆನಿಸ್‌ ತಾರೆ ಸಾನಿಯಾ ಮಿರ್ಜಾ ಕೆಲ ದಿನಗಳ ಹಿಂದೆ ಪಾಕಿಸ್ತಾನ ಕ್ರಿಕೆಟ್​ ತಂಡದ ಮಾಜಿ ಆಟಗಾರ ಶೋಯೆಬ್‌ ಮಲಿಕ್‌ ಅವರಿಗೆ ವಿಚ್ಚೇದನ ನೀಡಿದ್ದರು. ಈ ಮೂಲಕ 13 ವರ್ಷದ ದಾಂಪತ್ಯ ಜೀವನವನ್ನು ಅಂತ್ಯಗೊಳಿಸಿದ್ದರು. ಇದರ ಬೆನ್ನಲ್ಲೇ ಕೆಲ ಕಿಡಿಗೇಡಿಗಳು ಕ್ರಿಕೆಟಿಗ ಮೊಹಮ್ಮದ್ ಶಮಿ ಮತ್ತು ಸಾನಿಯಾ ಮಿರ್ಜಾ ನಿಶ್ಚಿತಾರ್ಥ ಮಾಡಿಕೋಂಡಿದ್ದು, ಶೀಘ್ರದಲ್ಲೇ ಮದುವೆಯಾಗಲಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿ ಹಬ್ಬಿದ್ದಾರೆ.

ಇದನ್ನೂ ಓದಿ: ತಿರುಪತಿ ತಿಮ್ಮಪ್ಪನ ಬಜೆಟ್​ ₹5,142 ಕೋಟಿ!

ಡೀಪ್‌ಫೇಕ್‌ ಮೂಲಕ ಶಮಿ ಮತ್ತು ಸಾನಿಯಾ ಮಿರ್ಜಾ ಅವರ ಮುಖವನ್ನು ಯಾರದ್ದೋ ಮದುವೆಯ ಫೋಟೊಗೆ ಎಡಿಟ್​ ಮಾಡಿ ಶಮಿ ಮತ್ತು ಸಾನಿಯಾ ಗುಟ್ಟಾಗಿ ನಿಶ್ಚಿತಾರ್ಥ ಮಾಡಿಕೋಂಡಿದ್ದಾರೆ ಎಂದು ಟ್ವೀಟರ್​ ಎಕ್ಸ್​ನಲ್ಲಿ ಕಿಡಿಗೇಡಿಗಳು ವೈರಲ್​ ಮಾಡಿದ್ದಾರೆ. ಈ ಮೂಲಕ ಕೀಳು ಮಟ್ಟದ ಮನೋಭಾವ ತೋರಿದ್ದಾರೆ.

ಶಮಿ ಮತ್ತು ಸಾನಿಯಾ ಮಿರ್ಜಾ ಅವರ ಡೀಪ್‌ಫೇಕ್‌ ಫೋಟೊ ಕಂಡ ಕೆಲ ನೆಟ್ಟಿಗರು, ಈ ವಿಕೃತಿ ತೋರಿದರನ್ನು ತಕ್ಷಣ ಬಂಧಿಸಿ ಕಠಿಣ ಶಿಕ್ಷೆ ನೀಡಬೇಕು ಎಂದು ಆಗ್ರಹಿಸಿದ್ದಾರೆ. ಇನ್ನು ಕೆಲವರು ಖಾಸಗಿತನವನ್ನು ಗೌರವಿಸುವಂತೆ ಒತ್ತಾಯಿಸಿದ್ದಾರೆ.

RELATED ARTICLES

Related Articles

TRENDING ARTICLES