Sunday, December 8, 2024

ರಕ್ತ ಸೋರುತ್ತಿದ್ರೂ ಏಕಾಂಗಿಯಾಗಿ ಕಾದಾಡಿದ್ದ ‘ಅರ್ಜುನ’ : ಕೊನೆ ಕ್ಷಣದ ವಿಡಿಯೋ ವೈರಲ್

ಹಾಸನ : ಅರ್ಜುನನ ಮೇಲೆ ಎಕಾಏಕಿ ಕಾಡಾನೆ ದಾಳಿ.. ಛಲ ಬಿಡದೇ ಸೆಣಸುತ್ತಿರುವ ಕ್ಯಾಪ್ಟನ್ ಅರ್ಜುನ.. ಮೈಯಲ್ಲಿ ರಕ್ತ ಸೋರುತ್ತಿದ್ದರೂ ಪಟ್ಟುಬಿಡದೇ ಸೆಣಸಾಟ.

ಡಿಸೆಂಬರ್ 4 ರಂದು ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ದಬ್ಬಳ್ಳಿಕಟ್ಟೆ ಫಾರೆಸ್ಟ್​ನಲ್ಲಿ ಕಾಡಾನೆ ಸೆರೆ ಕಾರ್ಯಾಚರಣೆ ನಡೆದಿತ್ತು. ಆಗ ಕಾಡಾನೆಯೊಂದಿಗೆ ಕಾದಾಡಿದ್ದ ಅಂಬಾರಿ ಕ್ಯಾಪ್ಟನ್​​ ಅರ್ಜುನ ಸಾವನ್ನಪ್ಪಿದ್ದ. ಅಂದು ಹೋರಾಟ ನಡೆಸಿದ ಸಂದರ್ಭದ ವಿಡಿಯೋವೊಂದು ಈಗ ವೈರಲ್ ಆಗಿದೆ.

ಕಾಡಾನೆ ಸೆರೆ ಕಾರ್ಯಾಚರಣೆ ತಂಡದಿಂದ ವಿಡಿಯೋ ಚಿತ್ರೀಕರಣ ಮಾಡಲಾಗಿದೆ. ಇಟಿಎಫ್ ಹೆಸರಿನಲ್ಲಿ ವಿಡಿಯೋ ಎಡಿಟ್ ಮಾಡಲಾಗಿದೆ. ರಣಭೀಕರ ಕಾಳಗದ ವಿಡಿಯೋ ಮೈ ಜುಂ ಎನಿಸುವಂತಿದೆ.

ರಕ್ತ ಸುರಿಯುತ್ತಿದ್ರೂ ಸಲಗದ ಜೊತೆ ಕಾದಾಟ

ಮದವೇರಿದ ಕಾಡಾನೆ ಬರ್ತಿದ್ದಂತೆ ಕಾರ್ಯಾಚರಣೆಯಲ್ಲಿದ್ದ ಎಲ್ಲಾ ಕಾಡಾನೆಗಳು ಸ್ಥಳದಿಂದ ಹೆದರಿ ಓಡಿ ಹೋಗಿದ್ವು. ಆಗ ಕಾಡಾನೆ ದಾಳಿ ಮಾಡೋದಕ್ಕೆ ಮುಂದಾದಾಗ ಎದೆಕೊಟ್ಟು ಅರ್ಜುನ ಹೋರಾಟ ನಡೆಸಿದ್ದ. ಸೊಂಡಲಿನಲ್ಲಿ ರಕ್ತ ಸುರಿಯುತ್ತಿದ್ರೂ ಹಂತಕ ಸಲಗದ ಜೊತೆ ಹೋರಾಟ ಮುಂದುವರಿಸಿದ್ದ.

ಕಾಡಾನೆ ಜೊತೆ ಏಕಾಂಗಿಯಾಗಿ ಹೋರಾಟ

ಈ ಹೋರಾಟ ನಡೆಯುವಾಗ ಅರ್ಜುನ ಮಾವುತನ ಸಹಾಯಕ ಅನಿಲ್ ಹಾಗೆ ಮತ್ತೋರ್ವ ವ್ಯಕ್ತಿ ಕಮಾಂಡ್​​ ಮಾಡ್ತಿದ್ರು. ಮದವೇರಿದ ಕಾಡಾನೆ ಜೊತೆಗೆ ಏಕಾಂಗಿಯಾಗಿ ವೀರಾವೇಶದಿಂದ ವೀರ ಅರ್ಜುನ ಹೋರಾಟ ಮಾಡಿದ್ದ. ಅರ್ಜುನ ಹಾಗೂ ಕಾಡಾನೆ ಕಾಳಗದ ಕೊನೇ ಕ್ಷಣದ ಎರಡೂವರೆ ನಿಮಿಷದ ವಿಡಿಯೋ ಇದೀಗ ವೈರಲ್ ಆಗಿದೆ.

ಅರ್ಜುನನ್ನು ಕೊಂದ ಕಾಡಾನೆ ಸೆರೆ ಯಾವಾಗ?

ಅರ್ಜುನ ಕಾಡಾನೆಯೊಂದಿಗೆ ಹೋರಾಡಿ ಸಾವನ್ನಪ್ಪಿದ್ದಾನೆ. ಆದ್ರೆ, ಈ ನಾಡಿನ ಕೋಟಿ ಕೋಟಿ ಜನರ ಬೇಡಿಕೆ ಅಂದ್ರೆ ನಮ್ಮ ಅರ್ಜುನನ್ನು ಕೊಂದ ಕಾಡಾನೆಯನ್ನ ಸೆರೆ ಹಿಡಿಯಬೇಕು, ಹಿಡಿದು ಪಳಗಿಸಬೇಕು ಅನ್ನೋದು. ಆದ್ರೆ, ಈಗಾಗಲೇ ಅನೇಕ ಕಾರಣಗಳ ನೀಡಿ ಕಾರ್ಯಾಚರಣೆಯನ್ನು ಅರ್ಧಕ್ಕೆ ಮೊಟಕುಗೊಳಿಸಲಾಗಿದೆ.

RELATED ARTICLES

Related Articles

TRENDING ARTICLES