ಬೆಂಗಳೂರು: ಶಿವಾಜಿನಗರದ ಚಾಂದಿನಿ ಚೌಕ್ನಲ್ಲಿ ಹಸಿರು ಬಾವುಟ ಹಾರಾಟವಾಗಿರುವ ಘಟನೆ ನಡೆದಿದ್ದು, ಹಸಿರು ಬಾವುಟ ಹಾರಾಟದ ವೀಡಿಯೋ ಟ್ವೀಟರ್ನಲ್ಲಿ ಹರಿದಾಡುತ್ತಿದ್ದಂತೆ ಹಿಂದೂ ಸಂಘಟನೆಯಿಂದ ವಿರೋಧ ವ್ಯಕ್ತಪಡಿಸಿದ್ದಾರೆ.
ಕೂಡಲೇ ಎಚ್ಚೆತ್ತಿರುವ ಶಿವಾಜಿನಗರ ಪೊಲೀಸರು ಬಾವುಟ ತೆಗಿಸಿ, ರಾಷ್ಟ್ರೀಯ ಬಾವುಟ ಹಾರಿಸಿದ್ದಾರೆ. ಸ್ಥಳಕ್ಕೆ ಶಿವಾಜಿನಗರ ಪೊಲೀಸರು ಭೇಟಿ ಕೊಟ್ಟು ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ: ಕುಡಿದ ಅಮಲಿನಲ್ಲಿ 6ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಆರೋಪಿಗೆ ಮರಣ ಶಿಕ್ಷೆಗೆ ಆಗ್ರಹ!
ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ವಿಕಾಸ್ ವಿಕ್ಕಿ ಎಂಬಾತನ ಖಾತೆಯಿಂದ ಟ್ವಿಟ್ ಮಾಡಲಾಗಿದ್ದು, ಆ ಟ್ವೀಟ್ನಲ್ಲಿ ಬೆಂಗಳೂರು ಶಿವಾಜಿನಗರದ ಚಾಂದಿನಿ ಚೌಕ್ ನಲ್ಲಿ ಹಾರುತ್ತಿರುವ ಈ ಧ್ವಜ – ಯಾವ ಧರ್ಮದ್ದು, ಕಾಂಗ್ರೆಸ್ ನಾಯಕರು ಇದಕ್ಕೆ ಉತ್ತರ ಕೊಡಬೇಕು, ಇದನ್ನು ನಿಮ್ಮಗೆ ತೆಗೆಸೋ ತಾಕತ್ ಇಲ್ವಾ, ಹಿಂದೂ ಗ್ರಾಮಸ್ಥರ ಮೇಲೆ ಮಾತ್ರ ನಿಮ್ಮ ಅಟ್ಟಹಾಸವೋ ಎಂದು ಟ್ವೀಟ್ ಮೂಲಕ ಕಿಡಿಕಾರಿದ್ದಾರೆ.