Saturday, January 11, 2025

ಕುಡಿದ ಅಮಲಿನಲ್ಲಿ 6ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಆರೋಪಿಗೆ ಮರಣ ಶಿಕ್ಷೆಗೆ ಆಗ್ರಹ!

ತುಮಕೂರು: ಕುಡಿದ ಅಮಲಿನಲ್ಲಿ 6 ವರ್ಷದ ಬಾಲಕಿಯನ್ನು ಎಳೆದೊಯ್ದು 23 ವರ್ಷದ ಯುವಕನಿಂದ ಅತ್ಯಾಚಾರ ಮಾಡಿರುವಂತಹ ಘಟನೆ ಜಿಲ್ಲೆಯ ಕೊರಟಗೆರೆ ಪಟ್ಟಣದಲ್ಲಿ ನಡೆದಿದೆ.

ಮನೆಯಲ್ಲಿ ಯಾರು‌ ಇಲ್ಲದ ವೇಳೆ ಮಧುಗಿರಿ ಮೂಲದ ಯುವಕನಿಂದ ಅತ್ಯಾಚಾರ ಮಾಡಲಾಗಿದೆ. ಈ ವೇಳೆ ಬಾಲಕಿ ಕಿರುಚಿದ ಕಾರಣ ಸ್ಥಳಿಯರು ದೌಡಾಯಿಸಿದ್ದು, ಬಾಲಕಿಯ ರಕ್ಷಣೆ ಮಾಡಲಾಗಿದೆ. ಸದ್ಯ ಬಾಲಕಿಯನ್ನು ಕೊರಟಗೆರೆ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.

ಇದನ್ನೂ ಓದಿ: ಸಾನಿಯಾ ಮಿರ್ಜಾ ಮತ್ತು ಶಮಿ ನಿಶ್ಚಿತಾರ್ಥ ಫೋಟೊ ವೈರಲ್​!

ಸ್ಥಳಕ್ಕೆ ಸಿಪಿಐ ಅನಿಲ್ ಮತ್ತು ಪಿಎಸ್ಐ ಚೇತನ್ ಕುಮಾರ್ ಬೇಟಿ ಪರಿಶೀಲನೆ ನಡೆಸಿದ್ದಾರೆ. ಇನ್ನು ಈ ಆರೋಪಿ ಪವನ್​ಗೆ ಕಠಿಣ ಮರಣದಂಡನೆ ಶಿಕ್ಷೆಗೆ ಸ್ಥಳೀಯರ ಆಗ್ರಹಿಸಿ, ಕೊರಟಗೆರೆ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಕಾಯ್ದೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES

Related Articles

TRENDING ARTICLES