ಮಾಲ್ಡೀವ್ಸ್ ಸಂಸತ್ತಿನಲ್ಲಿ ಸಂಸದರು ಪರಸ್ಪರ ಎಳೆದಾಡಿ, ಹೊಡೆದಾಡಿಕೊಂಡಿರುವ ಘಟನೆ ಭಾನುವಾರ ಸಂಸತ್ತಿನ ವಿಶೇಷ ಅಧಿವೇಶನದಲ್ಲಿ ನಡೆದಿದೆ.
ಪಿಪಿಎಂ ಮತ್ತು ಪಿಎನ್‌ಸಿ ಪಕ್ಷದ ಸಮ್ಮಿಶ್ರ ಸರ್ಕಾರದ ಸಂಸದರು ಮತ್ತು ವಿರೋಧ ಪಕ್ಷದ ಸಂಸದರ ನಡುವೆ ತೀವ್ರ ವಾಗ್ವಾದ ನಡೆಯಿತು. ಈ ಸಂದರ್ಭದಲ್ಲಿ ಮಾತಿನ ಆಡಳಿತ ಪಕ್ಷ ಮತ್ತು ಪ್ರತಿಪಕ್ಷಗಳ ಸಂಸದರು ಪರಸ್ಪರ ಕೈ ಮಿಲಾಯಿಸಿದ್ದು, ಹೊಡೆದಾಡಿಕೊಂಡಿದ್ದಾರೆ.
ಇದನ್ನೂ ಓದಿ: ಹನುಮಧ್ವಜ ಸಂಘರ್ಷ; ಮಂಡ್ಯದಲ್ಲಿಂದು ಹೆಚ್‌ಡಿಕೆ, ರೆಡ್ಡಿ ಪಾದಯಾತ್ರೆ
ಮಾಲ್ಡೀವ್ಸ್ ಸಂಸತ್ತಿನಲ್ಲಿ ಹಲವು ಸಂಸದರ ನಡುವೆ ಘರ್ಷಣೆ ಸಂಭವಿಸಿದೆ. ಆಡಳಿತ ಒಕ್ಕೂಟದ ಪೀಪಲ್ಸ್ ನ್ಯಾಷನಲ್ ಕಾಂಗ್ರೆಸ್ ಮತ್ತು ಪ್ರೋಗ್ರೆಸ್ಸಿವ್ ಪಾರ್ಟಿ ಆಫ್ ಮಾಲ್ಡೀವ್ಸ್ ಮತ್ತು ವಿರೋಧ ಪಕ್ಷವಾದ ಮಾಲ್ಡೀವಿಯನ್ ಡೆಮಾಕ್ರಟಿಕ್ ಪಾರ್ಟಿಯ ಸಂಸದರ ನಡುವೆ ಘರ್ಷಣೆ ನಡೆದಿದೆ. ಆಡಳಿತ ಪಕ್ಷದ ಸಂಸದರು ವಿರೋಧ ಪಕ್ಷದ ಸಂಸದರನ್ನು ಸಂಸತ್ತಿಗೆ ಪ್ರವೇಶಿಸದಂತೆ ತಡೆದಿದ್ದರು ಎನ್ನಲಾಗುತ್ತಿದೆ.
ಮಾಲ್ಡೀವ್ಸ್ ಸಂಸತ್ತಿನಲ್ಲಿ ಬಹುಮತ ಹೊಂದಿರುವ ಎಂಡಿಪಿಯು ಆಡಳಿತ ಪಕ್ಷದ ನಾಲ್ವರು ಸದಸ್ಯರಿಗೆ ಮುಯಿಝು ಅವರ ಸಂಪುಟಕ್ಕೆ ಸೇರಲು ಅನುಮೋದನೆ ನೀಡಲು ನಿರಾಕರಿಸಿದ ನಂತರ ಈ ಘಟನೆ ನಡೆದಿದೆ.