Monday, December 23, 2024

ಮೂವರು ನಕಲಿ BIS ಅಧಿಕಾರಿಗಳಿಂದ 1 ಕೆಜಿ ಚಿನ್ನ ಕದಿಯಲು ಯತ್ನ: ಪೋಲಿಸರ ವಶಕ್ಕೆ!

ಬೆಂಗಳೂರು: ಚಿನ್ನದ ಮಳಿಗೆ ಮೇಲೆ ನಕಲಿ‌ BIS ಅಧಿಕಾರಿಗಳು ದಾಳಿ ನಡೆಸಿರುವ ಘಟನೆ ಕೆ.ಆರ್​ ಪುರದ ಮಹಾಲಕ್ಷ್ಮೀ ಜ್ಯುವೆಲ್ಲರಿನಲ್ಲಿ ನಡೆದಿದೆ.

ಘಟನೆ ಸಂಬಂಧ ಮೂವರು ನಕಲಿ BIS ಅಧಿಕಾರಿಗಳನ್ನ ಪೋಲಿಸರು ಬಂಧಿಸಿದ್ದಾರೆ. ಇನೋವಾ ಕಾರಿನಲ್ಲಿ ಬಂದಿದ್ದ ನಕಲಿ ಅಧಿಕಾರಿಗಳ ಗ್ಯಾಂಗ್, ದಾಳಿ ಮಾಡಿ 1 ಕೆಜಿಗೂ ಅಧಿಕ ಚಿನ್ನ ತೆಗೆದುಕೊಂಡು ಹೋಗಲು ಯತ್ನಿಸಿದ್ದರು ಎನ್ನಲಾಗಿದೆ. ಇನ್ನು, ದಾಳಿ ಹೆಸರಲ್ಲಿ ಸುಮಾರು 40 ನಿಮಿಷ ಸರ್ಚ್ ಮಾಡಿದ್ರು ಎಂದು ತಿಳಿದುಬಂದಿದೆ.

ಇದನ್ನೂ ಓದಿ: ರಾಷ್ಟ್ರಧ್ವಜವನ್ನು ಕಂಡರೆ ಉರಿದು ಬೀಳುತ್ತಿದೆ ಬಿಜೆಪಿ: ಪ್ರಿಯಾಂಕ್​ ಖರ್ಗೆ

ಪೋಲಿಸರು ಸಂಪತ್ ಕುಮಾರ್, ಜೋಶಿ ಥಾಮಸ್, ಅವಿನಾಶ್, ಸಂದೀಪ್ ಎಂಬಾತರನ್ನ ಬಂಧಿಸಿದ್ದು, ಆರೋಪಿಗಳ ಬಳಿಯಿದ್ದ ಚಿನ್ನವನ್ನ ಜಪ್ತಿ ಮಾಡಿದ್ದಾರೆ, ಈ ಬಗ್ಗೆ ಕೆ ಆರ್ ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES

Related Articles

TRENDING ARTICLES