Wednesday, January 22, 2025

ವೇದಿಕೆಯಲ್ಲೇ ವಿಜಯೇಂದ್ರ ಕಾಲಿಗೆ ಬಿದ್ದ ಮಾಜಿ ಸಚಿವ ಪ್ರಭು ಚೌಹಾಣ್

ಬೀದರ್ : ಮಾಜಿ ಸಚಿವ ಹಾಗೂ ಶಾಸಕ ಪ್ರಭು ಚೌಹಾಣ್ ಅವರು ವೇದಿಕೆಯಲ್ಲೇ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರ ಕಾಲಿಗೆ ಬಿದ್ದಿದ್ದಾರೆ.

ಬೀದರ್​ನಲ್ಲಿ ಹಮ್ಮಿಕೊಂಡಿದ್ದ ನೂತನ ಜಿಲ್ಲಾಧ್ಯಕ್ಷರ ಪದಗ್ರಹಣ ಹಾಗೂ ರಾಜ್ಯಾಧ್ಯಕ್ಷರ ಅಭಿನಂದನಾ ಸಮಾರಂಭದಲ್ಲಿ ಈ ಘಟನೆ ನಡೆದಿದೆ. ಭಾಷಣ ಮಾಡುತ್ತಲೇ ರಾಜ್ಯಾಧ್ಯಕ್ಷ ವಿಜಯೇಂದ್ರ ಕಾಲಿಗೆ ಬಿದ್ದಿದ್ದಾರೆ.

ಈ ಮೂಲಕ ಪ್ರಭು ಚೌಹಾಣ್ ಪರೋಕ್ಷವಾಗಿ ಕೇಂದ್ರ ಸಚಿವ ಭಗವಂತ ಖೂಬಾ ವಿರುದ್ದ ಅಸಮಾಧಾನ ಹೊರಹಾಕಿದ್ದಾರೆ. 2024 ರಲ್ಲಿ ಒಳ್ಳೆಯ ಅಭ್ಯರ್ಥಿ ತನ್ನಿ ಎಂದು ಮನವಿ ಮಾಡಿ ನೇರವಾಗಿ ವಿಜಯೇಂದ್ರ ಬಳಿ ತೆರಳಿ ಕಾಲಿಗೆ ಬಿದ್ದಿದ್ದಾರೆ. ಬಳಿಕ, ನೆರೆದಿದ್ದ ಜನತೆಗೂ ಕೈ ಮುಗಿದಿದ್ದಾರೆ.

ಈ ಸುದ್ದಿ ಓದಿದ್ದೀರಾ? : ಅಲ್ಲಿ ಯಾವ ಕಾಲದಿಂದ ಹನುಮಧ್ವಜ ಇತ್ತು? ಎಷ್ಟು ವರ್ಷದಿಂದ ಇತ್ತು? ಎಷ್ಟು ದಿನದಿಂದ ಇತ್ತು? : ಸಚಿವ ಕೆ. ವೆಂಕಟೇಶ್

ಬೀದರ್‌ಗೆ ಒಳ್ಳೆಯ ಅಭ್ಯರ್ಥಿ ನೀಡಿ

ಭಾಷಣದ ವೇಳೆ 10 ವರ್ಷಗಳಿಂದ ನನಗೆ ಅನ್ಯಾಯವಾಗಿದೆ. ಬೀದರ್‌ಗೆ ಒಳ್ಳೆಯ ಅಭ್ಯರ್ಥಿ ನೀಡಿ. ಕಾರ್ಯಕರ್ತರನ್ನ ಜೈಲಿಗೆ ಕಳಿಸೋರು ಬೇಡ. ಕಾರ್ಯಕರ್ತರಿಂದಲೇ ನಾವಿದ್ದೇವೆ. ಕಾರ್ಯಕರ್ತರನ್ನ ಗೌರವಿಸೋರಿಗೆ ಟಿಕೆಟ್ ನೀಡಿ. ನಾನು ಯಾವತ್ತೂ ಶಾಸಕ ಎಂದುಕೊಂಡಿಲ್ಲ, ಬಿಜೆಪಿಯ ಕಾರ್ಯಕರ್ತರನಾಗಿದ್ದೇನೆ. 2024ಕ್ಕೆ ಒಳ್ಳೆಯ ಅಭ್ಯರ್ಥಿ ತನ್ನಿ ಎಂದು ಪುನರುಚ್ಚರಿಸಿದ್ದಾರೆ.

RELATED ARTICLES

Related Articles

TRENDING ARTICLES