ಮಂಡ್ಯ: ತಾಲೂಕಿನ ಕೆರೆಗೋಡು ಗ್ರಾಮದಲ್ಲಿ ಜೈಶ್ರೀರಾಮ್ ಬರಹದ ಹನುಮಧ್ವಜ ಹಾರಿಸಿದ್ದು ಈ ಧ್ವಜವನ್ನು ತೆರವುಗೊಳಿಸಲು ಬಂದ ಅಧಿಕಾರಿಗಳ ವಿರುದ್ದ ಇಲ್ಲಗೆ ಸ್ಥಳೀಯರು ಹಾಗು ಹಿಂದು ಪರ ಸಂಘಟನೆಗಳು ಆಕ್ರೋಶ ಹೊರಹಾಕಿದರು, ಅಷ್ಟೆ ಅಲ್ಲದೇ ಇಲ್ಲಿಗೆ ಶಾಸಕರ ವಿರುದ್ದವು ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿದ್ದರು.
ಇದನ್ನೂ ಓದಿ: ಹಂಪಿ ದೇಗುಲ: ಪ್ರವಾಸಿಗರಿಗೆ ವಸ್ತ್ರ ನೀತಿ ಸಂಹಿತೆ ಜಾರಿಗೆ ಜಿಲ್ಲಾಡಳಿತ ಸಿದ್ದತೆ!
ಮಂಡ್ಯದಲ್ಲಿ ರಾಜಕೀಯಕ್ಕೆ ಎಡೆ ಮಾಡಿ ಕೊಟ್ಟ ಹನುಮಧ್ವಜ ಗಲಾಟೆಗೆ ಶಾಸಕ ರವಿಕುಮಾರ್ ಗಣಿಗ ಪ್ರತಿಕ್ರಿಯೆ ನೀಡಿ ಪವರ್ ಟಿವಿ ಜೊತೆ ಮಾತನಾಡಿದ ಅವರು, ರಾಷ್ಟ್ರಧ್ವಜ ಮತ್ತು ನಾಡಧ್ವಜ ಅಳವಡಿಸಲು ಅನುಮತಿ ಕೇಳಿದ್ದರು. ಆದ್ರೆ ಇಲ್ಲಿ ಈ ಎರಡು ಧ್ವಜಗಳ ಬದಲಿಗೆ ಕೇಸರಿ ಧ್ವಜ ಹಾಕಿದ್ದಾರೆ. ಇದರಿಂದ ಜೆಡಿಎಸ್, ಬಿಜೆಪಿ ರಾಜಕೀಯ ಬಣ್ಣ ಕಟ್ಟಿಕೊಂಡಿದೆ.
ಇದರಿಂದ ಡಾ.ಬಿ.ಆರ್.ಅಂಬೇಡ್ಕರ್ ಧ್ವಜಕ್ಕೆ ಅನುಮತಿ ನೀಡಿ. ಕನಕ ಭಾವುಟಕ್ಕೆ ಅನುಮತಿ ಕೊಡಿ. ಕನ್ನಡ ಬಾವುಟಕ್ಕೆ ಅನುಮತಿ ನೀಡಿ ಅಂತ ಒತ್ತಡಗಳು ಬರುತ್ತಿವೆ. ಇದರಿಂದ ಈ ಗೊಂದಲ ಸೃಷ್ಟಿಯಾಗಿದೆ ಎಂದು ಸ್ಪಷ್ಟನೆ ನೀಡಿದರು.