ಬಳ್ಳಾರಿ: ವಿಶ್ವಪ್ರಸಿದ್ದ ಹಂಪಿ ವಿರೂಪಾಕ್ಷ ದೇವಾಲಯಕ್ಕೆ ಆಗಮಿಸುವವರಿಗೆ ಜಿಲ್ಲಾಡಳಿತ ಹೊಸ ವಸ್ತ್ರನೀತಿ ಸಂಹಿತೆ ಜಾರಿ ಮಾಡಲು ಚಿಂತನೆ ನಡೆಸಿದ್ದು, ಪ್ರಾಯೋಗಿಕವಾಗಿ ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಜಿಲ್ಲಾಡಳಿತ ಪಂಚೆ – ಶಾಲು ನೀಡಿದೆ.
ಇದನ್ನೂ ಓದಿ: ಹನುಮ ಧ್ವಜ ತೆರವಿಗೆ ಯತ್ನ: ಅಧಿಕಾರಿಗಳ ವಿರುದ್ದ ತಿರುಗಿಬಿದ್ದ ಗ್ರಾಮಸ್ಥರು!
ದೇವಾಲಯಕ್ಕೆ ದೇಶವಿದೇಶಗಳಿಂದ ಹಂಪಿ ವಿರೂಪಾಕ್ಷ ದರ್ಶನಕ್ಕೆ ಆಗಮಿಸುವ ಜನರು ಜೀನ್ಸ್ ಪ್ಯಾಂಟ್, ಬರ್ಮೋಡ, ತುಂಡುಡುಗೆಗಳನ್ನು ಧರಿಸಿ ಬರುವುದರಿಂದ ದೇವಾಲಯದ ಪಾವಿತ್ರತೆ ಹಾಳಾಗುತ್ತಿದೆ ಎಂದು ಇಲ್ಲಿನ ಸ್ಥಳೀಯರು ಹಾಗು ಭಕ್ತರು ಆರೋಪ ಮಾಡಿದ್ದರು. ಈ ಹಿನ್ನೆಲೆ ದೇವಾಲಯಕ್ಕೆ ಆಗಮಿಸುವ ಪ್ರವಾಸಿಗರಿಗೆ ನೂತನ ವಸ್ತ್ರ ಸಂಹಿತೆ ಜಾರಿಗೊಳಿಸಲು ತೀರ್ಮಾನಿಸಿದೆ.
ಪ್ರಸಿದ್ದ ಹಂಪಿ ದೇವಾಲಯವು ಪ್ರವಾಸಿಗರಿಗೆ ನೆಚ್ಚಿನ ತಾಣವಾಗಿದೆ. ಇಲ್ಲಿಗೆ ಆಗಮಿಸುವ ಪ್ರವಾಸಿಗರಿಗೆ ಜಿಲ್ಲಾಡಳಿತ ಸೀರೆ, ಶಾಲು ಪಂಚೆ ಧರಿಸುವುದು ಕಡ್ಡಾಯ ಮಾಡಿ ಪ್ರವಾಸಿಗರಿಗೆ ದೆವಾಲಯದಲ್ಲಿ ಭಕ್ತಿ ಭಾವ ಮೂಡಿಸುವ ಉದ್ದೇಶವನ್ನು ಹೊಂದಿದೆ. ಈ ಹಿನ್ನೆಲೆ ಜಿಲ್ಲಾಧಿಕಾರಿ ದಿವಾಕರ್ ಹಾಗು ಶಾಸಕ ಗವಿಯಪ್ಪ ಭಕ್ತರಲ್ಲಿ ಮನವಿ ಮಾಡಿಕೊಂಡಿದ್ದಾರೆ.