Wednesday, January 22, 2025

ಸಾಲ ವಾಪಸ್ ಕೇಳಿದ್ದಕ್ಕೆ ಲಾಂಗ್​ ಮಚ್ಚಿನಿಂದ ಮಾರಣಾಂತಿಕ ಹಲ್ಲೆ!

ಬೆಂಗಳೂರು: ಹಣಕಾಸಿನ ವಿಚಾರಕ್ಕೆ ಯುವಕನ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿರುವ ಘಟನೆ ಬೆಂಗಳೂರಿನ ಲಗ್ಗೆರೆಯಲ್ಲಿ ನಡೆದಿದೆ.

ತುಮಕೂರಿನ ಹೆಬ್ಬೂರಿನಿಂದ ಬೆಂಗಳೂರಿನ ಲಗ್ಗೆರೆವರೆಗೂ ಫಾಲೋ ಮಾಡಿಕೊಂಡು ಬಂದಿದ್ದ ಗ್ಯಾಂಗ್, ಲಗ್ಗೆರೆಯಲ್ಲಿ ಮಾರುತಿ ಎಂಬ ಚಾಲಕನ ಮೇಲೆ ಲಾಂಗ್, ಮಚ್ಚಿನಿಂದ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ. ಲಾಂಗ್ ನಿಂದ ತಲೆ ಸೀಳುವಂತೆ ಹಲ್ಲೆ ಮಾಡಿ ಪುಂಡರು ಎಸ್ಕೇಪ್ ಆಗಿದ್ದಾರೆ.

ಇದನ್ನೂ ಓದಿ: ಗಂಡ-ಹೆಂಡತಿ ಆಗದೇ ಗುಡಿ ಸುತ್ತಿದ್ರೆ ಹೇಗೆ ಮಕ್ಕಳಾಗುತ್ತೆ? : ಮಲ್ಲಿಕಾರ್ಜುನ ಖರ್ಗೆ

ಗಾಯಾಳು ಮಾರುತಿ ಅವರಿಂದ 25 ಸಾವಿರ ಹಣವನ್ನು ಆರೋಪಿ ಕೆಂಚ ಎಂಬುವರು ಪಡೆದಿದ್ದ. ಸಾಲವಾಪಸ್ ಕೇಳಿದ್ದಕ್ಕೆ ಹಣ ನೀಡುವುದಾಗಿ ತಿಳಿಸಿ ಹೆಬ್ಬೂರಿಗೆ ಕರೆಸಿಕೊಂಡಿದ್ದ ಕೆಂಚ, ಹೆಬ್ಬೂರಿಗೆ ಬಂದಮೇಲೆ ಹಣವಾಪಸ್ ಕೊಡದೇ ಹಲ್ಲೆ ನಡೆಸಿದ್ದಾನೆ. ನಂತರ ಅಲ್ಲಿಂದ ಕಾರಿನಲ್ಲಿ ಬೆಂಗಳೂರಿಗೆ ವಾಪಸ್ಸಾಗಿದ್ದ ಮಾರುತಿಯನ್ನೆ ಹಿಂಬಾಲಿಸಿ ಬಂದು ಕೊಲೆ ಯತ್ನ ನಡೆಸಿದ್ದಾರೆ. ಗಾಯಾಳು ಮಾರುತಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಈ ಬಗ್ಗೆ ನಂದಿನಿ ಲೇಔಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

RELATED ARTICLES

Related Articles

TRENDING ARTICLES