Sunday, January 19, 2025

ಬೀದಿರೌಡಿಗಳಂತೆ ಭೀಕರವಾಗಿ ಬಡಿದಾಡಿಕೊಂಡ ವಿದ್ಯಾರ್ಥಿಗಳು!

ತುಮಕೂರು: ವಿದ್ಯಾರ್ಥಿಗಳು ಬೀದಿ ರೌಡಿಗಳಂತೆ ಭೀಕರವಾಗಿ ಒಡೆದಾಡಿಕೊಂಡಿರುವ ಘಟನೆ ತುಮಕೂರಿನ ತಿಪಟೂರಿನಲ್ಲಿ ನಡೆದಿದೆ.

75ನೇ ಗಣರಾಜ್ಯೋತ್ಸವದ ಹಿನ್ನಲೆ ಆಚರಣೆ ಮುಗಿಸಿ ಮನೆಗೆ ತೆರಳುತ್ತಿದ್ದ ವೇಳೆ ನಗರದ ಐ.ಬಿ ಸರ್ಕಲ್​ ಬಳಿ ಆರಂಭವಾದ ಹೊಡೆದಾಟ ಸರ್ಕಾರಿ ಜೂನಿಯರ್​ ಕಾಲೇಜಿನ ವರೆಗೆ ರಸ್ತೆಯಲ್ಲಿ ಪ್ರಾಣದ ಹಂಗುತೊರೆದು ಒಡೆದಾಡಿಕೊಂಡಿದ್ದಾರೆ. ಈ ಹೊಡೆದಾಟಕ್ಕೆ ಕೆಲವು ಹೊರಗಿನ ಪುಂಡರು ಸಾಥ್ ನೀಡಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: ಎತ್ತಿನಗಾಡಿಯಲ್ಲಿ ನಟ ಡಿಬಾಸ್​ ದರ್ಶನ್​ಗೆ ಅದ್ದೂರಿ ಸ್ವಾಗತ!

ಇಲ್ಲಿನ ವಿದ್ಯಾರ್ಥಿಗಳಿಗೆ ಹೊರಗಿನಿಂದ ಗಾಂಜಾ ಪೂರೈಕೆಯಾಗುತ್ತಿದ್ದು ವಿದ್ಯಾರ್ಥಿಗಳು ನಿತ್ಯ ಈ ರೀತಿಯಲ್ಲಿ ಒಡೆದಾಡಿಕೊಳ್ಳುತ್ತಿದ್ದಾರೆ ಎನ್ನುವ ಗಂಭೀರ ಆರೋಪ ಕೇಳಿಬಂದಿದೆ, ಇನ್ನೂ, ಹೊಡೆದಾಟದಲ್ಲಿ ಭಾಗಿಯಾಗಿದ್ದ ಒಂದಷ್ಟು ವಿದ್ಯಾರ್ಥಿಗಳನ್ನ ಕರೆಸಿದ ತಿಪಟೂರು ಪೊಲೀಸರು ಬುದ್ದಿವಾದ ಹೇಳಿ ಎಚ್ಚರಿಕೆಯನ್ನ ನೀಡಿ ವಾಪಸ್ ಕಳಿಸಿದ್ದಾರೆ.

RELATED ARTICLES

Related Articles

TRENDING ARTICLES