ಕಲಬುರಗಿ : ಗಂಡ-ಹೆಂಡತಿ ಆಗದೇ ಗುಡಿ ಸುತ್ತಿದ್ರೆ ಹೇಗೆ ಮಕ್ಕಳಾಗುತ್ತೆ..? ಈ ಮಾತನ್ನ ನಾನು ಹೇಳಿದ್ದಲ್ಲ, ಒಬ್ಬ ಸಂತರೇ ಹೇಳಿದ್ದಾರೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.
ಕಲಬುರಗಿ ನಗರದ ಹೆಚ್‌ಕೆಇ ಶಿಕ್ಷಣ ಸಂಸ್ಥೆಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಮೊದಲು ಗಂಡ-ಹೆಂಡತಿಯಾಗಿ, ಆ ಮೇಲೆ ದೇವರು ವರ ಕೊಡ್ತಾನೆ ಎಂದು ತಿಳಿಸಿದ್ದಾರೆ.
ನಾನು ಚುನಾವಣೆಯಲ್ಲಿ 11 ಬಾರಿ ಗೆದ್ದಿದ್ದೆ. ಕಳೆದ ಬಾರಿ ನಾನು ಸೋಲುತ್ತೇನೆಂದು ನೀರಿಕ್ಷೆ ಕೂಡಾ ಮಾಡಿರಲಿಲ್ಲ. ಆದ್ರೆ, ನಾನು ಕಳೆದ ಬಾರಿ ಸೋತೆ ಎಂದು ಭಾಷಣದಲ್ಲಿ ಮತ್ತೆ ಮತ್ತೆ ತಮ್ಮ ಸೋಲಿನ ಕಹಿಯನ್ನ ಮಲ್ಲಿಕಾರ್ಜುನ ಖರ್ಗೆ ನೆನೆಪಿಸಿಕೊಂಡಿದ್ದಾರೆ.
ನನ್ನ ಪತ್ನಿ ಚುನಾವಣೆ ಬೇಡ ಎಂದಿದ್ದಳು
ನಮ್ಮ ಮನೆಯಲ್ಲಿ ನನ್ನ ಪತ್ನಿ ಹೇಳಿದ್ದರು. ಈ ಬಾರಿ ಗಾಳಿ ಸರಿಯಿಲ್ಲ, ಚುನಾವಣೆ ಮಾಡೋದು ಬೇಡ ಎಂದಿದ್ದರು. ಆದ್ರೂ, ಹೆಣ್ಮಕ್ಕಳ ಮಾತು ಕೇಳೋದು ಬೇಡ ಅಂತ ಎಲೆಕ್ಷನ್ ನಿಂತೆ. ಆದ್ರೆ, ನಮ್ಮ ಸೀಟು ಕಳೆದುಕೊಂಡೆವು. ತಕ್ಷಣ ಸೋನಿಯಾಗಾಂಧಿ ಪೋನ್ ಮಾಡಿದ್ರು, ನೀವು ಬೇಜಾರ್ ಆಗಬೇಡಿ. ನಿಮ್ಮ ಸೇವೆ ಜನತೆಗೆ ಬೇಕಾಗಿದೆ, ತಕ್ಷಣ ರಾಜ್ಯಸಭೆಗೆ ನಾಮಿನೆಷನ್ ಹಾಕಿ ಅಂದ್ರು. ಹಾಕ್ದೆ, ಮತ್ತೆ ಎಂಪಿ ಆದೆ. ಅಲ್ಲದೆ ರಾಜ್ಯಸಭೆ ವಿರೋಧ ಪಕ್ಷದ ನಾಯಕನಾದೆ, ಇವಾಗ ಎಐಸಿಸಿ ಅಧ್ಯಕ್ಷನಾಗಿದ್ದೇನೆ ಎಂದು ಹೇಳಿದ್ದಾರೆ.
ಎಲ್ಲದಕ್ಕೂ ದೇವರು ಅಂದ್ರೆ ಹೇಗೆ..?
ಇಷ್ಟೆಲ್ಲಾ ಆದ್ರು ನಾನು ಗುರುಮಿಟಕಲ್ ಹಾಗೂ ಕಲಬುರಗಿ ಜನತೆಯನ್ನ ಎಂದಿಗೂ ಮರೆಯೋದಿಲ್ಲ. ಇದು ನನ್ನ ಮೂಲಃ ಭೂಮಿ. ಎಲ್ಲರೂ ಜೀವನದಲ್ಲಿ ಕಷ್ಟ ಪಟ್ಟು ಶ್ರಮ ಹಾಕಬೇಕು. ನೀವು ಶ್ರಮ ಹಾಕಿದ್ರೆ ಮಾತ್ರ ಯಶಸ್ಸು ಸಿಗುತ್ತೆ. ನಾನು ಸಾಕಷ್ಟು ಕಷ್ಟಪಟ್ಟಿದ್ದೇನೆ. ಬಸವಣ್ಣನವರು ಹೇಳಿದಾಗೆ ಕೈಸರಾದ್ರೆ ಬಾಯಿ ಮೋಸರಾಗುತ್ತೆ. ಎಲ್ಲದಕ್ಕೂ ದೇವರು ಅಂದ್ರೆ ಹೇಗೆ..? ನೀವು ಕಷ್ಟ ಪಡಬೇಕು, ದೇವರು ವರ ಕೊಡ್ತಾನೆ ಎಂದು ಮಲ್ಲಿಕಾರ್ಜುನ ಖರ್ಗೆ ತಿಳಿಸಿದ್ದಾರೆ.