Wednesday, January 22, 2025

Kevin sinclair: ವೆಸ್ಟ್​ ಇಂಡೀಸ್ ಬೌಲರ್​​ನ ಸೆಲೆಬ್ರೆಷನ್​ ವಿಡಿಯೊ ಫುಲ್​ ವೈರಲ್​

ಬ್ರಿಸ್ಬೇನ್​: ಗಬ್ಬಾ ಕ್ರಿಕೆಟ್ ಸ್ಟೇಡಿಯಮ್​ನಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ ಮತ್ತು ವೆಸ್ಟ್​ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ಆಲ್ರೌಂಡರ್ ಕೆವಿನ್ ಸಿಂಕ್ಲೇರ್ ಬ್ಯಾಟಿಂಗ್, ಫೀಲ್ಡಿಂಗ್ ಮತ್ತು ಬೌಲಿಂಗ್​ನಲ್ಲಿ ಪರಿಣಾಮಕಾರಿ ಆಟವಾಡುವ ಮೂಲಕ ತಂಡಕ್ಕೆ ಉತ್ತಮ ಕೊಡುಗೆಗಳನ್ನು ನೀಡಿದ್ದಾರೆ. ಪಂದ್ಯದ ವೇಳೆ ತಮ್ಮ ಆಲ್​ರೌಂಡ್​ ಆಟ ಪ್ರದರ್ಶಿಸಿ ಸಂಭ್ರಮಿಸಿದ್ದೇ ಈ ಪಂದ್ಯದ ಹೈಲೈಟ್ ಎನಿಸಿದೆ.

ಎರಡನೇ ದಿನದಾಟದ ಅಂತ್ಯಕ್ಕೆ ವೆಸ್ಟ್ ಇಂಡೀಸ್ 8 ವಿಕೆಟ್ ನಷ್ಟಕ್ಕೆ 266 ರನ್ ಗಳಿಸಿತ್ತು. ಪ್ರವಾಸಿ ತಂಡವು ತನ್ನ ಮೊದಲ ಇನ್ನಿಂಗ್ಸ್ ನಲ್ಲಿ 311 ರನ್ ಗಳಿಗೆ ಆಲೌಟ್ ಆಯಿತು. ಕೆವಿನ್ ಸಿಂಕ್ಲೇರ್ 98 ಎಸೆತಗಳಲ್ಲಿ 5 ಬೌಂಡರಿ ಮತ್ತು ಒಂದು ಸಿಕ್ಸರ್​ನೊಂದಿಗೆ 50 ರನ್ ಗಳಿಸಿದ್ದರು. ಆದರೇ ಈ ಪಂದ್ಯದಲ್ಲಿ ಅವರು ಅರ್ಧ ಶತಕ ಸಿಡಿಸಿದ್ದಕ್ಕಿಂತಲೂ ಹೆಚ್ಚಾಗಿ ಅವರ ಸಂಭ್ರಮವೇ ಸುದ್ದಿಯಾಯಿತು.

ಇದನ್ನೂ ಓದಿ: ಮಗನ ಗುಪ್ತಾಂಗಕ್ಕೆ ಗುಂಡಿಕ್ಕಿ ಕೊಂದ ಪಾಪಿ ತಂದೆ!

ಆಸ್ಟ್ರೇಲಿಯಾದ ಉಸ್ಮಾನ್ ಖವಾಜಾ 75 ರನ್ ಗಳಿಸುವ ಮುನ್ನ ಕೆವಿನ್ ಸಿಂಕ್ಲೇರ್ ಬೌಲಿಂಗ್ ದಾಳಿಯ ಮೂಲಕ ಔಟ್ ಮಾಡಿದರು. ಸಿಂಕ್ಲೆರ್​ ತಮ್ಮ ಮೊದಲ ಟೆಸ್ಟ್ ವಿಕೆಟ್ ಪಡೆದ ತಕ್ಷಣ ಕ್ರೀಡಾಂಗಣದಲ್ಲಿ ಬ್ಯಾಕ್​ ಫ್ಲಿಪ್​ನೊಂದಿಗೆ ಸಂಭ್ರಮಿಸಿದರು. ಅದರ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದು ವೈರಲ್​ ಆಗಿದೆ.

RELATED ARTICLES

Related Articles

TRENDING ARTICLES