Monday, December 23, 2024

ಮಗನ ಗುಪ್ತಾಂಗಕ್ಕೆ ಗುಂಡಿಕ್ಕಿ ಕೊಂದ ಪಾಪಿ ತಂದೆ!

ಬೆಂಗಳೂರು: ಕ್ಷುಲ್ಲಕ ಕಾರಣಕ್ಕೆ ತಂದೆಯೇ ಮಗನಿಗೆ ಗುಂಡು ಹಾರಿಸಿ ಹತ್ಯೆ ಮಾಡಿರುವ ಘಟನೆ ಬೆಂಗಳೂರಿನ ಕಾಮಾಕ್ಷಿಪಾಳ್ಯ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

32 ವರ್ಷದ ನರ್ತನ್ ಬೋಪಣ್ಣ ತಂದೆಯಿಂದ ಕೊಲೆಯಾದ ವ್ಯಕ್ತಿ. ನಿನ್ನೆ ಸಂಜೆ ನರ್ತನ್ ತಂದೆ ಸುರೇಶ್ ಗುಂಡು ಹಾರಿಸಿ ಕೊಲೆ ಮಾಡಿದ್ದಾರೆ. ಸುರೇಶ್​ ಕುಡಿತದು ಹಣಕ್ಕಾಗಿ ಮಗನನ್ನು ಪೀಡಿಸುತ್ತಿದ್ದ ಈ ವಿಚಾರಕ್ಕೆ ಮನೆಯಲ್ಲಿ ತಂದೆ ಮತ್ತು ಮಗನ ನಡುವೆ ಗಲಾಟೆ ನಡೆದಿತ್ತು. ಹಣಕ್ಕಾಗಿ ಪೀಡಿಸುತ್ತಿದ್ದ ತಂದೆಯನ್ನು ರೂಂ ನಲ್ಲಿ ಹಾಕಿ ಕೂಡಿಹಾಕಲಾಗಿತ್ತು. ಈ ವೇಳೆ ಮನೆಯಲ್ಲಿದ್ದ ಲೈಸೆನ್ಸ್​ಡ್ ಗನ್​ ನಿಂದ ಬಾಗಿಲಿಗೆ ಸುರೇಶ್​ ಗುಂಡು ಹಾರಿಸಿದ್ದಾನೆ, ಈ ಗುಂಡು ಬಾಗಿಲಿನಿಂದ ತೂರಿ ನರ್ತನ್​ ಗುಪ್ತಾಂಗಕ್ಕೆ ತಾಗಿ ವಿಪರೀತ ರಕ್ತಸ್ರಾವವಾಗಿದೆ.

ಇದನ್ನೂ ಓದಿ: ಹೋಟೆಲ್​ಗಳಲ್ಲಿಅನವಶ್ಯಕವಾಗಿ ಕಾಲಹರಣ ಮಾಡಂಗಿಲ್ಲ: ಹೊಟೆಲ್ ಮಾಲೀಕರ ಸಂಘ!

ಸ್ಥಳೀಯರ ಮಾಹಿತಿ ಆಧರಿಸಿ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದರು. ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದ ನರ್ತನ್​​ನನ್ನ ಪೊಲೀಸರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಚಿಕಿತ್ಸೆ ಫಲಿಸದೆ ನರ್ತನ್​​​ ಸಾವನ್ನಪ್ಪಿದ್ದಾನೆ. ಈ ಸಂಬಂಧ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES

Related Articles

TRENDING ARTICLES