Sunday, November 3, 2024

ವರದಕ್ಷಿಣೆ ಕಿರುಕುಳ: ವಿಷ ಸೇವಿಸಿ ಗೃಹಿಣಿ ಆತ್ಮಹತ್ಯೆ

ನಂಜನಗೂಡು: ಮದುವೆಯಾಗಿ 12 ವರ್ಷವದರೂ ಗಂಡನ ಮನೆಯವರಿಂದ  ವರದಕ್ಷಿಣೆ ಕಿರುಕುಳ ತಾಳಲಾರದೆ ಗೃಹಿಣಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮೈಸೂರಿನ ಹೊಸಕೋಟೆಯಲ್ಲಿ ನಡೆದಿದೆ.

ವಿಜಯಲಕ್ಷ್ಮಿ(35) ಆತ್ಮಹತ್ಯೆ ಶರಣಾದ ಗೃಹಿಣಿ. ಹೊಸಕೋಟೆಯ ಹರೀಶ್, ಅತ್ತೆ ಮಲ್ಲಿಗಮ್ಮ, ಮಾವ ಮಹದೇವಮೂರ್ತಿ, ಮೈದುನರಾದ ರಾಘವೇಂದ್ರ, ಮಹೇಂದ್ರ ಕಿರುಕುಳ ನೀಡಿದ್ದ ಆರೋಪಿಗಳು.

ಘಟನೆಯ ವಿವರ: ಬೊಮ್ಮೇನಹಳ್ಳಿಯವರಾದ ವಿಜಯಲಕ್ಷ್ಮಿ, 12 ವರ್ಷಗಳ ಹಿಂದೆ ಹೊಸಕೋಟೆ ಹರೀಶ್‌ನೊಂದಿಗೆ ಮದುವೆ ಮಾಡಿಕೊಡಲಾಗಿತ್ತು. ಚಿನ್ನಾಭರಣ ಕೊಟ್ಟು ಅದ್ಧೂರಿಯಾಗಿ ಮದುವೆ ಮಾಡಿಕೊಟ್ಟಿದ್ದ ಪೋಷಕರು. ಮದುವೆಯಾದ ಕೆಲವು ದಿನಗಳು ಸುಖವಾಗಿದ್ದರು. ಸುಖ ದಾಂಪತ್ಯಕ್ಕೆ ಇಬ್ಬರು ಮಕ್ಕಳನ್ನು ಪಡೆದಿದ್ದ ವಿಜಯಲಕ್ಷ್ಮಿ. ಆದರೆ ವರದಕ್ಷಿಣೆ ಆಸೆಗೆ ಬಿದ್ದ ಅತ್ತೆ ಮಾವ ಮೈದುನರು ಗಂಡನ ತಲೆ ಕೆಡಿಸಿ ಸಂಸಾರವನ್ನೇ ಕೆಡಿಸೆದ್ದಾರೆ.

ವಿಜಯಲಕ್ಷ್ಮೀಗೆ ನಿತ್ಯ ಕಿರುಕುಳ ನೀಡಲಾರಂಭಿಸಿದ ಹರೀಶ್ ಕುಟುಂಬ. ವರದಕ್ಷಿಣೆ ವಿಚಾರವಾಗಿ ಪತ್ನಿಯೊಂದಿಗೆ ಆಗಾಗ ಗಂಡನೂ ಗಲಾಟೆ ಮಾಡಿ ಮಾಡಿ ಹಲ್ಲೆ ನಡೆಸಿದ್ದು ಇದೆ. ಗಲಾಟೆ ವಿಚಾರವಾಗಿ ಈ ಹಿಂದೆ ಬಿಳಿಗೆರೆ ಪೊಲೀಸ್ ಠಾಣೆಯಲ್ಲಿ ಹಲವು ಬಾರಿ ದೂರು ನೀಡಿದ್ದ ವಿಜಯಲಕ್ಷ್ಮಿ. ಆದರೂ ಕಿರುಕುಳ ಮುಂದುವರಿಸಿದ್ದ ತುಸು ಹೆಚ್ಚೇ ಗಲಾಟೆ ಮಾಡುತ್ತಿದ್ದಾರೆ.

ತವರು ಮನೆಯಿಂದ ಹಣ ತರುವಂತೆ ಕಿರುಕುಳ 

ತವರು ಮನೆಯಿಂದ ಹಣ ತರುವಂತೆ ಅತ್ತೆ, ಮಾವ, ಮೈದುನರಿಂದಲೂ ದಿನನಿತ್ಯ ಕಿರುಕುಳ. ಇವರೊಂದಿಗೆ ಗಂಡನೂ ಸೇರಿ ಜಗಳ ಮಾಡಿದ್ದರಿಂದ ತನ್ನವರು ಯಾರೂ ಇಲ್ಲದಂತಾಗಿದ್ದಾರೆ ಎಂದ ನಿತ್ಯವೂ ಹಿಂಸೆ ಅನುಭವಿಸುತ್ತಿದ್ದಳು.

 ಇಬ್ಬರು ಮಕ್ಕಳನ್ನು ಬಿಟ್ಟು ಆತ್ಮಹತ್ಯೆ 

ಇಬ್ಬರು ಮಕ್ಕಳನ್ನು ಬಿಟ್ಟು ಗಂಡನ ಮನೆಯಲ್ಲೇ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಆತ್ಮಹತ್ಯೆ ಸುದ್ದಿ ತಿಳಿಯುತ್ತಿದ್ದಂತೆ ಆರೋಪಿಗಳು ಎಸ್ಕೇಪ್ 

ವರದಕ್ಷಿಣೆ ತರವಂತೆ ದಿನನಿತ್ಯ ಮಾನಸಿಕ, ದೈಹಿಕ ಕಿರುಕುಳ ನೀಡಿದ್ದ ಗಂಡ ಹರೀಶ್, ಮಾವ, ಅತ್ತೆ, ಮೈದುನರು ವಿಜಯಲಕ್ಷ್ಮಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಂತೆ ಪರಾರಿಯಾಗಿದ್ದಾರೆ. ಸದ್ಯ ಘಟನೆ ಸಂಬಂಧ ಬಿಳಿಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES

Related Articles

TRENDING ARTICLES