Friday, November 22, 2024

ಹೋಟೆಲ್​ಗಳಲ್ಲಿಅನವಶ್ಯಕವಾಗಿ ಕಾಲಹರಣ ಮಾಡಂಗಿಲ್ಲ: ಹೊಟೆಲ್ ಮಾಲೀಕರ ಸಂಘ!

ಬೆಂಗಳೂರು: ಇನ್ಮುಂದೆ ಬೆಂಗಳೂರಿನ ಹೋಟೆಲ್ & ರೆಸ್ಟೋರೆಂಟ್‌‌ಗಳಲ್ಲಿಅನವಶ್ಯಕ ಕಾಲಹರಣ ಮಾಡುವ ಕೆಲ ಗ್ರಾಹಕರಿಂದ ಹೋಟೆಲ್‌ ಮಾಲೀಕರು ಕಿರಿಕಿರಿ ಅನುಭವಿಸುತ್ತಿದ್ದು ಇದಕ್ಕೆ ಕಡಿವಾಣ ಹಾಕಲು ಹೋಟೆಲ್‌ ಮಾಲೀಕರ ಸಂಘ ನಿರ್ಧರಿಸಿದೆ.

ಇದನ್ನೂ ಓದಿ: ಮಕ್ಕಳ ಕೈಯಲ್ಲಿ ಕಮಲದ ಹೂ ಕಂಡು ರೊಚ್ಚಿಗೆದ್ದ ಕಾಂಗ್ರೆಸ್ ಶಾಸಕ ಶಿವಲಿಂಗೇಗೌಡ

ಕೋಟ್ಯಂತರ ಮಂದಿಗೆ ಜೀವನ ನೀಡಿರುವ ಬೆಂಗಳೂರಿನಲ್ಲಿ ಹೋಟೆಲ್‌‌ ಊಟವನ್ನು ನಂಬಿಕೊಂಡವರ ಸಂಖ್ಯೆಯೂ ಹೆಚ್ಚಾಗಿಯೇ ಇದೆ. ಅದೇ ಗ್ರಾಹಕರ ಬೇಡಿಕೆಗಳಿಗೆ ತಕ್ಕಂತೆ ಹೋಟೆಲ್‌ಗಳೂ ತಲೆ ಎತ್ತಿದ್ದು, ಕಾಫಿ, ತಿಂಡಿ, ಊಟ ಸೇರಿದಂತೆ ಹಲವು ರೀತಿಯ ಆಹಾರ ಪದಾರ್ಥಗಳನ್ನು ಪೂರೈಸುತ್ತಿವೆ. ಆದರೆ, ಕೆಲ ಗ್ರಾಹಕರು ಹೋಟೆಲ್‌‌ಗಳಲ್ಲಿ ಸುಖಾಸುಮ್ಮನೆ ಕಾಲಹರಣ ಮಾಡುತ್ತಿರುವುದು ಸಮಸ್ಯೆಯಾಗಿದೆ. ಇಂತಹ ಪ್ರಸಂಗಗಳಿಗೆ ಕಡಿವಾಣ ಹಾಕಲು ಹೋಟೆಲ್‌ ಮಾಲೀಕರ ನಿರ್ಧಾರ ಮಾಡಿದೆ.

ಒಂದಷ್ಟು ಬೋರ್ಡ್‌ಗಳನ್ನು ಅಳವಡಿಕೆ ಮಾಡುವುದು, ಅನವಶ್ಯಕ ಮಾತುಕತೆಗಳು ಬೇಡ ಎಂದು ಅರಿವು ಮೂಡಿಸಲು ಸಂಘವು ಮುಂದಾಗಲಿದೆ. ಒಟ್ಟಾರೆ ಇದಕ್ಕೆ ಗ್ರಾಹಕರು ಯಾವ ರೀತಿ ಸಕಾರಾತ್ಮಕವಾಗಿ ಸ್ಪಂದಿಸಲಿದ್ದಾರೆ ಎಂಬುವುದನ್ನು ಕಾದುನೋಡಬೇಕಿದೆ.

RELATED ARTICLES

Related Articles

TRENDING ARTICLES