ಹುಬ್ಬಳ್ಳಿ: ಧಾರವಾಡ ಲೋಕಸಭಾ ಅಭ್ಯರ್ಥಿ ನಾನೇ ಎಂದು ಸಂಸದ ಪ್ರಹ್ಲಾದ್ ಜೋಶಿಯವರು ಘೋಷಿಸಿಕೊಳ್ಳುವ ಮೂಲಕ ಮಾಜಿ ಸಿಎಂ ಜಗದೀಶ್ ಶೆಟ್ಟರ್‍ಗೆ ಪರೋಕ್ಷವಾಗಿ ಟಾಂಗ್ ನೀಡಿದ್ದಾರೆ.
ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಜೋಶಿ ಬಿಟ್ರೆ ಮತ್ತಿನ್ನೇನು ಅನ್ನೋ ಮೂಲಕ ನಾನೇ ಅಭ್ಯರ್ಥಿ ಎಂದರು. ಟಿಕೆಟ್ ವಿಚಾರವಾಗಿ ಜಗದೀಶ್ ಶೆಟ್ಟರ್, ಪ್ರಲ್ಹಾದ್ ಜೋಶಿ ಸ್ಪರ್ಧೆ ಕೇಳಿದ್ರೆ, ಅವರೇ ರೀ ಅವರನ್ನ ಬಿಟ್ಟು ಯಾರು..? ಯಾವ ಚರ್ಚೆ ಇಲ್ಲ ಸಾಹೇಬರೇ ಅಭ್ಯರ್ಥಿ ಎಂದು ಶಾಸಕ ಅರವಿಂದ್ ಬೆಲ್ಲದ್ ಸ್ಪಷ್ಟಪಡಿಸಿದರು.
6 ತಿಂಗಳ ಹಿಂದೆ ಶೆಟ್ಟರ್ ವಾಪಸ್ ಬರ್ತಾರೆ ಅಂತ ಹೇಳಿದ್ದೆ
ಪಕ್ಷಕ್ಕೆ ಶೆಟ್ಟರ್ ವಾಪಸ್ ಆಗಿದ್ದು ಸಂತೋಷ, ಒಳ್ಳೆಯದು. ಶೆಟ್ಟರ್ ಬಂದಿದ್ದು ಸಂತೋಷ ತಂದಿದೆ. ಈ ಭಾಗದಲ್ಲಿ ಎಲ್ಲರೂ ಒಂದುಗೂಡಿ ಪಕ್ಷ ಬಲವರ್ಧನೆ ಮಾಡುತ್ತೇವೆ. ನನ್ನದು ಯಾವುದೇ ವಿರೋಧ ಇಲ್ಲ ನಾನು ಆರು ತಿಂಗಳ ಹಿಂದೆ ಶೆಟ್ಟರ್ ವಾಪಸ್ ಬರ್ತಾರೆ ಅಂತ ಹೇಳಿದ್ದೆ. ನಾನು ಇದನ್ನು ಯಾವುದೇ ವ್ಯಂಗ್ಯದಿಂದ ಹೇಳುತ್ತಿಲ್ಲ ಸಹೃದಯದಿಂದ ಹೇಳುತ್ತಿದ್ದೇನೆ.
ನಮಗೆ ಲಿಂಗಾಯತ ಸೇರಿದಂತೆ ಎಲ್ಲಾ ಸಮುದಾಯ ಬೇಕು. ಲಕ್ಷ್ಮಣ ಸವದಿಯಲ್ಲಿ ಬಿಜೆಪಿಯ ವೈಚಾರಿಕ ರಕ್ತವಿದೆ. ಅವರು ವಾಪಸ್ ಪಕ್ಷಕ್ಕೆ ಬಂದ್ರೆ ಸಂತೋಷವಾಗಿದೆ ಎಂದರು.