Wednesday, January 22, 2025

ದಿನ ಭವಿಷ್ಯ :ಇಂದು ಆಯುಷ್ಮಾನ್ ಯೋಗ, ಈ ರಾಶಿಗೆ ಕೈ ತುಂಬಾ ಹಣ

2024 ಜನವರಿ 27ರ ಶನಿವಾರವಾದ ಇಂದು, ಚಂದ್ರನು ಸಿಂಹರಾಶಿಗೆ ಚಲಿಸಲಿದ್ದಾನೆ. ಇಂದು ಆಯುಷ್ಮಾನ್ ಯೋಗ, ಸೌಭಾಗ್ಯ ಯೋಗ, ಲಕ್ಷ್ಮೀ ನಾರಾಯಣ ಯೋಗ ಮತ್ತು ಆಶ್ಲೇಷ ನಕ್ಷತ್ರದ ಶುಭ ಸಂಯೋಗ ನಡೆಯುತ್ತಿದೆ. ಒಟ್ಟಾರೆ ಗ್ರಹಗಳ ಸ್ಥಾನ ಬದಲಾವಣೆಯಿಂದ ಮೇಷದಿಂದ ಮೀನ ರಾಶಿವರೆಗಿನ ಎಲ್ಲಾ ರಾಶಿಯವರಿಗೆ ಇಂದಿನ ರಾಶಿ ಭವಿಷ್ಯ ಹೇಗಿರಲಿದೆ? ಯಾವ ರಾಶಿಯವರಿಗೆ ಅದೃಷ್ಟ? ಯಾವ ರಾಶಿಯವರು ಎಚ್ಚರದಿಂದಿರಬೇಕು ಎನ್ನುವುದನ್ನು ತಿಳಿದುಕೊಳ್ಳಿ.

ಮೇಷ: ನಿಮ್ಮ ಆಪ್ತರು ಸಮಸ್ಯೆಯನ್ನು ಉಂಟು ಮಾಡುವ ಸಾಧ್ಯತೆ ಇದೆ. ಅಗತ್ಯ ವಸ್ತುಗಳ ಖರೀದಿಯಿಂದ ಖರ್ಚು ಹೆಚ್ಚಾಗಲಿದೆ. ಅನಗತ್ಯ ಒತ್ತಡ ನಿಮ್ಮ ಮನಸ್ಸಿಗೆ ಘಾಸಿ ಮಾಡುವ ಸಾಧ್ಯತೆ ಇದೆ. ಸಂಗಾತಿಯ ಮಧುರ ಮಾತುಗಳು ಹಿತವೆನಿಸುಬಹುದು. ಕೌಟುಂಬಿಕವಾಗಿ ಶುಭ ಫಲ.

ವೃಷಭ: ದೀರ್ಘಕಾಲದ ಪ್ರಯತ್ನ ನಿಮಗೆ ಯಶಸ್ಸನ್ನು ತಂದು ಕೊಡಲಿದೆ. ಈ ಹಿಂದೆ ನೀವು ಮಾಡಿದ ಸಹಾಯ ಇಂದು ಫಲ ನೀಡಲಿದೆ. ಹಿರಿಯರಿಂದ ಪ್ರಶಂಸೆ ವ್ಯಕ್ತವಾಗಲಿದೆ. ಉದ್ಯೋಗದಲ್ಲಿ ಯಶಸ್ಸು ಸಿಗಲಿದೆ. ವ್ಯಾಪಾರವು ಅಭಿವೃದ್ಧಿ ಕಾಣಲಿದೆ. ಆರೋಗ್ಯ ಉತ್ತಮವಾಗಿರಲಿದೆ. ಕೌಟುಂಬಿಕವಾಗಿ ಮಿಶ್ರ ಫಲ.

ಮಿಥುನ: ಹತಾಶೆಯ ಭಾವನೆಯಿಂದ ಮನಸ್ಸಿನ ನೆಮ್ಮದಿಯನ್ನು ಹಾಳು ಮಾಡಿಕೊಳ್ಳುವುದು ಬೇಡ. ಅನಿರೀಕ್ಷಿತ ಲಾಭ ಸಿಗುವ ಸಾಧ್ಯತೆ ಇದೆ. ಪ್ರೀತಿಪಾತ್ರರ ಜತೆ ವಾದಗಳಿಗೆ ಕಾರಣವಾಗಬಹುದಾದ ವಿವಾದಾತ್ಮಕ ವಿಷಯಗಳನ್ನು ತಪ್ಪಿಸಿ, ಎಚ್ಚರಿಕೆಯಿಂದ ಮಾತನಾಡಿ. ಆರೋಗ್ಯದ ಕುರಿತು ಕಾಳಜಿ ಇರಲಿ. ಆರ್ಥಿಕವಾಗಿ ಸದೃಢರಾಗಿರಿ. ಉದ್ಯೋಗಿಗಳಿಗೆ ಶುಭ ಫಲ.

ಇದನ್ನೂ ಓದಿ: ಹೋಟೆಲ್​ಗಳಲ್ಲಿಅನವಶ್ಯಕವಾಗಿ ಕಾಲಹರಣ ಮಾಡಂಗಿಲ್ಲ: ಹೊಟೆಲ್ ಮಾಲೀಕರ ಸಂಘ!

ಕಟಕ: ಮಾನಸಿಕವಾಗಿ ಮತ್ತು ದೈಹಿಕವಾಗಿ ಆರೋಗ್ಯ ಪರಿಪೂರ್ಣವಾಗಿರಲಿದೆ. ಹರ್ಷ ತುಂಬಿದ ಮನಸ್ಸು ನಿಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸಲಿದೆ. ಹಳೆಯ ಬಾಕಿ ಮರುಪಾವತಿ ಮಾಡುವ ಸಾಧ್ಯತೆ ಇದೆ. ಆರ್ಥಿಕ ಪ್ರಗತಿ ಸಾಧಾರಣವಾಗಿರಲಿದೆ. ಉದ್ಯಮಿಗಳಿಗೆ ಒಳ್ಳೆಯ ದಿನ ಇರಲಿದೆ. ವ್ಯಾಪಾರದ ಉದ್ದೇಶಕ್ಕಾಗಿ ಕೈಗೊಂಡ ಪ್ರವಾಸ ಸಕಾರಾತ್ಮಕ ಫಲಿತಾಂಶವನ್ನು ನೀಡುತ್ತದೆ. ಉದ್ಯೋಗಿಗಳಿಗೆ ಯಶಸ್ಸು ಸಿಗಲಿದೆ. ಕೌಟುಂಬಿಕವಾಗಿ ಶುಭ ಫಲ.

ಸಿಂಹ: ಬಹಳ ದಿನಗಳಿಂದ ಕಾಡುತ್ತಿರುವ ಸಮಸ್ಯೆಗೆ ಪರಿಹಾರ ಸಿಗಲಿದೆ. ಭವಿಷ್ಯದ ಹೂಡಿಕೆ ವ್ಯವಹಾರದ ಕುರಿತಾಗಿ ಆಲೋಚನೆ ಮಾಡುವಿರಿ. ನಿಮ್ಮ ಹಿಂದೆ ನಿಮಗೆ ಆಗದವರು ಪಿತೂರಿ ನಡೆಸುವ ಸಾಧ್ಯತೆ ಇದೆ. ಹೀಗಾಗಿ ಅಂಥವರ ಬಗ್ಗೆ ಎಚ್ಚರಿಕೆ ಇರಲಿ. ದಿಢೀರ್ ಪ್ರಯಾಣ ಬೆಳೆಸುವ ಸಾಧ್ಯತೆ‌ ಇದೆ. ಉದ್ಯೋಗಿಗಳಿಗೆ ಶುಭ ಫಲ ಇರಲಿದೆ. ಕೌಟುಂಬಿಕವಾಗಿ ಮಿಶ್ರ ಫಲ.

ಕನ್ಯಾ: ಸೃಜನಾತ್ಮಕ ಕ್ಷೇತ್ರಗಳಲ್ಲಿರುವವರು ಬಹಳ ದಿನಗಳಿಂದ ಕಾಯುತ್ತಿದ್ದ ಪ್ರಸಿದ್ಧಿ ಮತ್ತು ಗುರುತಿಸುವಿಕೆಯನ್ನು ಪಡೆಯುವ ಯಶಸ್ವಿ ದಿನ ಇದಾಗಿರಲಿದೆ. ಭೂಮಿ ಸಂಬಂಧಿ ವ್ಯಾಪಾರ ವ್ಯವಹಾರಗಳಲ್ಲಿ ಯಶಸ್ಸು ಸಿಗಲಿದೆ. ಆರೋಗ್ಯ ಪರಿಪೂರ್ಣವಾಗಿರಲಿದೆ. ಉದ್ಯೋಗಿಗಳಿಗೆ ದಿನಕ್ಕಿಂತ ಹೆಚ್ಚಿನ ಸಂತೋಷ ಆಗಲಿದೆ. ಆರ್ಥಿಕ ಚಟುವಟಿಕೆ ಗರಿಗೆದರಲಿದೆ. ದಿನದ ಕೊನೆಯಲ್ಲಿ ಕೌಟುಂಬಿಕ ಕಲಹಗಳು ನಡೆಯುವ ಸಾಧ್ಯತೆ ಇದೆ. ಮಾತಿನಲ್ಲಿ ಹಿಡಿತವಿರಲಿ. ಕೌಟುಂಬಿಕವಾಗಿ ಮಿಶ್ರ ಫಲ.

ತುಲಾ: ಒತ್ತಡ ಹೆಚ್ಚಾಗಲಿದೆ. ಸ್ನೇಹಿತರೊಂದಿಗೆ ಕಾಲ ಕಳೆಯುವ ಸಾಧ್ಯತೆ ಇದೆ. ವ್ಯಾಪಾರ – ವ್ಯವಹಾರದಲ್ಲಿ ತೊಡಗಿರುವವರಿಗೆ ದಿನದ ಮಟ್ಟಿಗೆ ಹೆಚ್ಚಿನ ಲಾಭ ಸಿಗಲಿದೆ. ಕುಟುಂಬ ಸಹಿತರಾಗಿ ಪ್ರಯಾಣ ಬೆಳೆಸುವ ಸಾಧ್ಯತೆ ಇದೆ. ಆರೋಗ್ಯದ ಕುರಿತು ಕಾಳಜಿ ಇರಲಿ. ಉದ್ಯೋಗಿಗಳಿಗೆ ಶುಭ ಫಲ ಇರಲಿದೆ. ಆರ್ಥಿಕವಾಗಿ ಪ್ರಗತಿ ಕಾಣುವಿರಿ. ಕೌಟುಂಬಿಕವಾಗಿ ಶುಭ ಫಲ.

ಇದನ್ನೂ ಓದಿ: ಮಕ್ಕಳ ಕೈಯಲ್ಲಿ ಕಮಲದ ಹೂ ಕಂಡು ರೊಚ್ಚಿಗೆದ್ದ ಕಾಂಗ್ರೆಸ್ ಶಾಸಕ ಶಿವಲಿಂಗೇಗೌಡ

ವೃಶ್ಚಿಕ: ವ್ಯಾಪಾರಿಗಳಿಗೆ ಹೆಚ್ಚಿನ ಲಾಭವಾಗಲಿದೆ. ನಿಮ್ಮ ಸಂತೋಷದ ಸಂಗತಿಗಳನ್ನು ಇತರರೊಂದಿಗೆ ಹಂಚಿಕೊಳ್ಳುವ ಸಾಧ್ಯತೆ ಇದೆ. ಆರೋಗ್ಯ ಪರಿಪೂರ್ಣವಾಗಿರಲಿದೆ. ಅಗತ್ಯ ವಸ್ತುಗಳ ಖರೀದಿಯಿಂದ ಆರ್ಥಿಕವಾಗಿ ಸಾಧಾರಣ ಪ್ರಗತಿಯನ್ನು ಕಾಣುವಿರಿ. ಅಮೂಲ್ಯ ವಸ್ತುಗಳ ಬಗ್ಗೆ ಜಾಗೃತಿ ಇರಲಿ. ಉದ್ಯೋಗಿಗಳಿಗೆ ಶುಭ ಫಲ ಇರಲಿದೆ. ಕೌಟುಂಬಿಕವಾಗಿ ಮಿಶ್ರ ಫಲ.

ಧನಸ್ಸು: ಕೆಲವು ಪ್ರಮುಖ ನಿರ್ಧಾರಗಳು ನಿಮ್ಮ ಮೇಲೆ ಪರಿಣಾಮ ಬೀರಬಹುದು. ಅದರ ಹೊರತಾಗಿ ಇಂದು ಮಾಡಿದ ಹೂಡಿಕೆ ನಿಮ್ಮ ಅಭ್ಯುದಯ ಮತ್ತು ಆರ್ಥಿಕ ಭದ್ರತೆಯನ್ನು ಹೆಚ್ಚಿಸುತ್ತದೆ. ಕುಟುಂಬ ಸದಸ್ಯರ ಮಾತುಗಳು ನಿಮ್ಮನ್ನು ಘಾಸಿಗೊಳಿಸಬಹುದು. ಆರೋಗ್ಯದ ಕುರಿತು ಕಾಳಜಿ ಇರಲಿ. ಉದ್ಯೋಗಿಗಳಿಗೆ ಮಿಶ್ರ ಫಲ ಇರಲಿದ್ದು, ಆರ್ಥಿಕ ಪ್ರಗತಿ ಸಾಧಾರಣವಾಗಿರಲಿದೆ. ಕೌಟುಂಬಿಕವಾಗಿ ಮಿಶ್ರ ಫಲ.

ಮಕರ: ಆರೋಗ್ಯದ ಕುರಿತು ವಿಶೇಷ ಕಾಳಜಿ ವಹಿಸಿ. ಅದರಲ್ಲಿಯೂ ಗರ್ಭಿಣಿಯರು ಹೆಚ್ಚಿನ ಮುತುವರ್ಜಿ ವಹಿಸಬೇಕು. ಅನಾವಶ್ಯಕ ಖರ್ಚುಗಳಿಂದ ಆರ್ಥಿಕವಾಗಿ ಬಳಲುವ ಸಾಧ್ಯತೆ ಇದೆ. ಸಂಬಂಧಪಡದೆ ಇರುವ ವಿಷಯದ ಕುರಿತು ಮೂಗು ತೂರಿಸುವುದು ಬೇಡ. ಟೀಕೆಗಳನ್ನು ಎದುರಿಸಬೇಕಾದಿತು, ಎಚ್ಚರಿಕೆ ಇರಲಿ. ಉದ್ಯೋಗಿಗಳಿಗೆ ಒತ್ತಡ ಹೆಚ್ಚಾಗಲಿದೆ. ಕೌಟುಂಬಿಕವಾಗಿ ಸಾಧಾರಣ ಫಲ.

ಕುಂಭ: ವಿವಾದಾತ್ಮಕ ವಿಷಯಗಳಿಂದ ದೂರ ಇರಿ. ಮಾತಿನಲ್ಲಿ ಹಿಡಿತವಿರಲಿ. ತಮ್ಮ ಬಳಿ ಯಾರಾದರೂ ಹಣದ ಸಹಾಯ ಬೇಡುವ ಸಾಧ್ಯತೆ ಇದೆ. ಈ ನಿಟ್ಟಿನಲ್ಲಿ ಆಲೋಚಿಸಿ ನಿರ್ಧಾರ ಮಾಡಿ. ಆರೋಗ್ಯ ಪರಿಪೂರ್ಣವಾಗಿರಲಿದೆ. ಉದ್ಯೋಗಿಗಳಿಗೆ ಮಧ್ಯಮ ಫಲ ಇರಲಿದೆ. ಕೌಟುಂಬಿಕವಾಗಿ ಶುಭ ಫಲ.

ಮೀನ: ಮಾನಸಿಕ ಒತ್ತಡದಿಂದ ಹೊರಬರಲು ಆಧ್ಯಾತ್ಮಿಕ ಸಾಧನೆ ಮಾರ್ಗಸೂಚಿಯಾಗುವುದು. ಆರೋಗ್ಯ ಪರಿಪೂರ್ಣವಾಗಿರಲಿದೆ. ಕೆಲಸ ಕಾರ್ಯಗಳಲ್ಲಿ ಯಶಸ್ಸು ಸಿಗಲಿದೆ. ಆರ್ಥಿಕವಾಗಿ ಸದೃಢರಾಗಿರುವಿರಿ. ಉದ್ಯೋಗಿಗಳಿಗೆ ಅಭದ್ರತೆಯ ಭಾವನೆ ಕಾಡಲಿದೆ. ನಿಮ್ಮ ಸಹನೆಯನ್ನು ಪರೀಕ್ಷಿಸು ಸಾಧ್ಯತೆ ಇದೆ. ಕೌಟುಂಬಿಕವಾಗಿ ಮಿಶ್ರ ಫಲ.

RELATED ARTICLES

Related Articles

TRENDING ARTICLES