ಹಾವೇರಿ: ಪ್ರೀತಿ ನಿರಾಕರಿಸಿದಕ್ಕಾಗಿ ಪ್ರೇಯಸಿಗೆ ಚಾಕು ಹಾಕಿರುವ ಘಟನೆ ಶಿಗ್ಗಾವಿ ಪಟ್ಟಣದ ಜಯಲಕ್ಷ್ಮಿ ಮೆಡಿಕಲ್ ಶಾಪ್ ಬಳಿ ನಿನ್ನೆ ಸಂಜೆ ನಡೆದಿದ್ದು,ತಡವಾಗಿ ಬೆಳಕಿಗೆ ಬಂದಿದೆ.
ಲಕ್ಷ್ಮೀ ಪವಾರ ಎಂಬ ಯುವತಿಯ ಮೇಲೆ ಈ ಪಾಗಲ್ ಪ್ರೇಮಿ ಚಾಕುವಿನಿಂದ ತಿವಿದಿದ್ದಾನೆ.
ಕಳೆದ ಹಲವು ತಿಂಗಳಿನಿಂದ ಪ್ರೀತಿಸುವಂತೆ ದುಂಬಾಲು ಬಿದ್ದಿದ್ದ ಭಗ್ನ ಪ್ರೇಮಿ ಮಹೇಶನ್ನು ಲಕ್ಷ್ಮೀ ಪವಾರ ಎಂಬ ಯುವತಿ ಅವನ ಪ್ರೀತಿಯನ್ನೂ ನಿರಾಕರಿಸಿದ್ದಾಳೆ. ಆತ ಕೋಪಗೊಂಡು ಚಾಕುವಿನಿಂದ ಇರಿದು ಬೇದರಿಕೆ ಹಾಕಿದ್ದಾನೆ.
ಇದನ್ನೂ ಓದಿ: ವರದಕ್ಷಿಣೆ ಕಿರುಕುಳ: ವಿಷ ಸೇವಿಸಿ ಗೃಹಿಣಿ ಆತ್ಮಹತ್ಯೆ
ಗಾಯಗೊಂಡ ಯುವತಿಗೆ ಶಿಗ್ಗಾವಿ ತಾಲೂಕ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಶಿಗ್ಗಾವಿಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.