Monday, December 23, 2024

ಎತ್ತಿನಗಾಡಿಯಲ್ಲಿ ನಟ ಡಿಬಾಸ್​ ದರ್ಶನ್​ಗೆ ಅದ್ದೂರಿ ಸ್ವಾಗತ!

ಮಂಡ್ಯ: ರೈತ ಮುಖಂಡ ದಿ.ಕೆ.ಎಸ್​ ಪುಟ್ಟಣ್ಣಯ್ಯ ರ 75 ನೇ ಜನ್ಮದಿನಕ್ಕೆ ಮಂಡ್ಯದ ಪಾಂಡವಪುರಕ್ಕೆ ಆಗಮಿಸಿದ ಚಾಲೆಂಜಿಂಗ್ ಸ್ಟಾರ್​ ದರ್ಶನ್​ ಅವರನ್ನು ಮಂಡ್ಯದ ಜನತೆ ಅದ್ದೂರಿಯಾಗಿ ರೋಡ್ ಶೋ ಮೆರವಣೊಗೆ ಮಾಡುವ ಮೂಲಕ ಅದ್ದೂರಿ ಸ್ವಾಗತ ಕೋರಲಾಯಿತು.

ಇದನ್ನೂ ಓದಿ: ಪ. ಬಂಗಾಳದಲ್ಲಿ ರಾಹುಲ್ ನ್ಯಾಯ ಯಾತ್ರೆ ಸಭೆಗೆ ಅನುಮತಿಯಿಲ್ಲ!

ಕರ್ನಾಟಕ ರಾಜ್ಯ ರೈತ ಸಂಘದ ವತಿಯಿಂದ ನಡೆದ ಈ ಕಾರ್ಯಕ್ರಮದಲ್ಲಿ ನಟ ದರ್ಶನ್​ ರನ್ನು ಎತ್ತಿನಗಾಡಿ ಮೆರವಣಿಗೆ ಮೂಲಕ ಶಾಸಕ ದರ್ಶನ್ ಪುಟ್ಟಣ್ಣಯ್ಯ ಕರೆತಂದರು. ಈ ವೇಳೆ ಜಾನಪದ ಕಲಾತಂಡಗಳ ಮೂಲಕ ಭರ್ಜರಿ ಮೆರವಣಿಗೆ ನಡೆಸಲಾಯಿತು.

ಈ ಕಾರ್ಯಕ್ರಮದಲ್ಲಿ ಕಾಟೇರ ಸಿನಿಮಾ ತಂಡಕ್ಕೆ ಅಭಿನಂದನೆ ಸಲ್ಲಿಸಲಾಯ್ತು. ಕಾಟೇರ ಚಿತ್ರ ಸಕ್ಸಸ್ ಹಿನ್ನೆಲೆಯಲ್ಲಿ ನಟ ದರ್ಶನ್ ಸೇರಿದಂತೆ ಕಾಟೇರ ಚಿತ್ರ ತಂಡವನ್ನು ಸನ್ಮಾನಿಸಲಾಯ್ತು.

RELATED ARTICLES

Related Articles

TRENDING ARTICLES