ನವದೆಹಲಿ: ದೆಹಲಿಯಲ್ಲಿ 75ನೇ ವರ್ಷದ ಗಣರಾಜ್ಯೋತ್ಸವ ಆಚರಣೆ ಸಂಭ್ರಮ ಮನೆ ಮಾಡಿದೆ. ಬೆಳಗ್ಗೆ 10:30ಕ್ಕೆ ದೆಹಲಿಯ ಕರ್ತವ್ಯ ಪಥ್‌ನಲ್ಲಿ ಪರೇಡ್ ಆರಂಭವಾಗಲಿದೆ.
ವಿಕ್ಷಿತ್ ಭಾರತ್ ಮತ್ತು ಭಾರತ್ – ಲೋಕತಂತ್ರ ಕೀ ಮಾತೃಕಾ ಎಂಬುದು ಈ ವರ್ಷದ ಈ ಸಲದ ಪರೇಡ್ ಆಗಿದೆ. ಪರೇಡ್ನಲ್ಲಿ ಈ ಸಲ 95 ಸದಸ್ಯ ಮೆರವಣಿಗೆಯ ತುಕಡಿ ಮತ್ತು 33 ಸದಸ್ಯ ಬ್ಯಾಂಡ್ ತುಕಡಿಗಳಿವೆ. ಸುಮಾರು 90 ನಿಮಿಷಗಳವರೆಗೆ ಪರೇಡ್ ನಡೆಯಲಿದೆ.
ಇದನ್ನೂ ಓದಿ: ಮೈಸೂರಿಗೆ ಬಂದ ಕೂಡಲೇ ಯದುವೀರ್ ಒಡೆಯರ್ ಭೇಟಿಯಾದ ಶಿಲ್ಪಿ ಅರುಣ್ ಯೋಗಿರಾಜ್
ಮೊದಲ ಬಾರಿಗೆ ದೆಹಲಿ ಮಹಿಳಾ ಪೊಲೀಸ್ ತಂಡ ಪಥ ಸಂಚಲನದಲ್ಲಿ ಭಾಗಿಯಾಗಲಿದೆ. ಇನ್ನು ಕಾರ್ಯಕ್ರಮ ವೀಕ್ಷಿಸಲು 42,000 ಪಾಸ್ಗಳನ್ನು ನೀಡಲಾಗಿದೆ. ಇನ್ನು, ಗಣರಾಜ್ಯೋತ್ಸವ ಸಮಾರಂಭದಲ್ಲಿ ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರೋನ್ ಮುಖ್ಯ ಅತಿಥಿಯಾಗಲಿದ್ದಾರೆ. ಸದ್ಯ, ಕೆಂಪುಕೋಟೆಯಲ್ಲಿ ಧ್ವಜಾರೋಹಣಕ್ಕೆ ಸಕಲ ಸಿದ್ಧತೆ ನಡೆಸಲಾಗ್ತಿದೆ.