Sunday, January 19, 2025

ಪ್ರಹ್ಲಾದ್​ ಜೋಶಿ ಕ್ಷೇತ್ರದ ಮೇಲೆ ಶೆಟ್ಟರ್​ ಕಣ್ಣು!

ಬೆಂಗಳೂರು:  ಮಾಜಿ ಸಿಎಂ ಜಗದೀಶ್​ ಶೆಟ್ಟರ್​​​​ ಕಾಂಗ್ರೆಸ್​​ ತೊರೆದು ಬಿಜೆಪಿ ಸೇರ್ತಿದ್ದಂತೆ ಕಳೆದ ಬಾರಿ ವಿಧಾನಸಭೆ ಟಿಕೆಟ್​ ಕೈತಪ್ಪಿಸಿದ್ದ ಸ್ವಪಕ್ಷದವರ ವಿರುದ್ಧ ಸಮರ ಸಾರಲು ಮುಂದಾಗಿದ್ದಾರೆ.

ಕಳೆದ ಬಾರಿ ವಿಧಾನಸಭೆ ಟಿಕೆಟ್​ ಕೈತಪ್ಪಿಸಿದ್ದು ಸ್ವತಃ ಕೇಂದ್ರ ಸಚಿವ ಪ್ರಹ್ಲಾದ್​ ಜೋಶಿ ಎಂದು ಬಹಿರಂಗವಾಗಿಯೇ ಗುಡುಗಿದ್ದರು. ಜೋಶಿ ವಿರುದ್ಧ ಸೇಡು ತೀರಿಸಿಕೊಳ್ಳಲು ಜೋಶಿ ಕ್ಷೇತ್ರ ಧಾರವಾಡ ಲೋಕಸಭಾ ಕ್ಷೇತ್ರದ ಮೇಲೆ ಮಾಜಿ ಸಿಎಂ ಜಗದೀಶ್​ ಶೆಟ್ಟರ್​​ ಕಣ್ಣಿಟ್ಟಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: 2024ರ ರಾಷ್ಟ್ರಪತಿ ಪದಕಕ್ಕೆ ಪೊಲೀಸ್ ಇನ್ಸ್‌ಪೆಕ್ಟರ್ ಎಂ.ಆರ್​ ಹರೀಶ್ ಆಯ್ಕೆ!

ಧಾರವಾಡ ಲೋಕಸಭಾ ಕ್ಷೇತ್ರ ಈ ಹಿಂದಿನಿಂದಲೂ ಲಿಂಗಾಯತರ ಕ್ಷೇತ್ರ. ಹೀಗಾಗಿ ಈ ಬಾರಿ ಧಾರವಾಡ ಲೋಕಸಭಾ ಕ್ಷೇತ್ರದ ಟಿಕೆಟ್​​ ಲಿಂಗಾಯತರಿಗೆ ನೀಡಬೇಕೆಂದು ಷರತ್ತು ಹಾಕಿಯೇ ಪಕ್ಷ ಸೇರ್ಪಡೆಗೊಂಡಿದ್ದಾರೆ ಎನ್ನಲಾಗಿದೆ.

RELATED ARTICLES

Related Articles

TRENDING ARTICLES