Wednesday, January 22, 2025

ನಟ ದರ್ಶನ್ ಜೊತೆಗಿನ 10 ವರ್ಷದ ಪ್ರೀತಿಪೂರ್ವಕ ಸಂಬಂಧ ಒಪ್ಪಿಕೊಂಡ ಪವಿತ್ರ ಗೌಡ 

ಬೆಂಗಳೂರು: ಕಳೆದ ಕೆಲವು ವರ್ಷಗಳಿಂದ ದರ್ಶನ್ ಹಾಗೂ ಪವಿತ್ರಾ ಗೌಡ ರಿಲೇಷನ್‌ಶಿಪ್‌ನಲ್ಲಿದ್ದಾರೆ ಅನ್ನೋ ಮಾತುಗಳು ಕೇಳಿ ಬಂದಿದ್ದವು.  ದರ್ಶನ್ ಜೊತೆಗಿನ ಒಂದಿಷ್ಟು ಫೋಟೋಗಳನ್ನು ನಟಿ, ಮಾಡೆಲ್ ಆಗಿರುವ ಪವಿತ್ರಾ ಗೌಡ ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಅಷ್ಟೇ ಅಲ್ಲದೆ “ಇದು 10 ವರ್ಷದ ಸುಂದರ ಸಂಬಂಧ” ಎಂದು ಕೂಡ ಹೇಳಿದ್ದರು. ಇದನ್ನು ದರ್ಶನ್ ಪತ್ನಿ ವಿಜಯಲಕ್ಷ್ಮೀ ಅವರು ವಿರೋಧಿಸಿ, ಪವಿತ್ರಾ ಅವರ ಪತಿಯ ಜೊತೆಗಿನ ಫೋಟೋಗಳನ್ನು ಹಂಚಿಕೊಂಡಿದ್ದರು. ಅಷ್ಟೇ ಅಲ್ಲದೆ ಪವಿತ್ರಾಗೆ ಕಾನೂನು ಕ್ರಮ ಕೈಗೊಳ್ಳೋದಾಗಿ ಎಚ್ಚರಿಕೆ ಕೂಡ ಕೊಟ್ಟಿದ್ದರು. ಇದಕ್ಕೆ ಪವಿತ್ರಾ ಈಗ ತಿರುಗೇಟು ಕೊಟ್ಟಿದ್ದಾರೆ.

ಪೋಸ್ಟ್​ನಲ್ಲಿ ಏನಿದೆ..? 

ನಾನು ಪವಿತ್ರಾ ಗೌಡ, ನನ್ನ ಮಗಳು ಖುಷಿ ಗೌಡ. ನಾನು ಸಂಜಯ್ ಎಂಬ ವ್ಯಕ್ತಿಯನ್ನು ಮದುವೆಯಾಗಿದ್ದು ನಂತರ ಖುಷಿ ಗೌಡ ಹುಟ್ಟಿರುತ್ತಾಳೆ. ನಮ್ಮ ಜೀವನದಲ್ಲಿ ಉಂಟಾದ ಸಮಸ್ಯೆಗಳಿಂದ ನಾನು ಸಂಜಯ್ ಅವರಿಂದ ವಿಚ್ಛೇದನ ಪಡೆದಿದೇನೆ. ಇಲ್ಲಿಯವರೆಗೂ ಖುಷಿ ಗೌಡ ದರ್ಶನ್ ಶ್ರೀನಿವಾಸರವರ ಮಗಳೆಂದು ನಾನು ಎಲ್ಲೂ ಹೇಳಿಲ್ಲ!! ನಾನು ಹಾಗೂ ದರ್ಶನ್ ಶ್ರೀನಿವಾಸರವರು ಕಳೆದ 10 ವರ್ಷಗಳಿಂದ ಜೊತೆಯಲ್ಲಿ ಸಂತೋಷವಾಗಿದ್ದೀವಿ.

‘ನಾನು, ದರ್ಶನ್ ಜೊತೆಗಿರೋದಿಕ್ಕೆ ತೊಂದರೆ ಇಲ್ಲ ಅಂತ ವಿಜಯಲಕ್ಷ್ಮೀ ಹೇಳಿದ್ದರು

ನಾನು ನನ್ನ ಹಿತಾಸಕ್ತಿಗೋಸ್ಕರ ಈ ಥರ ಇಲ್ಲ, ಇದು ನಮ್ಮ ಪವಿತ್ರವಾದ ಪ್ರೀತಿ. ಕಳೆದ 10 ವರ್ಷದಿಂದ ಜೊತೆಗೆ ಇರೋದು ಸುಲಭವೂ ಅಲ್ಲ.ಈ ವಿಷಯ ವಿಜಯಲಕ್ಷ್ಮೀ ಅವರಿಗೂ ಮೊದಲೇ ತಿಳಿದಿರುತ್ತದೆ. ಈ ವಿಚಾರವಾಗಿ ವಿಜಯಲಕ್ಷ್ಮೀ ಅವರೇ ನನಗೆ ಹಲವಾರು ಬಾರಿ ಫೋನ್ ಮಾಡಿ ನನ್ನ ಬಳಿ ಮಾತನಾಡಿದ್ದು ವಿಜಯಲಕ್ಷ್ಮೀ ಅವರಿಗೆ ಯಾವುದೇ ರೀತಿಯ ತೊಂದರೆ ಇಲ್ಲವೆಂದು ತಿಳಿಸಿರುತ್ತಾರೆ. (ಅದರ ಕೆಲವು ಸಾಕ್ಷಿ ಹಾಗೂ ನನ್ನ ವಿಚ್ಛೇದನದ ಡಾಕ್ಯುಮೆಂಟ್ಸ್ ಸಮಯ ಬಂದಾಗ ಹಂಚಿಕೊಳ್ಳುತ್ತೇನೆ).

ಇದೀಗ ವಿಜಯಲಕ್ಕ್ಷ್ಮೀ ಅವರು ನನ್ನ ವಿರುದ್ಧವಾಗಿ ಪೋಸ್ಟ್‌ಗಳನ್ನು ಹಾಕುತ್ತಿರುವುದು ನನಗೆ ಬೇಸರ ಉಂಟು ಮಾಡಿದೆ. ನನ್ನ ಹಾಗೂ ನನ್ನ ವಯಸ್ಕ ಮಗಳಾದ ಖುಷಿ ಗೌಡಳ ಬಗ್ಗೆ ವಿಜಯಲಕ್ಷ್ಮೀ ದರ್ಶನ್ ಎಂಬ ಇನ್‌ಸ್ಟಾಗ್ರಾಮ್ ಪೋಸ್ಟ್‌ನಲ್ಲಿ ಬಹಳಷ್ಟು ಜನ ಕೆಟ್ಟ ಭಾಷೆಯಿಂದ ನಿಂದಿಸುವುದು ನನಗೆ ಮಾನಸಿಕ ನೋವು ಉಂಟುಮಾಡಿದೆ. ನನ್ನ ಜೀವನದ ಹಳೆಯ ವಿಚಾರಗಳನ್ನು ಹಾಗೂ ನನ್ನ ವೈಯಕ್ತಿಕ ಫೋಟೋಗಳನ್ನು ಬಳಕೆ ಮಾಡುವ ಹಕ್ಕು ಯಾರಿಗೂ ಇರುವುದಿಲ್ಲ.

ಈ ಮೂಲಕ ನಾನು ಹೇಳುವುದೇನೆಂದರೆ ನನಗೂ ಕಾನೂನು ಕ್ರಮ ತಗೊಳೋ ಹಕ್ಕು ಇದೆ, ಆದರೂ ನಾನು ಈ ವಿಚಾರವನ್ನು ದೊಡ್ಡದು ಮಾಡುತ್ತಿಲ್ಲ. ಎಚ್ಚರ ಇರಲಿ. ಕಾರಣ ನಾನು ನನ್ನನ್ನು ಪ್ರೀತಿಸುವವರ ಜೊತೆಗೆ ಸಂತೋಷದಿಂದಿರಬೇಕೆಂದು ನಿಶ್ಚಯಿಸಿದ್ದೇನೆ. ನಾನು ದರ್ಶನ್ ಲೈಫ್‌ಗೆ ಬರುವ ಮುನ್ನವೇ, ಅವರಿಬ್ಬರ ಮಧ್ಯೆ ಏನು ಸಮಸ್ಯೆ ಇದೆ, ದರ್ಶನ್ ಏನು ಅನುಭವಿಸಿದ್ದಾರೆ ಅಂತ ನಿಮಗೆಲ್ಲರಿಗೂ ಗೊತ್ತಿದೆ. ಎಲ್ಲದಕ್ಕಿಂತ ಮುಖ್ಯ ಆತ್ಮ ಗೌರವ ಎಂದು ಬರೆದುಕೊಂಡಿದ್ದಾರೆ.

RELATED ARTICLES

Related Articles

TRENDING ARTICLES