Sunday, December 22, 2024

ಮಕ್ಕಳ ಕೈಯಲ್ಲಿ ಕಮಲದ ಹೂ ಕಂಡು ರೊಚ್ಚಿಗೆದ್ದ ಕಾಂಗ್ರೆಸ್ ಶಾಸಕ ಶಿವಲಿಂಗೇಗೌಡ

ಹಾಸನ: ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಕಮಲದ ಹೂವು ಕಂಡು ಕಾಂಗ್ರೆಸ್ ಶಾಸಕ ಶಿವಲಿಂಗೇಗೌಡ ಗರಂ ಆಗಿದ್ದಾರೆ.

ಅರಸೀಕೆರೆಯಲ್ಲಿ ನಡೆದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಶಾಲಾ ಮಕ್ಕಳಿಂದ ನೃತ್ಯ ಪ್ರದರ್ಶನ ವೇಳೆ ಮಕ್ಕಳ ಕೈಯಲ್ಲಿ ಶಿಕ್ಷಕಿ ಕಮಲದ ಹೂ ನೀಡಿದ್ದಕ್ಕೆ ಕಾಂಗ್ರೆಸ್ ಪಕ್ಷದ ಅರಸೀಕೆರೆ ‌ಶಾಸಕ ಶಿವಲಿಂಗೇಗೌಡ ಆಕ್ಷೇಪ ವ್ಯಕ್ತಪಡಿಸಿದ ಘಟನೆ ನಡೆದಿದೆ.

ಘಟನೆಯ ವಿವರ: 

ಗಣರಾಜ್ಯೋತ್ಸವ ನಿಮಿತ್ತ ಕಾರ್ಯಕ್ರಮದಲ್ಲಿ ಶಾಲಾ ಮಕ್ಕಳಿಂದ ನೃತ್ಯ ಪ್ರದರ್ಶನ ನಡೆಯುತ್ತಿತ್ತು. ಮಕ್ಕಳಿಗೆ ದೇಶದ ಎಲ್ಲ ರಾಷ್ಟ್ರೀಯ ಚಿಹ್ನೆಗಳನ್ನು ಹಾಕಿ ಮಕ್ಕಳಿಂದ ನೃತ್ಯ ಮಾಡಿಸುತ್ತಿದ್ದ ಶಿಕ್ಷಕರು. ಚಿಹ್ನೆಗಳ ಸಮುಚ್ಚಯದಲ್ಲಿ ಕಮಲದ ಹೂ ಇರುವುದು ಗಮನಿಸಿದ ಶಾಸಕ ಶಿವಲಿಂಗೇಗೌಡ, ಕಮಲ ರಾಷ್ಟ್ರೀಯ  ಹೂ ಅನ್ನುವುದನ್ನೂ ಮರೆತು ಅದು ಬಿಜೆಪಿ ಪಕ್ಷದ ಚಿಹ್ನೆ ಎಂದು ತಪ್ಪಾಗಿ ಗ್ರಹಿಸಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಶಾಸಕ-ಶಿಕ್ಷಕಿ ಮಧ್ಯೆ ಮಾತಿನ ಚಕಮಕಿ:

ಇದರಿಂದ ಶಿಕ್ಷಕಿ ಸಹ ‘ಈ ರೀತಿ ಮಾತಾಡೋದು ಸರಿಹೋಗಲ್ಲ ಸರ್’ ಎಂದು ಶಿಕ್ಷಕಿ ಸಹ ಶಾಸಕರಿಗೆ ವಾರ್ನಿಂಗ್ ಕೊಟ್ಟಿದ್ದಾರೆ. ನನಗೆ ಎದುರು ಮಾತಾಡ್ತಿಯಾ ನಿನಗೆ ನೋಟಿಸ್ ನೀಡಬೇಕಾಗುತ್ತೆ ಎಂದು ಶಿಕ್ಷಕಿಗೆ ವಾರ್ನಿಂಗ್ ನೀಡಿದ ಶಾಸಕ. ಶಾಸಕ ಶಿಕ್ಷಕಿ ನಡುವೆ ಮಾತಿಗೆ ಮಾತು ಬೆಳೆಯುತ್ತಿದ್ದಂತೆ ಸ್ಥಳೀಯ ಮುಖಂಡರ ಮಧ್ಯೆ ಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದ್ದಾರೆ.

RELATED ARTICLES

Related Articles

TRENDING ARTICLES