Wednesday, January 8, 2025

ನಮ್ಮಪ್ಪ ಶಿಸ್ತಿನ ಸಿಪಾಯಿ ಆಗಿ ಬಿಜೆಪಿ ಸೇರಿದ್ದಾರೆ : ಪುತ್ರ ಸಂಕಲ್ಪ್ ಶೆಟ್ಟರ್

ಬೆಳಗಾವಿ : ನಮ್ಮ ಅಪ್ಪ ಶಿಸ್ತಿನ ಸಿಪಾಯಿ ಆಗಿ ಮತ್ತೆ ಬಿಜೆಪಿ ಪಕ್ಷ ಸೇರ್ಪಡೆಯಾಗಿದ್ದಾರೆ ಎಂದು ಶೆಟ್ಟರ್ ಪುತ್ರ ಸಂಕಲ್ಪ್ ಶೆಟ್ಟರ್ ಸಂತಸ ವ್ಯಕ್ತಪಡಿಸಿದ್ದಾರೆ.

ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಪ್ಪ ಬಿಜೆಪಿ ಸೇರ್ಪಡೆ ಸುದ್ದಿ ತುಂಬಾ ಖುಷಿ ತಂದಿದೆ. ಬಿಜೆಪಿ ಹೈಕಮಾಂಡ್ ಮುಂದೆ ಯಾವುದೇ ಬೇಡಿಕೆ ಇಟ್ಟಿಲ್ಲ ಎಂದು ಹೇಳಿದ್ದಾರೆ.

ಮೊದಲಿನಿಂದಲೂ ನಮ್ಮ ಕುಟುಂಬ ಜನ ಸಂಘದಿಂದ ಬಂದಿದೆ. ಜಗದೀಶ್ ಶೆಟ್ಟರ್ ಅವರು ಮೋದಿ ಅವರ ಕೈ ಬಲ ಬಡಿಸಲು ಬಿಜೆಪಿಗೆ ವಾಪಸ್ ಆಗಿದ್ದಾರೆ. ಇವತ್ತು ಬೆಳಗ್ಗೆ ಅಮಿತ್ ಶಾ ಅವರೊಂದಿಗೆ ಚರ್ಚೆ ಮಾಡಿ ಪಕ್ಷಕ್ಕೆ ವಾಪಸ್ ಬಂದಿದ್ದಾರೆ ಎಂದು ತಿಳಿಸಿದ್ದಾರೆ.

ಇನ್ನು, ಹಾವೇರಿ, ಬೆಳಗಾವಿ ಲೋಕಸಭೆ ಚುನಾವಣೆ ಬಗ್ಗೆ ಯಾವುದೇ ಚರ್ಚೆ ಆಗಲ್ಲ. ಡಿ.ಕೆ. ಶಿವಕುಮಾರ್ ಹೇಳಿಕೆಗೆ ಪ್ರತಿಕ್ರಿಯೆ ಕೊಡುವುದಿಲ್ಲ. ಇನ್ನು ಲಕ್ಷ್ಮಣ ಸವದಿ ಬಿಜೆಪಿ ಸೇರ್ಪಡೆ ಬಗ್ಗೆ ಅವರನ್ನೇ ಕೇಳಬೇಕು ಎಂದು ಶೆಟ್ಟರ್ ಪುತ್ರ ಸಂಕಲ್ಪ ಶೆಟ್ಟರ್ ಹೇಳಿದ್ದಾರೆ.

ನನ್ನ ಸ್ಪರ್ಧೆ ಬಗ್ಗೆ ಇನ್ನೂ ಚರ್ಚೆ ಮಾಡಿಲ್ಲ

ಜಗದೀಶ್​​ ಶೆಟ್ಟರ್​​ ಬಿಜೆಪಿ ಸೇರ್ಪಡೆ ಆಗಿರೋದು ಖುಷಿಯಾಗಿದೆ ಎಂದು ಶೆಟ್ಟರ್ ಸೊಸೆ ಶ್ರದ್ಧಾ ಶೆಟ್ಟರ್ ಹೇಳಿದ್ದಾರೆ. ಶೆಟ್ಟರ್ ಬಿಜೆಪಿಗೆ ಸೇರಿರುವುದು ನಮ್ಮ ಕುಟುಂಬಕ್ಕಷ್ಟೇ ಅಲ್ಲ, ಬಿಜೆಪಿ ಕಾರ್ಯಕರ್ತರಿಗೂ ಖುಷಿ ತಂದಿದೆ. ಉತ್ತರ ಕರ್ನಾಟಕ ಭಾಗದಲ್ಲಿ ಈ ದಿನ ಸಂತೋಷದ ಸಂದರ್ಭ. ನನ್ನ ಸ್ಪರ್ಧೆ ಬಗ್ಗೆ ನಾನು ಇನ್ನೂ ಚರ್ಚೆ ಮಾಡಿಲ್ಲ. ಬೇರೆಯವರಿಗೆ ಟಿಕೆಟ್ ಕೊಟ್ರೂ ಮಾಡ್ತೇವಿ, ನಮ್ಮ ಕುಟುಂಬಕ್ಕೆ ಸಿಕ್ರೂ ಮಾಡ್ತೇವಿ. ಹೈಕಮಾಂಡ್ ಏನೂ ನಿರ್ಧಾರ ತೆಗೆದುಕೊಳ್ಳುತ್ತೆ ಅದಕ್ಕೆ ನಾನು ಬದ್ದ ಎಂದು ತಿಳಿಸಿದ್ದಾರೆ.

RELATED ARTICLES

Related Articles

TRENDING ARTICLES