Tuesday, November 5, 2024

ಬಾಕ್ಸಿಂಗ್​ಗೆ ವಿದಾಯ ಹೇಳಿದ ಮೇರಿ ಕೋಂ!

ನವದೆಹಲಿ : ವಿಶ್ವಚಾಂಪಿಯನ್​ ಮತ್ತು ಒಲಿಂಪಿಕ್​ ಪದಕ ವಿಜೇತರ ಮೇರಿ ಕೋಂ ಬಾಕ್ಸಿಂಗ್​ಗೆ ವಿದಾಯ ಹೇಳಿದ್ದಾರೆ.

6 ಬಾರಿಯ ವಿಶ್ವ ಚಾಂಪಿಯನ್ ಮತ್ತು 2012ರ ಒಲಿಂಪಿಕ್ ಪದಕ ವಿಜೇತೆ ಮಾಂಗ್ಟೆ ಚುಂಗ್ನೀಜಾಂಗ್ ಮೇರಿ ಕೋಮ್ ಅವರು ಇಂಟರ್ನ್ಯಾಷನಲ್ ಬಾಕ್ಸಿಂಗ್ ಅಸೋಸಿಯೇಷನ್ (IBA) ನಿಯಮಗಳು ಪುರುಷ ಮತ್ತು ಮಹಿಳಾ ಬಾಕ್ಸರ್‌ಗಳು 40 ವರ್ಷ ವಯಸ್ಸಿನವರೆಗೆ ಮಾತ್ರ ಎಲೈಟ್ ಲೇವಲ್ ಬಾಕ್ಸಿಂಗ್‌ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಅವಕಾಶ ಕಲ್ಪಿಸುತ್ತವೆ. ಹಾಗಾಗಿ ತಮ್ಮ ಬಾಕ್ಸಿಂಗ್ ಕೈಗವಸುಗಳಿಗೆ ರೆಸ್ಟ್ ನೀಡಿದ್ದಾರೆ.

ಇದನ್ನೂ ಓದಿ: ದಿನ ಭವಿಷ್ಯ: ಇಂದು ಪುಷ್ಯ ಪೂರ್ಣಿಮಾ, ಈ ರಾಶಿಗೆ ಪುಣ್ಯ ಪ್ರಾಪ್ತಿ!

41 ವರ್ಷದ ಮೇರಿ ಕೋಮ್ ಅವರು ಈಗಲೂ ತಮ್ಮಲ್ಲಿ ಬಾಕ್ಸಿಂಗ್ ಹಸಿವು ತಣಿದಿಲ್ಲ. ಎಲೈಟ್ ಲೇವಲ್‌ನಲ್ಲಿ ಆಡುವಷ್ಟು ಸಾಮರ್ಥ್ಯವಿದೆ ಎಂದು ಹೇಳಿಕೊಂಡಿದ್ದಾರೆ. ಆದರೆ ದುರದೃಷ್ಟವಶಾತ್ ವಯಸ್ಸಿನ ಮಿತಿ ಮುಗಿದಿರುವುದರಿಂದ ನಾನು ಯಾವುದೇ ಸ್ಪರ್ಧೆಯಲ್ಲಿ ಸ್ಪರ್ಧಿಸಲು ಸಾಧ್ಯವಿಲ್ಲ. ನಾನು ಹೆಚ್ಚು ಆಡಲು ಬಯಸುತ್ತೇನೆ. ಆದರೆ ನಾನು ಬಲವಂತವಾಗಿ ಬಾಕ್ಸಿಂಗ್ ತೊರೆಯುತ್ತಿದ್ದೇನೆ (ವಯಸ್ಸಿನ ಮಿತಿಯಿಂದಾಗಿ). ನಾನು ನಿವೃತ್ತಿಯನ್ನು ಹೊಂದಲೇಬೇಕು. ನನ್ನ ಜೀವನದಲ್ಲಿ ಎಲ್ಲವನ್ನೂ ಸಾಧಿಸಿದ್ದೇನೆ ಎಂದು ಹೇಳಿದರು.

RELATED ARTICLES

Related Articles

TRENDING ARTICLES