Saturday, November 16, 2024

ಜಗದೀಶ್ ಶೆಟ್ಟರ್ ಬಿಜೆಪಿ ಸೇರ್ಪಡೆ: ವಿಶ್ವಾಸಕ್ಕೆ ಧಕ್ಕೆ – ಡಿಕೆ ಶಿವಕುಮಾರ್

ಬೆಂಗಳೂರು: ಕಾಂಗ್ರೆಸ್ ನನಗೆ ಮರುಜೀವ ಕೊಟ್ಟಿದೆ ನಾನು ಕಾಂಗ್ರೆಸ್ ಬಿಟ್ಟು ಹೋಗುವುದಿಲ್ಲ ಎಂದು ನೆನ್ನೆ ಬೆಳಗ್ಗೆ ಸಹ ನನ್ನೊಂದಿಗೆ ಅವರು ಹೇಳಿದ್ದರು. ಹಿರಿಯ ರಾಜಕೀಯ ನಾಯಕರು ಈಗ ಈ ರೀತಿ ಮಾಡಿರುವುದು ವಿಶ್ವಾಸಕ್ಕೆ ಧಕ್ಕೆ ತಂದಿದೆ ಎಂದು ಕೆಪಿಸಿಸಿ ಅಧ್ಯಕ್ಷ ಹಾಗು ಡಿಸಿಎಂ ಡಿ.ಕೆ ಶಿವಕುಮಾರ್ ಅಭಿಪ್ರಾಯಪಟ್ಟರು.

ನಗರದಲ್ಲಿ ಮಾತನಾಡಿದ ಅವರು, ವಿಧಾನಸಭಾ ಚುನಾವಣೆಯಲ್ಲಿ ಜನ ಅವರನ್ನು ಮುವತ್ತು ಸಾವಿರ ಕ್ಕಿಂತ ಹೆಚ್ಚು ಮತಗಳಿಂದ ಅವರನ್ನು ತಿರಸ್ಕರಿಸಿದ್ದರು ಕಾಂಗ್ರೆಸ್​ ಪಕ್ಷದವರು ಅತ್ಯಂತ ಗೌರವದಿಂದ ನಡೆಸಿಕೊಂಡಿದ್ದೇವೆ. ಇದೀಗ ಅವರು ಯಾವ ಕಾರಣದಿಂದ ಬಿಜೆಪಿ ಸೇರ್ಪಡೆಯಾಗಿದ್ದಾರೆ? ಯಾವ ಒತ್ತಡಕ್ಕೆ ಒಳಗಾಗಿ ಈ ತೀರ್ಮಾನ ಕೈಗೊಂಡಿದ್ದಾರೆ? ಎನ್ನುವುದರ ಬಗ್ಗೆ ಅವರು ಮೊದಲು ತಿಳಿಸಲು ಬಳಿಕ ನಾನು ಮಾತನಾಡುತ್ತೇನೆ ಎಂದರು.

ಇದನ್ನೂ ಓದಿ: ಜಗದೀಶ್​ ಶೆಟ್ಟರ್ ಬಿಜೆಪಿ ಸೇರ್ಪಡೆ: ಮತ್ತೆ ಮೋದಿ ಪ್ರಧಾನಿ ಗ್ಯಾರೆಂಟಿ – ರೇಣುಕಾಚಾರ್ಯ

ಬಿಜೆಪಿ ಪಕ್ಷ ಸೇರ್ಪಡೆ ವೇಳೆ ನಾನು ದೇಶದ ಹಿತಕ್ಕಾಗಿ ಬಿಜೆಪಿಗೆ ವಾಪಾಸ್ಸಾಗಿದ್ದಾರೆ ಎಂಬ ಹೇಳಿಕೆಯನ್ನು ನೀಡಿದ್ದಾರೆ ಎಂಬ ಮಾದ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು, ವಿಧಾನಸಭಾ ಚುನಾವಣೆ ವೇಳೆ ಹೀನಾಯವಾಗಿ ನಡೆಸಿಕೊಂಡಾಗ ಅವರಿಗೆ ದೇಶದ ಹಿತ ಗೊತ್ತಾಗಲಿಲ್ಲವಾ ಎಂದು ಪ್ರಶ್ನೆ ಮಾಡಿದರು. ನಮಗೂ ಒಂದು ಆತ್ಮ ಇದೆ, ಅದೇ ಅವರಿಗೂ ಒಂದು ಆತ್ಮ ಇರುತ್ತೆ ಅವರಿಗೆ ಅವರೇ ಪ್ರಶ್ನಿಸಿಕೊಳ್ಳಬೇಕು ಎಂದರು.

ಕಾಂಗ್ರೆಸ್​ ಪಕ್ಷದ ಅಧ್ಯಕ್ಷನಾಗಿ ನನಗೆ ಇನ್ನೂ ಅವರ ರಾಜಿನಾಮೆ ಪತ್ರ ತಲುಪಿಲ್ಲ, ಕಾಂಗ್ರೆಸ್ ಪಕ್ಷದವರು ಅವರನ್ನು ಗೌರವಯುತವಾಗಿ ನಡೆಸಿಕೊಂಡಿದೆ. ಸದ್ಯ ಅವರು ಬಿಜೆಪಿಗೆ ಹೋಗಿದ್ದರೂ ಬೇರೆ ಯಾರು ನಮ್ಮ ಪಕ್ಷವನ್ನು ಬಿಟ್ಟುಹೋಗುವುದಿಲ್ಲ ಎಂದು ಅವರು ಹೇಳಿದರು.

RELATED ARTICLES

Related Articles

TRENDING ARTICLES