ಬೆಂಗಳೂರು: ನಿವೃತ್ತಿಯಾದರೂ ಕರ್ತವ್ಯಕ್ಕೆ ಹಾಜರಾಗುತ್ತಿದ್ದ ಎರಡು ಸಾವಿರ ಹಿರಿಯ ಐ.ಎ.ಎಸ್ ಮತ್ತು ಕೆ.ಎ.ಎಸ್ ಅಧಿಕಾರಿಗಳಿ ಗೇಟ್ ಪಾಸ್ ನೀಡಿ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯಲ್ ಆದೇಶ ಹೊರಡಿಸಿದ್ದಾರೆ.
ಸರ್ಕಾರದ ವಿವಿಧ ಇಲಾಖೆಗಳಲ್ಲಿ ನಿವೃತ್ತಿ ಹೊಂದಿದ್ದರು ಸಹ ಅಧಿಕಾರದಲ್ಲಿ ಮುಂದುವರೆದಿದ್ದ ಹಿರಿಯ ಐಎಎಸ್ ಮತ್ತು ಕೆಎಎಸ್ ಅಧಿಕಾರಿಗಳ ಸೇವೆಯನ್ನು ಮುಕ್ತಾಯಗೊಳಿಸಲಾಗಿದೆ. ಇವರು ಸಚಿವರ ಆಪ್ತಸಹಾಯಕರಾಗಿ, ಸಲಹೇಗಾರರಾಗಿ, ನಿಗಮ ಮಂಡಳಿಗಳಲ್ಲೂ ಕರ್ತವ್ಯ ನಿರ್ವಹಿಸುತ್ತಿದ್ದರು ಇವರಿಂದ ಸರ್ಕಾರದ ಬೊಕ್ಕಸಕ್ಕೆ ಹೊರೆಯಾಗುತ್ತಿತ್ತು ಈ ಹಿನ್ನೆಲೆಯಲ್ಲಿ ಎಲ್ಲರಿಗೂ ಗೇಟ್ ಪಾಸ್ ನೀಡಿ ಆದೇಶ ನೀಡಲಾಗಿದೆ.
ಇದನ್ನೂ ಓದಿ: ದರ್ಶನ್ ಜೊತೆ ‘ರಿಲೇಶನ್ ಶಿಪ್‌ಗೆ 10 ವರ್ಷ’ ಎಂದು ಪವಿತ್ರಾಗೌಡ ಪೋಸ್ಟ್: ಎಚ್ಚರಿಕೆ ನೀಡಿದ ಪತ್ನಿ!
ಸರ್ಕಾರದ ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯಲ್ ಅವರ ಈ ಆದೇಶದ ಅನ್ವಯ ರಾಜ್ಯದ ವಿವಿಧ ಇಲಾಖೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸುಮಾರು ಎರಡು ಸಾವಿರಕ್ಕು ಹೆಚ್ಚು ಐಎಎಸ್ ಮತ್ತು ಕೆಎಎಸ್ ಅಧಿಕಾರಿಗಳು ತಮ್ಮ ಸೇವೆಯಿಂದ ಹೊರಬೀಳಲಿದ್ದಾರೆ. ಇದರಿಂದ ಹೊರಬರಿಗೆ ಅವಕಾಶ ಕಲ್ಪಿಸಲು ಅನುಕೂಲವಾಗಲಿದೆ ಎಂದು ಅಭಿಪ್ರಾಯ ಪಟ್ಟಿದೆ.