Friday, January 10, 2025

ಶೆಟ್ಟರ್ ಬೈದಷ್ಟು ಬಿಜೆಪಿಗೆ ಕಾಂಗ್ರೆಸ್​ನವರೇ ಬೈದಿಲ್ಲ: ಸಚಿವ ಜಮೀರ್ ಅಹ್ಮದ್ 

ಬೆಂಗಳೂರು: ಶೆಟ್ಟರ್ ಬೈದಷ್ಟು ಬಿಜೆಪಿಗೆ ಕಾಂಗ್ರೆಸ್ ನವರೇ ಬೈದಿಲ್ಲ ಅಂತವರೇ ಇಂದು ಮತ್ತೆ ಬಿಜೆಪಿ ಸೇರಿದ್ದಾರೆ ಎಂದು ಸಚಿವ ಜಮೀರ್ ಅಹ್ಮದ್ ಕಿಡಿಕಾರಿದ್ದಾರೆ. 

ನಗರದಲದಲಿ ಮಾತಯನಾಡಿದ ಅವರು,ಜಗದೀಶ ಶೆಟ್ಟರ್ ಬಿಜೆಪಿಗೆ ಹೋಗಿದ್ದು ಬಹಳ ನೋವಾಗಿದೆ,
ಕಾಂಗ್ರೆಸ್ ಪಕ್ಷ ಶೆಟ್ಟರ್ ಗೆ ಏನ್ ಕಡಿಮೆ ಮಾಡಿತ್ತು.ಕೆಟ್ಟ ಪದಗಳಲ್ಲಿ ಬಿಜೆಪಿಯನ್ನ ಜಗದೀಶ್ ಶೆಟ್ಟರ್ ಬೈದಿದ್ದರು. ವಿಧಾನಸಭಾ ಎಲೆಕ್ಷನ್ ನಲ್ಲಿ ಬಿಜೆಪಿಯವರು ಟಿಕೆಟ್ ಕೊಡಲಿಲ್ಲ ಕಾಂಗ್ರೆಸ್ ಪಕ್ಷ ಕರೆತಂದು ಟಿಕೆಟ್ ಕೊಟ್ಟಿದ್ರೂ ಅವರು ಸೋತಿದ್ದರು. ರಾಜ್ಯದಲ್ಲಿ ಯಾರೂ ಕೂಡ ಈ ರೀತಿ ಸೋತಿಲ್ಲ, ಅಷ್ಟು ಹೀನಾಯವಾಗಿ ಸೋತಿದ್ದಾರೆ.

ಇದನ್ನೂ ಓದಿ: ಶೆಟ್ಟರಿಗೆ ಕಾಂಗ್ರೆಸ್​ನಿಂದ ಯಾವುದೇ ಅನ್ಯಾಯ ಆಗಿಲ್ಲ. ಅವಮಾನವೂ ಆಗಿಲ್ಲ: ಸಿಎಂ ಸಿದ್ದರಾಮಯ್ಯ

ಅವರು ಸೋತ ಬಳಿಕವೂ ಪಕ್ಷ ಅವರನ್ನ ಎಂಎಲ್’ಸಿ ಮಾಡಿತು,ಎಂಎಲ್’ಸಿ ಮಾಡಿ ಮೂರು ತಿಂಗಳು ಕಳೆದಿಲ್ಲ,ರಾಜೀನಾಮೆ ಕೊಟ್ಟಿದ್ದಾರೆ, ಬಿಜೆಪಿಯವರು ಅವರನ್ನ ಪಕ್ಷಕ್ಕೆ ಸೇರಿಸಿಕೊಳ್ಳಬಾರದಿತ್ತು ಎಂದು ಕಿಡಿಕಾರಿದ್ದಾರೆ.

ಲಕ್ಷ್ಮಣ ಸವದಿ ಬಿಜೆಪಿ ಸೇರ್ಪಡೆ ವಿಚಾರವಾಗಿ ಮಾತನಡಿದ ಅವರು ಸವದಿ ಬಿಜೆಪಿಗೆ ಹೋಗಲ್ಲ,ಅವರು ಅತಿ ಹೆಚ್ಚು ಮತಗಳಿಂದ ಗೆದ್ದು ಶಾಸಕ ಆಗಿದ್ದಾರೆ ಅವರಿಗೂ ಪಕ್ಷ ಎಲ್ಲವನ್ನೂ ಕೊಟ್ಟಿದೆ ಕಾಂಗ್ರೆಸ್​ ಬಿಟ್ಟು ಅವರು ಹೋಗುವುದಿಲ್ಲ ಎಂದರು.

ಜನಾರ್ದನ ರೆಡ್ಡಿ ಬಿಜೆಪಿ ಸೇರ್ತಾರೆ ಅನ್ನೋದು ನನಗೆ ಮಾಹಿತಿ ಇಲ್ಲ ಎಂದರು.

RELATED ARTICLES

Related Articles

TRENDING ARTICLES