Wednesday, January 22, 2025

ಜಡ್ಡು-ಅಶ್ವಿನ್ ಮೋಡಿ.. 246 ರನ್​ಗಳಿಗೆ ಇಂಗ್ಲೆಂಡ್ ಆಲೌಟ್

ಬೆಂಗಳೂರು : ಭಾರತ ವಿರುದ್ಧದ ಮೊದಲ ಟೆಸ್ಟ್​ ಪಂದ್ಯದಲ್ಲಿ ಜಡೇಜಾ ಹಾಗೂ ಅಶ್ವಿನ್ ಸ್ಪಿನ್ ಮೋಡಿಗೆ ಇಂಗ್ಲೆಂಡ್ 246 ರನ್​ಗಳಿಗೆ ಆಲೌಟ್​ ಆಗಿದೆ.

ಹೈದರಾಬಾದ್​ನ ರಾಜೀವ್ ಗಾಂಧಿ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ 5 ಟೆಸ್ಟ್​ ಪಂದ್ಯಗಳ ಸರಣಿಯ ಮೊದಲ ಪಂದ್ಯ ನಡೆಯುತ್ತಿದೆ.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್​ ತಂಡವನ್ನು ಭಾರತದ ಸ್ಪಿನ್ನರ್​ಗಳು ಕಟ್ಟಿಹಾಕಿದರು. ಪರಿಣಾಮ ಆಂಗ್ಲರು ಒಬ್ಬರ ಹಿಂದೆ ಒಬ್ಬರಂತೆ ಪೆವಿಲಿಯನ್ ಪೆರೇಡ್ ನಡೆಸಿದರು.

ಇಂಗ್ಲೆಂಡ್​ ತಂಡದ ನಾಯಕ ಬೆನ್ ಸ್ಟೋಕ್ಸ್​ 70 ರನ್​ ಗಳಿಸಿ ಏಕಾಂಗಿ ಹೋರಾಟ ನಡೆಸಿದರು. ಉಳಿದಂತೆ ಬೈರ್​ ಸ್ಟೋ 37, ಡಕೆಟ್ 35, ಜೋ ರೂಟ್ 29 ರನ್​ ಗಳಿಸಿದರು. ಭಾರತದ ಪರ ರವೀಂದ್ರ ಜಡೇಜಾ ಹಾಗೂ ರವಿಚಂದ್ರನ್ ಅಶ್ವಿನ್ ತಲಾ 3 ವಿಕೆಟ್, ಅಕ್ಸರ್ ಪಟೇಲ್ ಹಾಗೂ ಬುಮ್ರಾ ತಲಾ 2 ವಿಕೆಟ್ ಪಡೆದು ಮಿಂಚಿದರು.

RELATED ARTICLES

Related Articles

TRENDING ARTICLES