Sunday, December 22, 2024

29ನೇ ಮಹಡಿಯಿಂದ ಹಾರಿ ಬಾಲಕಿ ಆತ್ಮಹತ್ಯೆ!

ಬೆಂಗಳೂರು: 29ನೇ ಮಹಡಿಯಿಂದ ಹಾರಿ 12 ವರ್ಷದ ಬಾಲಕಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹುಳಿಮಾವು ಪೊಲೀಸ್​ ಠಾಣಾ ವ್ಯಾಪ್ತಿಯ ಬೇಗೂರು ಅಪಾರ್ಟ್​ಮೆಂಟ್​ನಲ್ಲಿ ನಡೆದಿದೆ.

ಖಾಸಗಿ ಶಾಲೆಯಲ್ಲಿ 6ನೇ ತರಗತಿಯಲ್ಲಿ ಓದುತ್ತಿದ್ದ ಬಾಲಕಿ ಬೇಗೂರು ಬಳಿಯ ಅಪಾರ್ಟ್​ಮೆಂಟ್​ನಲ್ಲಿ ತನ್ನ ಸಾಫ್ಟ್​ವೇರ್ ಇಂಜಿನಿಯರ್​ ತಂದೆ ಮತ್ತು ತಾಯಿಯೊಂದಿಗೆ ವಾಸವಾಗಿದ್ದರು,

ಇದನ್ನೂ ಓದಿ: ರಾಹುಲ್ ಗಾಂಧಿ ವಿರುದ್ದ FIR ದಾಖಲು!

ನೆನ್ನೆ ರಾತ್ರಿ ಮಲಗಿದ್ದ ಬಾಲಕಿ ಇದ್ದಕ್ಕಿದ್ದಂತೆ ಮುಂಜಾನೆ 4.30ಕ್ಕೆ ಎಚ್ಚರವಾಗೊಂಡು ಹಾಲ್​ ಗೆ ಬಂದಿದ್ದಳು, ಈ ವೇಳೆ ಎಚ್ಚರಗೊಂಡ ತಾಯಿ ಮಗಳನ್ನು ಪ್ರಶ್ನಿಸಿದ್ದಾರೆ, ಇದಕ್ಕೆ ಸರಿಯಾಗಿ ಉತ್ತರಿಸದೇ ಮಲಗುವುದಾಗಿ ಹೇಳಿ ರೂಮಿಗೆ ಹೋಗಿದ್ದಳು. ಆದರೇ, 5 ಗಂಟೆ ಸುಮಾರಿಗೆ 29ನೇ ಮಹಡಿ ಮೇಲಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ, ಜೋರಾಗಿ ಶಬ್ದ ಕೇಳಿ ಹೊರಬಂದ ಅಪಾರ್ಟ್​ಮೆಂಟ್​ ನ ಸೆಕ್ಯೂರಿಟಿ ಪೋಷಕರಿಗೆ ಮತ್ತು ಅಪಾರ್ಟ್​ಮೆಂಟ್​ ಅಸೋಸಿಯೇಷನ್​ಗೆ ಮಾಹಿತಿ ನೀಡಿದ್ದಾರೆ.

ಈ ಪ್ರಕರಣಕ್ಕೆ ಸಂಬಂಧಿಸಿ ಹುಳಿಮಾವು ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪರಿಶೀಲನೆ ನಡೆಸಿದ್ದಾರೆ. ಆತ್ಮಹತ್ಯೆಗೆ ನಿಖರವಾದ ಮಾಹಿತಿ ಇನ್ನಷ್ಟೆ ತಿಳಿಯಬೇಕಾಗಿದೆ.

RELATED ARTICLES

Related Articles

TRENDING ARTICLES