Saturday, November 2, 2024

ಬಜೆಟ್​ ಅಧಿವೇಶನ: ಸಂಸತ್ ಭವನದ ಭದ್ರತೆಗಾಗಿ 140 CISF ನಿಯೋಜನೆ!

ನವದೆಹಲಿ: ಜನವರಿ 31ರಿಂದ ಪ್ರಾರಂಭವಾಗುವ ಬಜೆಟ್ ಅಧಿವೇಶನದಲ್ಲಿ ವೀಕ್ಷಕರು ಮತ್ತು ಅವರ ಲಗೇಜುಗಳನ್ನು ಪರಿಶೀಲಿಸಲು 140 ಸೆಂಟ್ರಲ್ ಇಂಡಸ್ಟ್ರಿಯಲ್ ಸೆಕ್ಯುರಿಟಿ ಫೋರ್ಸ್ ಸಿಬ್ಬಂದಿಯನ್ನು ಸಂಸತ್ತಿನ ಸಂಕೀರ್ಣದಲ್ಲಿ ನಿಯೋಜಿಸಲಾಗಿದೆ.

ಕಳೆದ ಡಿಸೆಂಬರ್ 13ರ ಸಂಸತ್ ಭದ್ರತೆಯಲ್ಲಿನ ಲೋಪವನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಗೃಹ ಸಚಿವಾಲಯವು ಕಳೆದ ತಿಂಗಳು ಭದ್ರತಾ ವ್ಯವಸ್ಥೆಗಳ ಸಮಗ್ರ ಪರಿಶೀಲನೆಯನ್ನು ನಡೆಸಿತ್ತು. ನಂತರ ಸಿಐಎಸ್ಎಫ್ ಸಿಬ್ಬಂದಿಯ ನಿಯೋಜನೆಗೆ ಅನುಮೋದನೆ ನೀಡಿತ್ತು.

ಇದನ್ನೂ ಓದಿ: ಸಮಾಜವಾದಿ ಹೋರಾಟಗಾರ ಕರ್ಪೂರಿ ಠಾಕೂರ್ ಅವರಿಗೆ ‘ಭಾರತರತ್ನ’ ಪ್ರಶಸ್ತಿ ಘೋಷಣೆ!

ಡಿಸೆಂಬರ್ 13ರಂದು ಕೆಲವರು ಲೋಕಸಭೆಯಲ್ಲಿ ಸ್ಮೋಕ್‌ ಕ್ಯಾನ್‌ ಬಳಸಿ ದಾಂದಲೆ ಎಬ್ಬಿಸಿದ್ದರು. ಇದೀಗ 140 CISF ಸಿಬ್ಬಂದಿ ಸಂಸತ್ ಭವನದ ಸಂಕೀರ್ಣದ ಭದ್ರತೆಯನ್ನು ವಹಿಸಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಅವರು ವೀಕ್ಷಕರು ಮತ್ತು ಅವರ ಲಗೇಜುಗಳನ್ನು ಪರಿಶೀಲಿಸುತ್ತಾರೆ ಮತ್ತು ಕಟ್ಟಡದ ಭದ್ರತೆಯ ಜವಾಬ್ದಾರಿಯನ್ನು ಸಹ ಹೊಂದಿರುತ್ತಾರೆ ಎನ್ನಲಾಗಿದೆ.

RELATED ARTICLES

Related Articles

TRENDING ARTICLES