Monday, December 23, 2024

ಸಮಾಜವಾದಿ ಹೋರಾಟಗಾರ ಕರ್ಪೂರಿ ಠಾಕೂರ್ ಅವರಿಗೆ ‘ಭಾರತರತ್ನ’ ಪ್ರಶಸ್ತಿ ಘೋಷಣೆ!

ನವದೆಹಲಿ: ಸ್ವಾತಂತ್ರ್ಯ ಹೋರಾಟಗಾರ, ಸಮಾಜವಾದಿ ಆಂದೋಲನಕ್ಕೆ ಅನನ್ಯ ಕೊಡುಗೆ ನೀಡಿದ ಬಿಹಾರದ ಮಾಜಿ ಮುಖ್ಯಮಂತ್ರಿ ಕರ್ಪೂರಿ ಠಾಕೂರ್ ಅವರಿಗೆ ಪ್ರತಿಷ್ಠಿತ ‘ಭಾರತ ರತ್ನ’ ಪ್ರಶಸ್ತಿ ನೀಡುವುದಾಗಿ ಕೇಂದ್ರ ಸರ್ಕಾರ ಘೋಷಿಸಿದೆ.

ಕರ್ಪೂರಿ ಠಾಕೂರ್ ಅವರಿಗೆ ಮರಣೋತ್ತರವಾಗಿ ಭಾರತ ರತ್ನ ನೀಡಲಾಗುತ್ತಿದೆ. ಬುಧವಾರ ಕರ್ಪೂರಿ ಠಾಕೂರ್ ಅವರ 100ನೇ ಜನ್ಮ ವರ್ಷಾಚರಣೆಗೂ ಮುನ್ನ ಅವರಿಗೆ ಭಾರತ ರತ್ನ ನೀಡಿ ಗೌರವಿಸುವುದಾಗಿ ಘೋಷಿಸಲಾಗಿದೆ.

ಇದನ್ನೂ ಓದಿ: ರಾಶಿ ಭವಿಷ್ಯ: ಹಣಕಾಸಿನ ವಿಷಯದಲ್ಲಿ ಈ ರಾಶಿಯವರಿಗೆ ಒಳಿತಾಗಲಿದೆ!

ಜನವರಿ 24, 1924 ರಂದು ಬಿಹಾರದ ಸಮಸ್ತಿಪುರ್ ಜಿಲ್ಲೆಯ ಪಿಟೊಂಜಿಯಾದಲ್ಲಿ(ಈಗ ಕರ್ಪೂರಿಗ್ರಾಮ್) ಜನಿಸಿದ ಠಾಕೂರ್ ಅವರು ಮೊದಲ ಬಾರಿಗೆ 1970 ರಿಂದ 1971 ರ ವರೆಗೆ ಮತ್ತು ಎರಡನೇ ಬಾರಿಗೆ 1977ರಿಂದ 1979ರ ವರೆಗೆ ಬಿಹಾರದ ಮುಖ್ಯಮಂತ್ರಿಯಾಗಿದ್ದರು. 1988ರಲ್ಲಿ ತಮ್ಮ 64 ವಯಸ್ಸಿನಲ್ಲಿ ನಿಧನರಾದರು.

ಜನನಾಯಕ ಎಂದೇ ಖ್ಯಾತಿ ಪಡೆದಿದ್ದ ಕರ್ಪೂರಿ ಠಾಕೂರ್ ಅತ್ಯಂತ ಸರಳ ಜೀವಿಯಾಗಿದ್ದರು. ಠಾಕೂರ್ ಅವರು ಎರಡು ಬಾರಿ ಬಿಹಾರದ ಮುಖ್ಯಮಂತ್ರಿಯಾಗಿದ್ದರೂ ಅವರ ಬಳಿ ಒಂದು ಸ್ವಂತ ಕಾರು ಸಹ ಇರಲಿಲ್ಲ. ಸ್ವಂತ ಮನೆ ಸಹ ಕಟ್ಟಿಕೊಳ್ಳಲು ಅವರಿಗೆ ಸಾಧ್ಯವಾಗಿಲ್ಲ.

ಕರ್ಪೂರಿ ಠಾಕೂರ್ ಅವರು ಒಬ್ಬ ಶಿಕ್ಷಕ, ಸ್ವಾತಂತ್ರ್ಯ ಹಾಗೂ ಸಮಾಜವಾದಿ ಹೋರಾಟಗಾರ, ರಾಜಕಾರಣಿ ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ಜನನಾಯಕರಾಗಿದ್ದರು. ಅವರ ಜನ್ಮ ಶತಮಾನೋತ್ಸವದ ದಿನದಂದು ಕೇಂದ್ರ ಸರ್ಕಾರ ಕರ್ಪೂರಿ ಠಾಕೂರ್‌ಗೆ ಭಾರತ ರತ್ನ ಪ್ರಶಸ್ತಿ ನೀಡಲು ನಿರ್ಧರಿಸಿದೆ.

RELATED ARTICLES

Related Articles

TRENDING ARTICLES