Friday, November 22, 2024

ಅಯೋಧ್ಯೆಗೆ ಹೋಗುವ ರಾಜ್ಯದ ಪ್ರಯಾಣಿಕರಿಗೆ ವಿಶೇಷ ರೈಲು ವ್ಯವಸ್ಥೆ 

ಬೆಂಗಳೂರು: 500 ವರ್ಷಗಳ ಬಳಿಕ ಅಯೋಧ್ಯೆ ರಾಮಜನ್ಮಭೂಮಿಯಲ್ಲಿ ನಿರ್ಮಾಣವಾಗಿದೆ. ಅಯೋಧ್ಯೆ ರಾಮ ಮಂದಿರದಲ್ಲಿ ಹಿಂದೂಗಳ ಅರಾಧ್ಯ ದೈವ ರಾಮನ ದರ್ಶನಕ್ಕೆಂದು ಹೋಗುವ ಭಕ್ತರ ಅನುಕೂಲಕ್ಕೆ ಜನವರಿ 31ರಿಂದ ಐದು ವಿಶೇಷ ರೈಲುಗಳು ಸಂಚರಿಸಲಿವೆ.

ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆಯಾಗ್ತಿದ್ದಂತೆ, ಕರ್ನಾಟಕದಿಂದ ಅಯೋಧ್ಯೆಗೆ ತೆರಳಲು ಹೆಚ್ಚಿನ ಸಂಖ್ಯೆಯ ಪ್ರಯಾಣಿಕರು ಮುಂದಾಗುತ್ತಿದ್ದಾರೆ. ಈ ನಡುವೆ ಭಾರತೀಯ ರೈಲ್ವೇ ಇಲಾಖೆಯು ಕರ್ನಾಟಕದಿಂದ ಆಯೋಧ್ಯೆಗೆ ಇದೇ 31ರಿಂದ 11 ವಿಶೇಷ ರೈಲುಗಳ ಸಂಚಾರವನ್ನು ಆರಂಭಿಸಲಿದೆ.

ನೈರುತ್ಯ ರೈಲ್ವೆಯು ಬೆಂಗಳೂರು, ಮೈಸೂರು, ತುಮಕೂರು, ಚಿತ್ರದುರ್ಗ, ಬೆಳಗಾವಿಯಿಂದ ಒಂದು ತಿಂಗಳ ಕಾಲ ವಿಶೇಷ ರೈಲು ಓಡಿಸಲು ನಿರ್ಧರಿಸಿದೆ. ಬೆಂಗಳೂರಿನ ಸರ್ ಎಂ.ವಿಶ್ವೇಶ್ವರಯ್ಯ ಟರ್ಮಿನಲ್ ಅಯೋಧ್ಯೆ ವಿಶೇಷ ರೈಲು ಜನವರಿ 31, ಫೆಬ್ರುವರಿ 14 ಮತ್ತು 28 ರಂದು ಸಂಚರಿಸಲಿವೆ. ಅರಸೀಕೆರೆ, ಗದಗ, ವಿಜಯಪುರ ಮಾರ್ಗವಾಗಿ ಸಂಚರಿಸಿ ಅಯೋಧ್ಯೆ ಧಾಮ ಕಡೆಗೆ ತೆರಳಲಿದೆ.

ಅಯೋಧ್ಯೆ ಧಾಮದಿಂದ ವಿಶ್ವೇಶ್ವರಯ್ಯ ಟರ್ಮಿನಲ್‌ಗೆ ಫೆಬ್ರುವರಿ 3, 17 ಮತ್ತು ಮಾರ್ಚ್ 2ರಂದು ರೈಲು ವಾಪಸ್‌ ಹೊರಡಲಿದೆ. ಮೈಸೂರು-ಅಯೋಧ್ಯೆ ವಿಶೇಷ ರೈಲು ಫೆಬ್ರುವರಿ 4. 18ರಂದು ಮೈಸೂರಿನಿಂದ ಹೊರಡಲಿದೆ.

ಇದನ್ನೂ  ಓದಿ: ಶ್ರೀರಾಮ ಅವರಪ್ಪನ ಮನೆ ಆಸ್ತಿನಾ..? : ಡಿ.ಕೆ. ಶಿವಕುಮಾರ್ ಕಿಡಿ

ಬೆಂಗಳೂರು, ಅರಸೀಕೆರೆ, ಹೊಸಪೇಟೆ ಮಾರ್ಗವಾಗಿ ಅಯೋಧ್ಯೆ ಧಾಮ ಕಡೆಗೆ ಸಾಗಲಿದೆ. ಅಯೋಧ್ಯೆ ಧಾಮದಿಂದ ಫೆ.7 ಮತ್ತು 21ರಂದು ವಾಪಸ್ ಮೈಸೂರಿಗೆ ಹೊರಡಲಿದೆ. ಮೈಸೂರು ಅಯೋಧ್ಯೆ ನಡುವಿನ ಇನ್ನೊಂದು ವಿಶೇಷ ರೈಲು ಫೆ.17ರಂದು ಮೈಸೂರಿನಿಂದ ಹೊರಡಲಿದೆ. ಫೆ.20ರಂದು ಅಯೋಧ್ಯೆ ಧಾಮದಿಂದ ವಾಪಸ್ಸಾಗಲಿದೆ.

ತುಮಕೂರು-ಅಯೋಧ್ಯೆ ವಿಶೇಷ ರೈಲು ಫೆಬ್ರುವರಿ 7 ಮತ್ತು 21 ರಂದು ಹೊರಡಲಿದೆ. ಫೆ.10 ಮತ್ತು 24ರಂದು ಅಯೋಧ್ಯೆ ಧಾಮದಿಂದ ವಾಪಸ್ ಆಗಲಿದೆ. ಚಿತ್ರದುರ್ಗ-ಅಯೋಧ್ಯೆ ವಿಶೇಷ ರೈಲು ಫೆಬ್ರುವರಿ 11 ಮತ್ತು 25 ರಂದು ಹೊರಡುತ್ತದೆ.

ಫೆ.14 ಮತ್ತು 28ರಂದು ಅಯೋಧ್ಯೆ ಧಾಮದಿಂದ ಚಿತ್ರದುರ್ಗಕ್ಕೆ ವಾಪಸ್ ಸಂಚರಿಸಲಿದೆ. ಬೆಳಗಾವಿ-ಅಯೋಧ್ಯೆ ವಿಶೇಷ ರೈಲು ಫೆಬ್ರುವರಿ 17ರಂದು ಹೊರಡಲಿದ್ದು, ಫೆ.20ರಂದು ಅಯೋಧ್ಯೆ ಧಾಮದಿಂದ ಹೊರಡಲಿದೆ. ಹುಬ್ಬಳ್ಳಿ, ಬಳ್ಳಾರಿ, ರಾಯಚೂರು ಮಾರ್ಗ ಮೂಲಕ ಸಂಚರಿಸಲಿದೆ ಎಂದು ನೈರುತ್ಯ ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

 

RELATED ARTICLES

Related Articles

TRENDING ARTICLES