Monday, December 23, 2024

ಐಸಿಸಿ ಟೆಸ್ಟ್ ತಂಡಲ್ಲಿ ರೋಹಿತ್, ಕೊಹ್ಲಿಗಿಲ್ಲ ಸ್ಥಾನ : ಇಬ್ಬರು ಭಾರತೀಯರಿಗೆ ಸ್ಥಾನ

ಬೆಂಗಳೂರು : ಐಸಿಸಿ 2023ರ ಅತ್ಯುತ್ತಮ ಟೆಸ್ಟ್​ ತಂಡವನ್ನು ಪ್ರಕಟಿಸಲಾಗಿದೆ. ಈ ತಂಡದಲ್ಲಿ ಕೇವಲ ಇಬ್ಬರು ಭಾರತೀಯರು ಮಾತ್ರ ಸ್ಥಾನ ಪಡೆದಿದ್ದಾರೆ.

ಟೆಸ್ಟ್​ ತಂಡದ ನಾಯಕತ್ವ ಆಸ್ಟ್ರೇಲಿಯಾದ ಪ್ಯಾಟ್ ಕಮಿನ್ಸ್​ ಪಾಲಾಗಿದೆ. ಹಿಟ್ ಮ್ಯಾನ್ ರೋಹಿತ್ ಶರ್ಮಾ, ರನ್ ಮೆಷಿನ್ ವಿರಾಟ್ ಕೊಹ್ಲಿ ಹಾಗೂ ಶುಭ್​ಮನ್ ಗಿಲ್​ ಅವರಿಗೆ ತಂಡದಲ್ಲಿ ಸ್ಥಾನ ಲಭಿಸಿಲ್ಲ.

ಈ ತಂಡದಲ್ಲಿ ಭಾರತದ ಆಲ್​ರೌಂಡರ್​ (ಸ್ಪಿನ್ನರ್)ಗಳಾದ ರವೀಂದ್ರ ಜಡೇಜಾ ಹಾಗೂ ರವಿಚಂದ್ರನ್ ಅಶ್ವಿನ್ ಸ್ಥಾನ ಪಡೆದಿದ್ದಾರೆ. ಐಪಿಎಲ್​ನಲ್ಲಿ ಭಾರಿ ಮೊತ್ತಕ್ಕೆ ಬಿಕರಿಯಾದ ಕಮಿನ್ಸ್​ ಹಾಗೂ ಮಿಚೆಲ್ ಸ್ಟಾರ್ಕ್​ ಸ್ಥಾನ ಪಡೆದಿದ್ದಾರೆ.

ಹೀಗಿದೆ ಐಸಿಸಿ ಟೆಸ್ಟ್​ ತಂಡ

ಪ್ಯಾಟ್ ಕಮಿನ್ಸ್ (ನಾಯಕ) ಉಸ್ಮಾನ್ ಖವಾಜಾ, ದಿಮುತ್ ಕರುಣಾರತ್ನೆ, ಕೇನ್ ವಿಲಿಯಮ್ಸ್​, ಜೋ ರೂಟ್, ಟ್ರಾವಿಸ್ ಹೆಡ್, ರವೀಂದ್ರ ಜಡೇಜಾ, ಅಲೆಕ್ಸ್​ ಕ್ಯಾರಿ, ಆರ್. ಅಶ್ವಿನ್, ಮಿಚೆಲ್ ಸ್ಟಾರ್ಕ್​, ಸ್ಟುವರ್ಟ್ ಬ್ರಾಡ್.

RELATED ARTICLES

Related Articles

TRENDING ARTICLES