Wednesday, January 22, 2025

ಆಸ್ಪತ್ರೆಗೆ ದಾಖಲಾದ ಬಾಲಿವುಡ್ ನಟ ಸೈಫ್ ಅಲಿಖಾನ್

ಮುಂಬೈ: ಮೂಳೆ ಮುರಿತಕ್ಕೆ ಒಳಗಾದ ಬಾಲಿವುಡ್ ನಟ ಸೈಫ್ ಅಲಿಖಾನ್ ಅವರು ಮುಂಬೈನ ಕೋಕಿಲಾಬೇನ್ ಧೀರೂಭಾಯಿ ಅಂಬಾನಿ ಆಸ್ಪತ್ರೆಗೆ ಸೋಮವಾರ ದಾಖಲಾಗಿದ್ದಾರೆ. ಸೈಫ್ ಅವರ ಆರೋಗ್ಯ ಕುರಿತು ಅಧಿಕೃತ ಹೇಳಿಕೆ ಇನ್ನಷ್ಟೇ ಬರಬೇಕಿದೆ.

ಸೈಫ್ ಮೊಣಕಾಲಿಗೆ ಗಾಯವಾಗಿದ್ದು, ಶಸ್ತ್ರಚಿಕಿತ್ಸೆಗೆ ಒಳಗಾಗಬಹುದು ಎನ್ನಲಾಗಿದೆ. ಈ ಸುದ್ದಿಯಿಂದ ಸೈಫ್ ಅಭಿಮಾನಿಗಳು ತುಂಬಾ ಬೇಸರಗೊಂಡಿದ್ದಾರೆ. ಸೈಫ್ ಅಲಿ ಖಾನ್ ಹೇಗೆ ಗಾಯಗೊಂಡರು ಎಂಬ ಮಾಹಿತಿ ಇನ್ನೂ ತಿಳಿದುಬಂದಿಲ್ಲ. ಆಸ್ಪತ್ರೆಯಲ್ಲಿ ಸೈಫ್ ಜೊತೆ ಅವರ ಪತ್ನಿ ಕರೀನಾ ಕಪೂರ್ ಖಾನ್ ಕೂಡ ಇದ್ದಾರೆ. ಈ ಸುದ್ದಿಯ ನಂತರ, ಸೈಫ್ ಅವರ ಆರೋಗ್ಯದ ಬಗ್ಗೆ ಅಭಿಮಾನಿಗಳು ತುಂಬಾ ಚಿಂತಿತರಾಗಿದ್ದಾರೆ.

ಇದನ್ನೂ ಓದಿ: ಇಂದು ಬೆಂಗಳೂರಿನ 117 ಪರೀಕ್ಷಾ ಕೇಂದ್ರಗಳಲ್ಲಿ PSI ಮರು ಪರೀಕ್ಷೆ!

ಸೈಫ್ ಅವರು ಪ್ಯಾನ್ ಇಂಡಿಯಾ ಸಿನಿಮಾ ‘ದೇವರಾ’ ಚಿತ್ರದಲ್ಲಿ ಜೂನಿಯರ್ ಎನ್‌ಟಿಆರ್ ಹಾಗೂ ಶ್ರೀದೇವಿ ಪುತ್ರಿ ಜಾಹ್ನವಿ ಕಪೂರ್ ಅವರೊಂದಿಗೆ ನಟಿಸುತ್ತಿದ್ದಾರೆ. ಈ ಚಿತ್ರದ ಟೀಸರ್ ಇತ್ತೀಚೆಗಷ್ಟೇ ಬಿಡುಗಡೆಗೊಂಡಿತ್ತು. ಜೂನಿಯರ್ ಎನ್‌ಟಿಆರ್ ಅವರು ನಿರ್ದಯಿ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಸಮುದ್ರ ಹಾಗೂ ಹಡಗುಗಳೊಂದಿಗೆ ಆರಂಭವಾಗುವ ಟೀಸರ್‌ನಲ್ಲಿ, ಇಡೀ ಜಗತ್ತೇ ರಕ್ತದಲ್ಲಿ ಮಿಂದೆದ್ದಂತೆ ಕಾಣಿಸುತ್ತದೆ.
ಈ ಚಿತ್ರವನ್ನು ಕೊರಟಾಲ ಶಿವ ಅವರು ನಿರ್ದೇಶಿಸಿದ್ದಾರೆ. ಅನಿರುದ್ಧ ರವಿಚಂದ್ರ ಅವರ ಸಂಗೀತವಿದೆ.

RELATED ARTICLES

Related Articles

TRENDING ARTICLES