Wednesday, January 22, 2025

ಪೂಜೆಗೆ ಬಂದ ಸಂಸದ ಪ್ರತಾಪ್​ ಸಿಂಹ ಗೆ ಘೆರಾವ್ ಹಾಕಿದ ಗ್ರಾಮಸ್ಥರು!

ಮೈಸೂರು: ಮೈಸೂರಿನ ಗುಜ್ಜೇಗೌಡನಪುರದಲ್ಲಿ ಶ್ರೀರಾಮಮೂರ್ತಿ ವಿಗ್ರಹ ಸಿಕ್ಕ ಜಾಗದಲ್ಲಿ ರಾಮಮಂದಿರ ನಿರ್ಮಾಣಕ್ಕೆ ಪೂಜೆ ಮಾಡುತ್ತಿರುವ ವೇಳೆ ಆಗಮಿಸಿದ ಮೈಸೂರು ಸಂಸದ ಪ್ರತಾಪ್ ಸಿಂಹ ಗೆ ಸ್ಥಳೀಯರು ಘೇರಾವ್ ಹಾಕಿರುವ ಘಟನೆ ನಡೆದಿದೆ.

ಇಂದು ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆ ನಡೆಯುತ್ತಿದ್ದು ಈ ಸಂದರ್ಭದಲ್ಲಿ ಮೈಸೂರಿನ ಗುಜ್ಜೆಗೌಡನಪುರದ ರಾಮದಾಸ ಎಂಬುವವರ ಜಮೀನಿನಲ್ಲಿ  ಶ್ರೀರಾಮ ವಿಗ್ರಹ ಸಿಕ್ಕಿತ್ತು, ಈ ಜಾಗದಲ್ಲೇ ರಾಮಮಂದಿರ ನಿರ್ಮಾಣ ಮಾಡಲು ಭೂಮಿ ಪೂಜೆಕಾರ್ಯ ನಡೆಯುತ್ತಿತ್ತು. ಈ ವೇಳೆ ಸ್ಥಳಕ್ಕಾಗಮಿಸಿದ ಸಂಸದ ಪ್ರತಾಪ್ ಸಿಂಹಗೆ ಸ್ಥಳೀಯರು ಘೇರಾವ್ ಹಾಕಿದ್ದಾರೆ. ಮತ್ತು ಪ್ರತಾಪ್ ಸಿಂಹ ಒಬ್ಬ ದಲಿತ ವಿರೋಧಿ ಎಂಬ ಘೋಷಣೆಗಳನ್ನು ಕೂಗಿದ್ದಾರೆ. ಬಳಿಕ, ಜನರ ವಿರೋಧದ ನಡುವೆ ಸಂಸದ ಪ್ರತಾಪ್ ಸಿಂಹ ವಾಪಾಸ್​ ಆಗಿದ್ದಾರೆ.

ಇದನ್ನೂ ಓದಿ: ಅಯೋಧ್ಯೆ ರಾಮಮಂದಿರ : ಪ್ರಾಣ ಪ್ರತಿಷ್ಠಾ ಎಂದರೇನು?

ಈ ಕುರಿತು ಸ್ಥಳೀಯರು ಪ್ರತಿಕ್ರಿಯೆ ನೀಡಿದ್ದು, ಶ್ರೀರಾಮ ಮೂರ್ತಿ ಸಿಕ್ಕ ಜಾಗಲ್ಲಿ ಇಂದು ರಾಮಮಂದಿರ ನಿರ್ಮಾಣ ಮಾಡಲು ಇಲ್ಲಿನ ಎಲ್ಲಾ ಜನಾಂಗದ ಜನರೂ ಸಹೋದರರಂತೆ ಮುಂದಾಗಿದ್ದೇವೆ ಆದರೇ, ಪ್ರತಾಪ್ ಸಿಂಹ ಈ ಸನ್ನಿವೇಶವನ್ನು ರಾಜಕೀಯವಾಗಿ ಬಳಸಿಕೊಂಡು ಇಲ್ಲಿನ ಜನರ ನಡುವೆ ಜಾತಿ ಬೀಜಗಳನ್ನು ಬಿತ್ತಿ ಕೋಮು ದ್ವೇಷವನ್ನು ಉಂಟುಮಾಡುತ್ತಾರೆ.

ಅಷ್ಟೆ ಅಲ್ಲದೇ, ಮೈಸೂರು ಭಾಗದ ಸಂಸದರಾಗಿ ಕಳೆದ 10 ವರ್ಷಗಳಿಂದ ಈ ನಮ್ಮ ಗ್ರಾಮಕ್ಕೆ ಒಮ್ಮೆಯೂ ಬಾರದ ಇವರು ಇಂದು ಬಂದಿದ್ದು, ಜನರ ನಡುವೆ ಕೊಮು ದ್ವೇಷವನ್ನು ಉಂಟುಮಾಡಿ ಸಾಮರಸ್ಯವನ್ನು ಕದಡುವ ಕೆಲಸವನ್ನು ಮಾಡುತ್ತಾರೆ ಎಂದು ಆರೋಪ ಮಾಡಿದರು.

ಘಟನಾ ಸ್ಥಳದಲ್ಲಿ ಜೆಡಿಎಸ್​ ಶಾಸಕರಾದ ಜಿ.ಟಿ ದೇವೆಗೌಡ, ಮಹೇಶ್ ಮತ್ತು ಸ್ಥಳೀಯ ಮುಖಂಡು ಇದ್ದರು.

RELATED ARTICLES

Related Articles

TRENDING ARTICLES