Sunday, December 22, 2024

ಬೆಂಗಳೂರಿನಲ್ಲಿ ರಾಮೋತ್ಸವ: ಬೀದಿ, ಬೀದಿಗಳಲ್ಲಿ ರಾರಾಜಿಸುತ್ತಿವೆ ಶ್ರೀ ರಾಮನ ಬೃಹತ್ ಕಟ್ ಔಟ್

ಬೆಂಗಳೂರು: ಶ್ರೀ ರಾಮನ ಪ್ರಾಣಪ್ರತಿಷ್ಠಾಪನೆಗೆ ಇಡೀ ದೇಶವೇ ಹಬ್ಬದಂತೆ ಸಿದ್ಧವಾಗಿದೆ. 

ಹೌದು ಕೋಟ್ಯಾಂತರ ರಾಮಭಕ್ತರು  ಈ ದಿನವನ್ನು ಮತ್ತಷ್ಟು ವಿಶೇಷವಾಗಿಸಲು ಪ್ರತಿಯೊಬ್ಬರೂ ತಮ್ಮದೇ ಆದ ರೀತಿಯಲ್ಲಿ ಆಚರಿಸಲು ಸಜ್ಜಾಗಿದ್ದಾರೆ.ಅದರಂತೇ ಸಿಲಿಕಾನ್ ಸಿಟಿಯಲ್ಲಿಯೂ ಹಬ್ಬದ ಸಂಭ್ರಮ ಮನೆ ಮಾಡಿದೆ.

ಸಿಲಿಕಾನ್ ಸಿಟಿಯ ಪ್ರಮುಖ ರಸ್ತೆ, ಜಂಕ್ಷನ್​ಗಳಲ್ಲಿ ರಾಮನ ಬೃಹತ್ ಕಟೌಟ್, ಪ್ಲೆಕ್ಸ್ ಹಾಕಲಾಗ್ತಿದ್ದು ಪ್ರತಿಯೊಂದು ರಸ್ತೆಯ ಜಂಕ್ಷನ್ ಹಾಗೂ ಮನೆಗಳ ಮುಂದೆಯೂ ಕಟೌಟ್ ಹಾಕಲಾಗಿದೆ.

ಇದನ್ನೂ ಓದಿ: ಪ್ರತಿಯೊಂದು ರಸ್ತೆಯ ಜಂಕ್ಷನ್ ಹಾಗೂ ಮನೆಗಳ ಮುಂದೆಯೂ ಕಟೌಟ್ ಹಾಕಲಾಗಿದೆ. 

ಮನೆಮನೆಗೆ ಅಯೋಧ್ಯೆಯಿಂದ ಈಗಾಗಲೇ ಅಕ್ಷತೆ ಬಂದು ತಲುಪುತ್ತಿದೆ. ಇನ್ನು ಕೆಲವರು ಅಂದು ರಾಮ ಭಜನೆಯಲ್ಲಿ ತೊಡಗಿಸಿಕೊಳ್ಳಲು ಮುಂದಾಗುತ್ತಿದ್ದಾರೆ, ಮತ್ತೆ ಕೆಲವರು ಆ ದಿನ ರಾಜ ಜ್ಯೋತಿ ಬೆಳಗಿ ದೀಪಾವಳಿಯಾಗಿ ವಿಶೇಷವಾಗಿಸಬೇಕೆಂದುಕೊಂಡಿದ್ದಾರೆ. ಹಲವು ದೇವಸ್ಥಾನಗಳಲ್ಲಿ ಅನ್ನಪ್ರಸಾದ ವಿತರಣೆ ಮಾಡಲಾಗಿದೆ.

ಒಟ್ನಲ್ಲಿ ಜನವರಿ 22ರಂದು ಐತಿಹಾಸಿಕ ದಿನಕ್ಕೆ ಭಾರತ ಸಾಕ್ಷಿಯಾಗ್ತೀದೆ.

 

RELATED ARTICLES

Related Articles

TRENDING ARTICLES