Wednesday, January 22, 2025

ಅಫ್ಘಾನಿಸ್ತಾನದಲ್ಲಿ ವಿಮಾನ ಪತನ: ಇದು ಭಾರತದಲ್ಲ ಸಚಿವಾಲಯ ಸ್ಪಷ್ಟನೆ!

ಕಾಬೂಲ್ : ಅಫ್ಘಾನಿಸ್ತಾನದ ಬಡಕ್ಷನ್‌ ಪ್ರದೇಶದ ವಾಖನ್‌ ಎಂಬಲ್ಲಿ ವಿಮಾನ ಪತನವಾಗಿದೆ. ವಿಮಾನ ಪತನಗೊಂಡಿರುವುದನ್ನು ಅಫಘಾನಿಸ್ತಾನ ತಾಲಿಬಾನ್‌ ಆಡಳಿತವು ಸ್ಪಷ್ಟಪಡಿಸಿದೆ. ಈ ವಿಮಾನವು ರಷ್ಯಾಗೆ ಹೊರಟಿತ್ತು ಎಂದು ಹೇಳಲಾಗುತ್ತಿದೆ.

ಅಫ್ಘಾನ್​ ನ ತೋಪ್‌ಖನೇಹ್‌ ಬೆಟ್ಟಗಳ ಪ್ರದೇಶದಲ್ಲಿ ವಿಮಾನ ಪತನವಾಗಿದೆ. ಇದುವರೆಗೆ ಸಾವು-ನೋವಿನ ಕುರಿತು ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ. ಆದರೆ, ಪತನಗೊಂಡಿರುವುದು ಭಾರತದ ವಿಮಾನವಲ್ಲ ಎಂದು ಭಾರತದ ನಾಗರಿಕ ವಿಮಾನಯಾನ ಸಚಿವಾಲಯವು ಸ್ಪಷ್ಟಪಡಿಸಿದೆ.

ಇದನ್ನೂ ಓದಿ: ಶಿವಕುಮಾರ ಮಹಾಸ್ವಾಮಿಗಳ ಸ್ಮರಣಾರ್ಥ ನಿರ್ಮಿಸಿರುವ “ಸ್ಮೃತಿ ವನ” ಉದ್ಘಾಟಿಸಿದ ಸಿಎಂ

ಸದ್ಯ ಭಾರತದ ವಿಮಾನ ಪತನ ಎಂದು ಹೇಳಲಾಗುತ್ತಿರುವ ವಿಮಾನವು ಭಾರತದಲ್ಲ ಹಾಗೂ ಭಾರತದಲ್ಲಿ ನೋಂದಣಿಯಾದ ವಿಮಾನವಲ್ಲ. ಅದು ಮೊರಾಕ್ಕೋದಲ್ಲಿ ನೋಂದಣಿಯಾದ ಸಣ್ಣ ವಿಮಾನವಾಗಿದೆ ಎಂದು ನಾಗರಿಕ ವಿಮಾನಯಾನ ಸಚಿವಾಲಯವು ಮಾಹಿತಿ ನೀಡಿದೆ. ಅಲ್ಲದೆ, ಈ ಕುರಿತು ಹೆಚ್ಚಿನ ಮಾಹಿತಿ ಲಭ್ಯವಾಗಬೇಕಿದೆ ಎಂದು ಕೂಡ ಸ್ಪಷ್ಟಪಡಿಸಿದೆ.

RELATED ARTICLES

Related Articles

TRENDING ARTICLES